Home Uncategorized ವೈಟ್‌ಫೀಲ್ಡ್ ಲೈನ್‌ನ 12 ನಿಲ್ದಾಣಗಳ ಸುತ್ತ ಐದು ಕಿ.ಮೀವರೆಗೆ ಫೀಡರ್ ಬಸ್ ಸೇವೆ, ಕೆಲವು ನಿಲ್ದಾಣಗಳ...

ವೈಟ್‌ಫೀಲ್ಡ್ ಲೈನ್‌ನ 12 ನಿಲ್ದಾಣಗಳ ಸುತ್ತ ಐದು ಕಿ.ಮೀವರೆಗೆ ಫೀಡರ್ ಬಸ್ ಸೇವೆ, ಕೆಲವು ನಿಲ್ದಾಣಗಳ ಮರುನಾಮಕರಣ

39
0

ವೈಟ್‌ಫೀಲ್ಡ್-ಕೆಆರ್ ಪುರಂ ಸ್ಟ್ರೆಚ್‌ನ ರೀಚ್-I ವಿಸ್ತರಣೆಯನ್ನು ಮುಂದಿನ ತಿಂಗಳು ಪ್ರಾರಂಭಿಸಲಾಗುವುದು. ಈ ಬೆನ್ನಲ್ಲೇ, ಬಿಎಂಆರ್‌ಸಿಎಲ್ ಎಲ್ಲಾ 12 ನಿಲ್ದಾಣಗಳ ಸುತ್ತಲೂ ಕನಿಷ್ಠ 5 ಕಿಮೀವರೆಗೆ ಫೀಡರ್ ಬಸ್ ಸೇವೆಗಳನ್ನು ಒದಗಿಸಲು ಬಿಎಂಟಿಸಿಯೊಂದಿಗೆ ಕೆಲಸ ಮಾಡುತ್ತಿದೆ.  ಬೆಂಗಳೂರು: ವೈಟ್‌ಫೀಲ್ಡ್-ಕೆಆರ್ ಪುರಂ ಸ್ಟ್ರೆಚ್‌ನ ರೀಚ್-I ವಿಸ್ತರಣೆಯನ್ನು ಮುಂದಿನ ತಿಂಗಳು ಪ್ರಾರಂಭಿಸಲಾಗುವುದು. ಈ ಬೆನ್ನಲ್ಲೇ, ಬಿಎಂಆರ್‌ಸಿಎಲ್ ಎಲ್ಲಾ 12 ನಿಲ್ದಾಣಗಳ ಸುತ್ತಲೂ ಕನಿಷ್ಠ 5 ಕಿಮೀವರೆಗೆ ಫೀಡರ್ ಬಸ್ ಸೇವೆಗಳನ್ನು ಒದಗಿಸಲು ಬಿಎಂಟಿಸಿಯೊಂದಿಗೆ ಕೆಲಸ ಮಾಡುತ್ತಿದೆ. ಸಾರ್ವಜನಿಕರ ಬೇಡಿಕೆಗೆ ಮಣಿದು, ಈ ಮಾರ್ಗದಲ್ಲಿರುವ ಕೆಲವು ನಿಲ್ದಾಣಗಳನ್ನು ಮರುನಾಮಕರಣ ಮಾಡಲು ಸಹ ಯೋಜಿಸುತ್ತಿದೆ.

ಹೊಸ ಮಾರ್ಗದಲ್ಲಿ ಸಂಪರ್ಕಕ್ಕೆ ಆದ್ಯತೆ ನೀಡಲಾಗಿದೆ ಎಂದು ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಟಿಎನ್‌ಐಇಗೆ ತಿಳಿಸಿದ್ದಾರೆ. ‘ಪ್ರತಿ ಮೆಟ್ರೊ ನಿಲ್ದಾಣದ ಬಳಿ 5 ಕಿಲೋಮೀಟರ್‌ಗೆ ಫೀಡರ್ ಬಸ್‌ಗಳನ್ನು ಒದಗಿಸಲು ನಾವು ಬಿಎಂಟಿಸಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಈ ವ್ಯಾಪ್ತಿಯಲ್ಲಿರುವ ಪ್ರಯಾಣಿಕರು ಸಾಮಾನ್ಯವಾಗಿ ಮೆಟ್ರೋವನ್ನು ಬಳಸುತ್ತಾರೆ’ ಎಂದು ಅವರು ಹೇಳಿದರು.

ಹೂಡಿ ನಿಲ್ದಾಣ

ಈ ಸಂಬಂಧ ಫೆಬ್ರುವರಿ 27 ಅಥವಾ 28 ರಂದು ಬಿಎಂಟಿಸಿಗೆ ಪತ್ರ ಕಳುಹಿಸಬಹುದು. ‘ನಾವು ಈಗಾಗಲೇ ಚರ್ಚೆ ನಡೆಸಿದ್ದೇವೆ ಮತ್ತು ಔಪಚಾರಿಕ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ’  ಎಂದು ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಔಪಚಾರಿಕ ಪ್ರಕ್ರಿಯೆಗೂ ಮುನ್ನ, ಸಾರ್ವಜನಿಕರ ಬೇಡಿಕೆಯಿಂದಾಗಿ ಕೆಲವು ನಿಲ್ದಾಣಗಳ ಹೆಸರನ್ನು ಬದಲಾಯಿಸಲಾಗುವುದು. ಆದರೆ, ಹೆಸರುಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು. ‘ನಾವು ಹೆಸರು ಬದಲಾವಣೆಯ ಒಪ್ಪಿಗೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುತ್ತೇವೆ’ ಎಂದು ಎಂಡಿ ಹೇಳಿದರು.

ವೈಟ್‌ಫೀಲ್ಡ್ ರೈಸಿಂಗ್‌ನ ಸದಸ್ಯ ಪ್ರವೀರ್ ಬಗ್ರೋಡಿಯಾ ಮೂರು ವರ್ಷಗಳ ಹಿಂದೆಯೇ ಬಿಎಂಆರ್‌ಸಿಎಲ್‌ಗೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಟಿಎನ್ಐಇ ಜೊತೆಗೆ ಮಾತನಾಡಿದ ಅವರು, ‘ಬಿಎಂಆರ್‌ಸಿಎಲ್ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣ ಮತ್ತು ಡಿಪೋವನ್ನು ಕಾಡುಗೋಡಿ ಎಂದು ಮರುನಾಮಕರಣ ಮಾಡಬೇಕು ಮತ್ತು ಕಾಡುಗೋಡಿಯನ್ನು ಹೋಪ್ ಫಾರ್ಮ್ ಅಥವಾ ಟ್ರೀ ಪಾರ್ಕ್ ಎಂದು ಮರುನಾಮಕರಣ ಮಾಡಬೇಕು ಎಂದರು. 

ಪಕ್ಕದ ರೈಲು ನಿಲ್ದಾಣ ಕೂಡ ವೈಟ್‌ಫೀಲ್ಡ್ ಆಗಿರುವುದರಿಂದ ಆ ಹೆಸರು ಅಗತ್ಯವಿಲಲ್. ಈ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣವು ವೈಟ್‌ಫೀಲ್ಡ್ ಪೊಲೀಸ್ ಠಾಣೆ ಮತ್ತು ವೈಟ್‌ಫೀಲ್ಡ್ ಪೋಸ್ಟ್ ಆಫೀಸ್‌ನಿಂದ 3.5 ಕಿಮೀ ದೂರದಲ್ಲಿದೆ. ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣವನ್ನು ತಲುಪಲು ಬಸ್ ಮೂಲಕ ಹೋಗಬೇಕು ಎಂದು ಬಗ್ರೋಡಿಯಾ ಹೇಳಿದರು.

ವೈಟ್‌ಫೀಲ್ಡ್‌ನ ಪ್ರಮುಖ ಪ್ರದೇಶಗಳಿಗೆ ಮೆಟ್ರೋ ಸೇವೆ ನೀಡದ ಕಾರಣ ಗಾಂಧಿಪುರ, ಇಮ್ಮಡಿಹಳ್ಳಿ, ಹಗದೂರು, ರಾಮಗೊಂಡನಹಳ್ಳಿ, ಸಿದಾಪುರ, ಬೋರ್‌ವೆಲ್ ರಸ್ತೆ ಮತ್ತಿತರ ಕಡೆಗಳಿಗೆ ಫೀಡರ್ ಬಸ್‌ಗಳನ್ನು ಓಡಿಸುವುದು ಬಿಎಂಟಿಸಿಗೆ ಮುಖ್ಯವಾಗಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here