Home Uncategorized ಶಾರುಖ್​​ ಖಾನ್ ಆತನ ಮಗಳೊಂದಿಗೆ ಪಠಾಣ್​​ ಸಿನಿಮಾ ವೀಕ್ಷಿಸಿ, ಫೋಟೊ ಅಪ್ಲೋಡ್​​ ಮಾಡಲಿ: ಮಧ್ಯಪ್ರದೇಶದ ಸ್ಪೀಕರ್​​

ಶಾರುಖ್​​ ಖಾನ್ ಆತನ ಮಗಳೊಂದಿಗೆ ಪಠಾಣ್​​ ಸಿನಿಮಾ ವೀಕ್ಷಿಸಿ, ಫೋಟೊ ಅಪ್ಲೋಡ್​​ ಮಾಡಲಿ: ಮಧ್ಯಪ್ರದೇಶದ ಸ್ಪೀಕರ್​​

2
0
bengaluru

ಭೋಪಾಲ್: ಶಾರುಖ್ ಖಾನ್ (Shah Rukh Khan) ದೀಪಿಕಾ ಪಡುಕೋಣೆ (Deepika padukone) ಪ್ರಮುಖ ಪಾತ್ರದಲ್ಲಿರುವ ಪಠಾಣ್ (Pathaan) ಚಿತ್ರದ ಬಗ್ಗೆ ವಿವಾದಗಳು ಭುಗಿಲೆದ್ದಿದ್ದು, ಮಧ್ಯಪ್ರದೇಶದ (Madhya Pradesh) ಗೃಹ ಸಚಿವ ನರೋತ್ತಮ್ ಮಿಶ್ರಾ  ಪಠಾಣ್ ನಿರ್ಮಾಪಕರಿಗೆ ಬೆದರಿಕೆಯೊಡ್ಡಿದ ಬೆನ್ನಲ್ಲೇ ಇದೀಗ ಅಲ್ಲಿನ ವಿಧಾನಸಭೆಯ ಸ್ಪೀಕರ್ ಗಿರೀಶ್ ಗೌತಮ್ (Girish Gautam) ಕೂಡಾ ಸಿನಿಮಾವನ್ನು ವಿರೋಧಿಸಿ ಮಾತನಾಡಿದ್ದಾರೆ. ಶಾರುಖ್ ಈ ಚಿತ್ರವನ್ನು ತನ್ನ ಮಗಳೊಂದಿಗೆ ನೋಡಬೇಕು. ಆತ ತಾನು ತನ್ನ ಮಗಳ ಜೊತೆ ಸಿನಿಮಾ ನೋಡುತ್ತಿದ್ದೇನೆ ಎಂದು ಫೋಟೊ ಅಪ್​​ಲೋಡ್ ಮಾಡಿ ಅದನ್ನು ಜಗತ್ತಿಗೆ ತಿಳಿಸಬೇಕು ಎಂದಿದ್ದಾರೆ ಸ್ಪೀಕರ್.  ಇದನ್ನು ಖಂಡಿತಾ ಅನುಮತಿಸಬಾರದು. ನಿಮಗೆ ಅನಿಸಿದ್ದನ್ನು ನೀವು ಮಾಡುತ್ತೀರಾ. ಪ್ರವಾದಿ ಮುಹಮ್ಮದ್ ಅವರ ಕುರಿತು ಅಂತಹ ಒಂದು ಚಲನಚಿತ್ರವನ್ನು ಮಾಡಿ, ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಿಡುಗಡೆ ಮಾಡಿ. ಪ್ರಪಂಚದಾದ್ಯಂತ ರಕ್ತಪಾತವಾಗುತ್ತದೆ ಎಂದು ನಾನಿಲ್ಲಿ ಹೇಳಬಯಸುತ್ತೇನೆ. ಥಿಯೇಟರ್‌ಗಳಲ್ಲಿ “ಪಠಾಣ್” ಅನ್ನು ನಿಷೇಧಿಸುವ ಬೇಡಿಕೆಗಳ ನಡುವೆ ಇಂದು ಪ್ರಾರಂಭವಾಗುವ ಐದು ದಿನಗಳ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಗೌತಮ್ ಈ ಮಾತನ್ನು ಹೇಳಿದ್ದಾರೆ. ಈ ವಿಚಾರವನ್ನು ಆಡಳಿತಾರೂಢ ಬಿಜೆಪಿಯು ವಿಧಾನಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ. ಗಿರೀಶ್ ಗೌತಮ್, ಯಾವುದೇ ಸಮುದಾಯವನ್ನು ಸ್ಪಷ್ಟವಾಗಿ ಹೆಸರಿಸದೆ, “ಸನಾತನಿಗಳು” (ಹಿಂದೂಗಳು) ಜೊತೆಗೆ ಹಲವು ಸಂಗತಿಗಳನ್ನು ಹೋಲಿಕೆ ಮಾಡಿದ್ದಾರೆ.

ನೀವು ನೋಡಿರಬೇಕು ಮತ್ತು ನಾನು ಅದನ್ನು ಒಪ್ಪುವುದಿಲ್ಲ, ಕೆನಡಾದಲ್ಲಿ ಪ್ರವಾದಿಯವರಿಗೆ ಸಂಬಂಧಿಸಿದ ಏನೋ ಸಂಭವಿಸಿದಾಗ ಮುಂಬೈ ಉರಿದಿತ್ತು. ನಾವು ₹ 100 ಕೋಟಿ ನಷ್ಟ ಅನುಭವಿಸಿದ್ದೇವೆ. ಈಗ, ಹಿಜಾಬ್ ವಿರುದ್ಧ ಪ್ರತಿಭಟನೆಗಳು ಬಂದಾಗ, ಅವರು ಇರಾನ್‌ನ ಸಮಸ್ಯೆ . ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಅಂತಾರೆ. ಕೆನಡಾದಲ್ಲಿ ಇದು ಸಂಭವಿಸಿದಾಗ ಮತ್ತು ನೀವು ವಸ್ತುಗಳನ್ನು ಬೆಂಕಿ ಹಚ್ಚಲು ಬಯಸಿದಾಗ ಅದು ನಿಮಗೆ ಸಂಬಂಧಿಸಿದೆ, ಮತ್ತು ಇರಾನ್‌ನಲ್ಲಿ ಮಹಿಳೆಯರು ಹಿಜಾಬ್ ಅನ್ನು ಧರಿಸುವುದಿಲ್ಲ ಎಂದು ಹೇಳುವ ಮೂಲಕ ಜಿಹಾದ್ ಅನ್ನು ಪ್ರಾರಂಭಿಸಿದಾಗ, ನೀವು ಪದೇ ಪದೇ ಟಿವಿಯಲ್ಲಿ ಹೇಳುತ್ತೀರಿ ಇದು ಇರಾನ್‌ನ ವಿಷಯ ಮತ್ತು ನಮ್ಮದಲ್ಲ . ನೀವು ವಿಧ್ವಂಸಕರಾಗಲು ಬಯಸಿದಾಗ ಅದು ಜಗತ್ತಿನಲ್ಲಿ ಎಲ್ಲೇ ನಡೆದರೂ ನೀವು ಅದನ್ನು ಬೆಂಬಲಿಸುತ್ತೀರಿ ಮತ್ತು ರಚನಾತ್ಮಕ ಏನಾದರೂ ಇದ್ದಾಗ ಅದು ಪ್ರಪಂಚದ ಉಳಿದ ಸಮಸ್ಯೆ ಮತ್ತು ನಮ್ಮದಲ್ಲ ಎಂದು ಹೇಳುತ್ತೀರಿ. ಇದು ಇನ್ಮುಂದೆ ಕೆಲಸ ಮಾಡುವುದಿಲ್ಲ.
ಯಾಕೆಂದರೆ ಈಗ ಸನಾತನಿಗಳು ಜಾಗೃತರಾಗಿದ್ದಾರೆ. ಜಾಗೃತ ಸನಾತನಿಗಳು ಅವರಂತೆ ಹಿಂಸಾತ್ಮಕವಾಗಿರುವುದಿಲ್ಲ. ಆದ್ದರಿಂದ ನಾವು ಹೆಚ್ಚು ಸಹಿಷ್ಣುರು ಎಂದು ಭಾಸವಾಗುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ನಾವು ಸೂಚಿಸಿದ ಬದಲಾವಣೆ ಮಾಡಿ’; ಮುಸ್ಲಿಂ ಸಮುದಾಯದವರಿಂದಲೂ ‘ಪಠಾಣ್​’ ಚಿತ್ರಕ್ಕೆ ವಿರೋಧ

ವಿರೋಧ ಪಕ್ಷದ ನಾಯಕ ಡಾ.ಗೋವಿಂದ್ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಈ ಚಿತ್ರವನ್ನು ವಿರೋಧಿಸಿದ್ದಾರೆ, ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

bengaluru

ಇದು ಪಠಾಣ್ ಬಗ್ಗೆ ಅಲ್ಲ, ಆದರೆ ಪರಿಧಾನ್ (ಬಟ್ಟೆ) ಬಗ್ಗೆ ಎಂದು ಸುರೇಶ್ ಪಚೌರಿ ಹೇಳಿದರು. ಭಾರತೀಯ ಸಂಸ್ಕೃತಿಯಲ್ಲಿ, ಯಾವುದೇ ಮಹಿಳೆ ಅಂತಹ ಬಟ್ಟೆಗಳನ್ನು ಧರಿಸುವುದು ಮತ್ತು ಆ ದೃಶ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ಯಾರೂ ಅನುಮತಿಸುವುದಿಲ್ಲ, ಅದು ಹಿಂದೂಗಳು, ಮುಸ್ಲಿಮರು ಅಥವಾ ಯಾವುದೇ ಧರ್ಮವನ್ನು ಪಾಲಿಸುವವರು ಇದನ್ನು ಅನುಮತಿಸುವುದಿಲ್ಲ ಎಂದಿದ್ದಾರೆ.

ಕಳೆದ ಬುಧವಾರ ನರೋತ್ತಮ್ ಮಿಶ್ರಾ ಪಠಾಣ್ ಚಿತ್ರದ ಹಾಡಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಡಿನಲ್ಲಿರುವ ವೇಷಭೂಷಣಗಳು ಆಕ್ಷೇಪಾರ್ಹವಾಗಿವೆ. ಹಾಡು ಕೊಳಕು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ: Shah Rukh Khan: ‘ಪಠಾಣ್​’ ಚಿತ್ರ ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್​ ಮಾಡಲಿದೆ? ಶಾರುಖ್​ ಖಾನ್​ಗೆ ನೇರ ಪ್ರಶ್ನೆ

‘ಪಠಾನ್’ ನಿರ್ಮಾಪಕರು ‘ಬೇಷರಂ ರಂಗ್’ ಹಾಡನ್ನು ಬಿಡುಗಡೆ ಮಾಡಿದ ಎರಡು ದಿನಗಳ ನಂತರ ನರೋತ್ತಮ್ ಮಿಶ್ರಾ ಅವರು ಹಾಡಿನ ಆಕ್ಷೇಪಾರ್ಹ ಭಾಗಗಳನ್ನು ಸರಿಪಡಿಸಲು ನಾನು ಚಿತ್ರದ ನಿರ್ಮಾಪಕರಿಗೆ ಸಲಹೆ ನೀಡುತ್ತೇನೆ. ಈ ಹಿಂದೆ ದೀಪಿಕಾ ಪಡುಕೋಣೆ ಜೆಎನ್‌ಯುನಲ್ಲಿ ‘ತುಕ್ಡೆ ತುಕ್ಡೆ ಗ್ಯಾಂಗ್’ ಬೆಂಬಲಕ್ಕೆ ನಿಂತಿದ್ದರು. ಅದು ಅವರ ಮನಸ್ಥಿತಿಯನ್ನು ಬಹಿರಂಗಪಡಿಸಿತು. ಹಾಡಿನ ಶೀರ್ಷಿಕೆ ‘ಬೇಷರಂ ರಂಗ್’ ಕೂಡಾ ಆಕ್ಷೇಪಾರ್ಹವಾಗಿದೆ. ಅಲ್ಲದೆ, ಕೇಸರಿ ಮತ್ತು ಹಸಿರು ಬಣ್ಣಗಳನ್ನು ವೇಷಭೂಷಣಗಳಲ್ಲಿ ಬಳಸಿರುವುದು ಆಕ್ಷೇಪಾರ್ಹವಾಗಿದೆ. ಇಲ್ಲಿ ಬದಲಾವಣೆಗಳನ್ನು ಮಾಡಬೇಕಾಗಿದೆ, ಇದನ್ನು ಸರಿಪಡಿಸದೇ ಇದ್ದರೆ ನಾವು ಮಧ್ಯಪ್ರದೇಶದಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲು ನಾವು ಬಿಡುವುದಿಲ್ಲ ಎಂದು ಮಿಶ್ರಾ ಹೇಳಿದ್ದಾರೆ.

bengaluru

LEAVE A REPLY

Please enter your comment!
Please enter your name here