Home Uncategorized ವಿಶ್ವದಾಖಲೆಯ ಯೋಗಥಾನ್-2023ಕ್ಕೆ ಬೆಂಗಳೂರಿನಲ್ಲಿ ರಾಜ್ಯಪಾಲ ಗೆಹ್ಲೋಟ್ ಚಾಲನೆ

ವಿಶ್ವದಾಖಲೆಯ ಯೋಗಥಾನ್-2023ಕ್ಕೆ ಬೆಂಗಳೂರಿನಲ್ಲಿ ರಾಜ್ಯಪಾಲ ಗೆಹ್ಲೋಟ್ ಚಾಲನೆ

31
0

ರಾಷ್ಟ್ರೀಯ ಯುವ ದಿನದ ಅಂಗವಾಗಿ ರಾಜ್ಯದಾದ್ಯಂತ ಯೋಗಥಾನ್ ಆಯೋಜಿಸಲಾಗಿದ್ದು,  ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾನುವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಂಗಳೂರು: ರಾಷ್ಟ್ರೀಯ ಯುವ ದಿನದ ಅಂಗವಾಗಿ ರಾಜ್ಯದಾದ್ಯಂತ ಯೋಗಥಾನ್ ಆಯೋಜಿಸಲಾಗಿದ್ದು,  ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾನುವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಯೋಗಪಟುಗಳಿಗೆ ಕನ್ನಡದಲ್ಲಿ ಶುಭಾಶಯ ಕೋರಿ ಮಾತು ಆರಂಭಿಸಿದ ರಾಜ್ಯಪಾಲರು ‘ಯೋಗ ಭಾರತೀಯ ಸಂಸ್ಕೃತಿ. ನಮ್ಮ ಸಂಸ್ಕ್ರತಿಯನ್ನು ರಕ್ಷಿಸುವ ಕೆಲಸ ಮಾಡಬೇಕು. ಯೋಗ ಕೇವಲ ವ್ಯಾಯಾಮವಲ್ಲ. ಅದು ಪರಿಸರದೊಂದಿಗೆ ಬೆರೆತು ನಡೆಸುವ ಒಂದು ಪ್ರಕ್ರಿಯೆ. ಕರ್ನಾಟಕ ಸರ್ಕಾರ ಯೋಗ ತರಬೇತಿ ಶಾಲೆಗಳನ್ನು ತೆರೆಯಲು, ಯೋಗಕ್ಕೆ ಪ್ರೇರೇಪಣೆ ನೀಡಲು ಸಾಕಷ್ಟು ಕೆಲಸ ಮಾಡುತ್ತಿದೆ. ಯುವಜನತೆ ನಮ್ಮ ಸಂಸ್ಕೃತಿಗಳಾದ ಯೋಗ, ವ್ಯಾಯಾಮದಂತಹ ಚಟುವಟಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಇಂದಿನ ಕಾರ್ಯಕ್ರಮದಿಂದ ಗಿನ್ನಿಸ್ ರೆಕಾರ್ಡ್ ಮಾಡಲು ಹೊರಟಿರುವ ಎಲ್ಲರಿಗೂ ಶುಭಾಶಯ ಎಂದು ಹೇಳಿದರು.

ಬಳಿತ ಮಾತನಾಡಿದ ಕ್ರೀಡಾ ಹಾಗೂ ರೇಷ್ಮೆ ಇಲಾಖೆ ಸಚಿವ ನಾರಾಯಣ ಗೌಡ ಅವರು, ಬೆಂಗಳೂರು ನಗರ ಜಿಲ್ಲಾ ಡಿಸಿ ದಯಾನಂದ್ ಭಾಗಿಯಾಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಯೋಗಥಾನ್ ನಡೆಯುತ್ತಿದ್ದು, ರಾಜ್ಯಾದ್ಯಂತ ಏಕಕಾಲದಲ್ಲಿ ಈ ಯೋಗಥಾನ್‌ಗೆ ಚಾಲನೆ ನೀಡಲಾಗಿದೆ. ಧಾರವಾಡ, ಹಾವೇರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಚಾಲನೆ ನೀಡಲಾಗಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿರುವ ಈ ಯೋಗಥಾನ್ ವಿಶ್ವದ ಅತಿ ದೊಡ್ಡ ಯೋಗಥಾನ್ ಎನಿಸಿದೆ. ಈ ಕಾರ್ಯಕ್ರಮದಲ್ಲಿ ನಗರದ ಹಲವು ಶಾಲಾ ಮಕ್ಕಳು ಭಾಗಿಯಾಗಿದ್ದಾರೆ. ಕಂಠಿರವದಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಯೋಗಥಾನ್ ನಡೆಯುತ್ತಿದೆ.

LEAVE A REPLY

Please enter your comment!
Please enter your name here