Home Uncategorized ಶಾಲಾ ಆವರಣದೊಳಗೆ ಬಂದಿದ್ದ ಮಂಗನಿಗೆ ಬಿಸಿಯೂಟ: ಶಿಕ್ಷಕನ ಕೈ ತುತ್ತು ವಿಡಿಯೋ ವೈರಲ್

ಶಾಲಾ ಆವರಣದೊಳಗೆ ಬಂದಿದ್ದ ಮಂಗನಿಗೆ ಬಿಸಿಯೂಟ: ಶಿಕ್ಷಕನ ಕೈ ತುತ್ತು ವಿಡಿಯೋ ವೈರಲ್

37
0

ಕೊಪ್ಪಳ: ಸಾಮಾನ್ಯವಾಗಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಕೈ ತುತ್ತು ತಿನ್ನಿಸಿರುವ ಪ್ರಸಂಗವನ್ನು ನೋಡಿದ್ದೇವೆ. ಆದರೆ ಜಿಲ್ಲೆಯ ಕೊಪ್ಪಳ (Koppal) ತಾಲೂಕಿನ ಜಬ್ಬಲಗುಡ್ಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರೂಪದ ಘಟನೆ ನಡೆದಿದೆ. ಶಾಲಾ ಆವರಣದೊಳಗೆ ಬಂದಿದ್ದ ಮಂಗನಿಗೆ ಮುಖ್ಯ ಶಿಕ್ಷಕ ಖುದ್ದು ತಾನೇ ಬಿಸಿಯೂಟ ತಿನ್ನಿಸಿದ್ದಾರೆ. ಮುಖ್ಯ ಶಿಕ್ಷಕ ಇಬ್ರಾಹಿಂ ಮಂಗನಿಗೆ ಕೈ ತುತ್ತು ಮಾಡಿ ಊಟ ಮಾಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಖ್ಯ ಶಿಕ್ಷಕನ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ‌ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here