Home Uncategorized ವಿವಿ ಪಠ್ಯದಲ್ಲಿ ನಟ ಪುನೀತ್‌ ಜೀವನಗಾಥೆ: ಇದು ಸರ್ಕಾರ ಕಲಾವಿದರಿಗೆ ಕೊಡುವ ಗೌರವದ ಸಂಕೇತ ಎಂದ...

ವಿವಿ ಪಠ್ಯದಲ್ಲಿ ನಟ ಪುನೀತ್‌ ಜೀವನಗಾಥೆ: ಇದು ಸರ್ಕಾರ ಕಲಾವಿದರಿಗೆ ಕೊಡುವ ಗೌರವದ ಸಂಕೇತ ಎಂದ ಬಿಜೆಪಿ!  

4
0
bengaluru

ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಕಳೆದ ವರ್ಷ ನಿಧನರಾದ ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನೀತ್‌ ರಾಜಕುಮಾರ್ ಜೀವನಗಾಥೆಯನ್ನು ರಾಜ್ಯ ಸರ್ಕಾರ ಸರ್ಕಾರ ಸೇರಿಸಿದೆ. ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಕಳೆದ ವರ್ಷ ನಿಧನರಾದ ಕನ್ನಡ ಚಿತ್ರರಂಗದ ಹೆಸರಾಂತ ನಟ ಪುನೀತ್‌ ರಾಜಕುಮಾರ್ ಜೀವನಗಾಥೆಯನ್ನು ರಾಜ್ಯ ಸರ್ಕಾರ ಸರ್ಕಾರ ಸೇರಿಸಿದೆ.

 ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದ ನೀನೇ ರಾಜಕುಮಾರ ಕೃತಿಯ ಒಂದು ಅದ್ಯಾಯವಾದ ‘ಲೋಹಿತ ಎಂಬ ಮರಿಮುದ್ದ ಎಂಬ ಆಯ್ದ ಭಾಗವನ್ನು  ಬಿಕಾಂ 3ನೇ ಸೆಮಿಸ್ಟರ್‌ನಲ್ಲಿ ಪಠ್ಯವಾಗಿ ಸೇರ್ಪಡೆಗೊಳಿಸಲಾಗಿದೆ.  

ನಟನೆ ಜೊತೆಗೆ ಸರಳತೆ, ಸಮಾಜ ಮುಖಿ ಕಾರ್ಯಗಳಿಂದ ಹಲವರಿಗೆ ಸ್ಪೂರ್ತಿಯಾಗಿದ್ದ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅವರ ಜೀವನಗಾಥೆಯನ್ನು ಪಠ್ಯದಲ್ಲಿ ಸೇರಿಸಬೇಕೆಂದು ಅಪ್ಪು ಅಭಿಮಾನಿಗಳು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ಶಿಕ್ಷಣ ಸಚಿವರಿಗೂ ಮನವಿ ಪತ್ರ ಸಲ್ಲಿಸಿದ್ದರು. ಅದರಂತೆ ಇದೀಗ ಅವರ ಬೇಡಿಕೆ ಈಡೇರಿದ್ದು, ಪುನೀತ್ ಜೀವನಗಾಥೆಯನ್ನು ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡಲಾಗಿದೆ.

ಈ ಕುರಿತು ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ಇದು  ಸರ್ಕಾರ ಕಲಾವಿದರಿಗೆ ಕೊಡುವ ಗೌರವದ ಸಂಕೇತ ಎಂದು ಬಿಜೆಪಿ ಹೇಳಿಕೊಂಡಿದೆ.ಬೆಂಗಳೂರು ವಿವಿ ಪಠ್ಯದಲ್ಲಿ ನಟ ಪುನೀತ್‌ ರಾಜಕುಮಾರ್ ಜೀವನಗಾಥೆಯನ್ನು ಶ್ರೀ @BSBommai ಸರ್ಕಾರ ಸೇರಿಸಿದೆ. ‘ಲೋಹಿತ್ ಎಂಬ ಮರಿಮುದ್ದ’ ಎಂಬ ಆಯ್ದ ಭಾಗವನ್ನು ಬಿಕಾಂ 3ನೇ ಸೆಮಿಸ್ಟರ್‌ನಲ್ಲಿ ಪಠ್ಯವಾಗಿ ಸೇರ್ಪಡೆಗೊಳಿಸಲಾಗಿದೆ. ಇದು ಬಿಜೆಪಿ ಸರ್ಕಾರ ಕಲಾವಿದರಿಗೆ ಕೊಡುವ ಗೌರವದ ಸಂಕೇತ.#BJPYeBharavase pic.twitter.com/uxFkIGp4Js— BJP Karnataka (@BJP4Karnataka) December 25, 2022

bengaluru
bengaluru

LEAVE A REPLY

Please enter your comment!
Please enter your name here