Home Uncategorized ವಿಶ್ವಕಪ್ ಟ್ರೋಫಿಯೊಂದಿಗೆ ಊಟ, ಅದರ ಜೊತೆಯೇ ನಿದ್ದೆ; ಇದು ಮೆಸ್ಸಿಯ ದಿನಚರಿ; ಫೋಟೋ ನೋಡಿ

ವಿಶ್ವಕಪ್ ಟ್ರೋಫಿಯೊಂದಿಗೆ ಊಟ, ಅದರ ಜೊತೆಯೇ ನಿದ್ದೆ; ಇದು ಮೆಸ್ಸಿಯ ದಿನಚರಿ; ಫೋಟೋ ನೋಡಿ

11
0
Advertisement
bengaluru

ಫಿಫಾ ವಿಶ್ವಕಪ್ (Fifa World Cup 2022) ಫೈನಲ್ ಮುಗಿದು ಮೂರು ದಿನ ಕಳೆದರೂ ವಿಶ್ವದಾದ್ಯಂತ ಆಟಗಾರರು ಹಾಗೂ ಫುಟ್ಬಾಲ್ ಅಭಿಮಾನಿಗಳಿಗೆ ವಿಶ್ವಕಪ್ ಜ್ವರ ಇನ್ನೂ ವಾಸಿಯಾಗಿಲ್ಲ. ಅದರಲ್ಲೂ ಬರೋಬ್ಬರಿ 36 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿರುವ ಅರ್ಜೆಂಟೀನಾದಲ್ಲಂತ್ತೂ (Argentina) ಕ್ರಿಸ್​ಮಸ್​ಗೂ ಮುನ್ನವೇ ಹಬ್ಬ ಆರಂಭವಾಗಿದೆ. ತಂಡ ವಿಶ್ವಕಪ್ ಗೆದ್ದ ಬಳಿಕ ಇಡೀ ಅರ್ಜೇಂಟಿನಾ ಸಂತಸದ ಅಲೆಯಲ್ಲಿ ತೇಲಿತ್ತು. ಹಾಗೆಯೇ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಅರ್ಜೇಂಟಿನಾ ಪ್ರಜೆಗಳು ಒಂದೆಡೆ ಸೇರಿ ಇಡೀ ರಾತ್ರಿ ಕುಣಿದು ಕುಪ್ಪಳಿಸಿದ್ದರು. ಅಭಿಮಾನಿಗಳೇ ಈ ರೀತಿಯಾಗಿ ಸಂಭ್ರಮಿಸುತ್ತಿದ್ದರೆ, ಇನ್ನ ಈ ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ತಂಡದ ಸ್ಟಾರ್ ಆಟಗಾರ ಹಾಗೂ ನಾಯಕ ಲಿಯೋನೆಲ್ ಮೆಸ್ಸಿ (Lionel Messi) ಅವರ ಸಂಭ್ರಮಕ್ಕೆ ಪಾರವೇ ಇಲ್ಲದಂತ್ತಾಗಿದೆ. ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದ ಸಂಭ್ರಮದ ವಿಡಿಯೋ ಹಾಗೂ ಫೋಟೋಗಳನ್ನು ಮೆಸ್ಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ವಿಶ್ವಕಪ್ ಟ್ರೋಫಿಯೊಂದಿಗೆ (FIFA World Cup trophy) ನಿದ್ರಿಸುತ್ತಿರುವ ಫೋಟೋ ಈಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.

ಮೆಸ್ಸಿ ತಂಡದ ವಿಶ್ವಕಪ್ ಗೆಲುವನ್ನು ಇಡೀ ಅರ್ಜೇಂಟಿನಾ ಸಂಭ್ರಮಿಸಿದ್ದು ಹೀಗೆ; ಫೋಟೋ ನೋಡಿ

ಮೆಸ್ಸಿಗೆ ಸರ್ವಸ್ವವೂ ವಿಶ್ವಕಪ್ ಟ್ರೋಫಿಯೇ

ಕಪ್ ಗೆದ್ದು 48 ಗಂಟೆಗಳೂ ಕಳೆದಿದ್ದರೂ ಕೂಡ ಮೆಸ್ಸಿಗೆ ಟ್ರೋಫಿಯನ್ನು ಬಿಟ್ಟು ಹೋಗುವ ಮನಸ್ಸಾಗಿಲ್ಲ. ಮೆಸ್ಸಿ ಊಟ ಮಾಡುವುದು ಟ್ರೋಫಿಯೊಂದಿಗೆ ಹಾಗೆಯೇ ಮೆಸ್ಸಿ ಮಲಗುವಾಗಲು ಸಹ ಟ್ರೋಫಿಯನ್ನು ತನ್ನ ಪಕ್ಕದಲ್ಲಿ ಇಟ್ಟುಕೊಂಡು ನಿದ್ರಿಸುತ್ತಿದ್ದಾರೆ. ಈ ಫೋಟೋಗಳನ್ನು ಮೆಸ್ಸಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಮೆಸ್ಸಿ ಅಭಿಮಾನಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಲೈಕ್‌ಗಳು ಬಂದಿವೆ.

ವಿಶ್ವ ವಿಜೇತರಿಗೆ ಅದ್ಧೂರಿ ಸ್ವಾಗತ

ಕತಾರ್​ನಿಂದ ಸ್ವದೇಶಕ್ಕೆ ಮರಳಿದ ಅರ್ಜೇಂಟಿನಾ ತಂಡದ ಆಟಗಾರರು ತೆರೆದ ಬಸ್​ನಲ್ಲಿ ತವರಿನ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ಇವರನ್ನು ಸ್ವಾಗತಿಸಲು ಕಿಲೋ ಮೀಟರ್​ನಷ್ಟು ಉದ್ದಕ್ಕೆ ಜನರು ಸಾಲಾಗಿ ನಿಂತಿದ್ದರು. ಎಲ್ಲ ಕಟ್ಟಡಗಳ ಮೇಲೂ ಆರ್ಜೆಂಟೀನಾದ ಬೃಹತ್‌ ಜೆರ್ಸಿ, ಎಲ್ಲರ ಮೈಮೇಲೂ ಆರ್ಜೆಂಟೀನಾದ ಫ‌ುಟ್‌ಬಾಲ್‌ ದಿರಿಸು, ಕೈಯಲ್ಲಿ ರಾಷ್ಟ್ರಧ್ವಜ ಕ್ರಿಸ್‌ಮಸ್‌ಗೂ ಮೊದಲೇ ಕಂಡುಬಂದ ಈ ಸಂಭ್ರಮದ ವಾತಾವರಣ ಆರ್ಜೆಂಟೀನಾದಲ್ಲಿ ಮಹಾಅಲೆಯನ್ನೇ ಎಬ್ಬಿಸಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

VIDEO THREAD → Live Updates: The Argentina National Team airplane has landed in Argentina!

Captain Lionel Messi is the first one to come out and present the World Cup trophy to the fans/press present at the airport.pic.twitter.com/UxGcGDsNdj

— infosfcb  (@infosfcb) December 20, 2022

ಫೈನಲ್​ನಲ್ಲಿ ಫ್ರಾನ್ಸ್​ಗೆ ಸೋಲು

ಫೈನಲ್ ಪಂದ್ಯದ ಮಟ್ಟಿಗೆ ಈ ಪಂದ್ಯ ರೋಚಕವಾಗಿತ್ತು. ಮೊದಲಾರ್ಧದಲ್ಲಿ ಅರ್ಜೆಂಟೀನಾ ಎರಡು ಗೋಲು ಗಳಿಸುವ ಮೂಲಕ ಮುನ್ನಡೆ ಸಾಧಿಸಿತು. 23ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಮೆಸ್ಸಿ ಗೋಲಾಗಿ ಪರಿವರ್ತಿಸಿ ಅರ್ಜೆಂಟೀನಾಗೆ ಮುನ್ನಡೆ ತಂದುಕೊಟ್ಟರು. ನಂತರ 36ನೇ ನಿಮಿಷದಲ್ಲಿ ಏಂಜೆಲ್ ಡಿಮಾರಿಯಾ ಗೋಲು ಬಾರಿಸುವುದರೊಂದಿಗೆ ಅರ್ಜೆಂಟೀನಾಕ್ಕೆ 2-0 ಗೋಲುಗಳ ಮುನ್ನಡೆ ತಂದುಕೊಟ್ಟರು. ಹೀಗಾಗಿ ಪಂದ್ಯವನ್ನು ಮೆಸ್ಸಿಯ ತಂಡ ಭಾಗಶಃ ಗೆದ್ದಂತೆಯೇ ತೋರುತ್ತಿತ್ತು. ಆದರೆ ಫ್ರೆಂಚ್ ಸ್ಟಾರ್ ಕೈಲಿಯನ್ ಎಂಬಪ್ಪೆ 80 ಮತ್ತು 81 ನೇ ನಿಮಿಷಗಳಲ್ಲಿ ಎರಡು ಗೋಲುಗಳನ್ನು ಗಳಿಸಿ ತಮ್ಮ ತಂಡವನ್ನು ಸಮಸ್ಥಿತಿಗೆ ತಂದರು. ಇದರ ನಂತರ, ಹೆಚ್ಚುವರಿ ಸಮಯದಲ್ಲಿ, ಮೆಸ್ಸಿ 108 ನೇ ನಿಮಿಷದಲ್ಲಿ ಗೋಲು ಗಳಿಸಿ ಅರ್ಜೆಂಟೀನಾಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ 10 ನಿಮಿಷಗಳ ನಂತರ ಎಂಬಾಪ್ಪೆ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ಸ್ಕೋರ್ ಅನ್ನು ಸಮಗೊಳಿಸಿದರು. ಅಂತಿಮವಾಗಿ ಪೆನಾಲ್ಟಿ ಶೂಟೌಟ್​ನಲ್ಲಿ ಅರ್ಜೆಂಟೀನಾ 4-2 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿ ವಿಶ್ವಕಪ್ ಎತ್ತಿಹಿಡಿಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


bengaluru

LEAVE A REPLY

Please enter your comment!
Please enter your name here