Home Uncategorized ಶಾಸಕ ಮಾಡಾಳ್​ ವಿರುಪಾಕ್ಷಪ್ಪ ವಿರುದ್ಧ ಕೇಳಿಬಂದ ಮತ್ತೊಂದು ಆರೋಪ: ಕೆಎಸ್'ಡಿಎಲ್ ನಿಂದ ರೂ.300 ಕೋಟಿ ಡೀಲ್?

ಶಾಸಕ ಮಾಡಾಳ್​ ವಿರುಪಾಕ್ಷಪ್ಪ ವಿರುದ್ಧ ಕೇಳಿಬಂದ ಮತ್ತೊಂದು ಆರೋಪ: ಕೆಎಸ್'ಡಿಎಲ್ ನಿಂದ ರೂ.300 ಕೋಟಿ ಡೀಲ್?

5
0
bengaluru

ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಅಧ್ಯಕ್ಷ ಹಾಗೂ ಬಿಜೆಪಿ ಶಾಸಕ ಕೆ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ತನಿಖೆ ಆರಂಭಿಸಿರುವ ಬೆನ್ನಲ್ಲೇ, ವಿರೂಪಾಕ್ಷಪ್ಪ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ. ಬೆಂಗಳೂರು: ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ಅಧ್ಯಕ್ಷ ಹಾಗೂ ಬಿಜೆಪಿ ಶಾಸಕ ಕೆ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ತನಿಖೆ ಆರಂಭಿಸಿರುವ ಬೆನ್ನಲ್ಲೇ, ವಿರೂಪಾಕ್ಷಪ್ಪ ವಿರುದ್ಧ ಮತ್ತೊಂದು ಆರೋಪ ಕೇಳಿ ಬಂದಿದೆ.

ವಿರೂಪಾಕ್ಷಪ್ಪ ಅವರು ಕೆಎಸ್’ಡಿಎಲ್ ನಿಂದ ರೂ.300 ಕೋಟಿ ಹಗರಣ ನಡೆಸಿದ್ದಾರೆಂಬ ಆರೋಪಗಳು ಕೇಳಿ ಬಂದಿದೆ.

ಕೆಎಸ್’ಡಿಎಲ್ ನೌಕರರ ಸಂಘದ ಅಧ್ಯಕ್ಷ ಶಿವಶಂಕರಪ್ಪ ಅವರು ಈ ಆರೋಪವನ್ನು ಮಾಡಿದ್ದು, ಎಂಡಿ ಸೇರಿದಂತೆ ಖರೀದಿ ಸಮಿತಿ ಸದಸ್ಯರ ಪಾತ್ರದ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಲ್ಲಿಯೂ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರೆ.

ಶಾಸಕ ವಿರೂಪಾಕ್ಷಪ್ಪ ಅವರು ಚುನಾವಣೆಗೆ ಮುನ್ನ ಸಾಧ್ಯವಾದಷ್ಟು ಹಣ ಗಳಿಸಲು ಟೆಂಡರ್ ಮತ್ತು ಬೆಲೆ ಏರಿಕೆಯೊಂದಿಗೆ ಖರೀದಿ ಆದೇಶಗಳಿಗೆ ಅನುಮತಿ ನೀಡಿದ್ದಾರೆ. “ಎಫ್’ವೈ 2023-24 ಕ್ಕೆ ಅನುಮೋದನೆಗಳನ್ನು ನೀಡಲಾಗಿದೆ. ಇದರಲ್ಲಿ ರೂ.300ಯಷ್ಟು ನಡೆದಿದ್ದು, ಗುತ್ತಿಗೆ ಪಡೆದಿರುವ ಕಂಪನಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

bengaluru

ಈ ನಡುವೆ ನಾಪತ್ತೆಯಾಗಿರುವ ವಿರೂಪಾಕ್ಷಪ್ಪ ಅವರಿಗೆ ನೋಟಿಸ್ ನೀಡಲು ಲೋಕಾಯುಕ್ತ ಪೊಲೀಸರು ಸಿದ್ಧತೆ ನಡೆಸಿದ್ದಾರೆಂದು ತಿಳಿದುಬಂದಿದೆ.

ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಅವರ ಕಚೇರಿ ಮತ್ತು ನಿವಾಸಕ್ಕೆ ನೋಟಿಸ್ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

bengaluru

LEAVE A REPLY

Please enter your comment!
Please enter your name here