Home ತುಮಕೂರು ಶಿರಾದಲ್ಲಿ ಶೇ.82.13 ಮತ್ತು ಆರ್‌.ಆರ್‌.ನಗರದಲ್ಲಿ ಶೇ.45.24 ಮತದಾನ ದಾಖಲು; ಕೋವಿಡ್‌ ಸೋಂಕಿತರಿಂದಲೂ ಮತದಾನ

ಶಿರಾದಲ್ಲಿ ಶೇ.82.13 ಮತ್ತು ಆರ್‌.ಆರ್‌.ನಗರದಲ್ಲಿ ಶೇ.45.24 ಮತದಾನ ದಾಖಲು; ಕೋವಿಡ್‌ ಸೋಂಕಿತರಿಂದಲೂ ಮತದಾನ

56
0

ಬೆಂಗಳೂರು:

ಭಾರಿ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಶಿರಾದಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಆರ್‌.ಆರ್‌.ನಗರದಲ್ಲಿ ಜನರು ಅತಿ ಕಡಿಮೆ ಉತ್ಸಾಹ ತೋರಿಸಿದ್ದಾರೆ.

WhatsApp Image 2020 11 03 at 19.53.55

ಮತದಾನದ ಅಂತ್ಯಗೊಂಡಾಗ ಶಿರಾದಲ್ಲಿ ಶೇ. 82.13 ಮತ್ತು ರಾಜರಾಜೇಶ್ವರಿ ನಗರದಲ್ಲಿ ಶೇ.45.24ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಇದೇ ಮೊದಲ ಬಾರಿಗೆ ಸಂಜೆ 5ರ ನಂತರ ಕೋವಿಡ್‌ ಸೋಂಕಿತರಿಗೆ ಕೂಡ ಅವಕಾಶ ಕಲ್ಪಿಸಲಾಗಿತ್ತು. ಶಿರಾ ಕ್ಷೇತ್ರದಲ್ಲಿ ಒಟ್ಟು 105 ಸೋಂಕಿತರು ಮತ ಚಲಾಯಿಸಿದ್ದಾರೆ. ಆರ್‌.ಆರ್.ನಗರದಲ್ಲಿ ಯಾವುದೇ ಸೋಂಕಿತರು ಮತ ಹಾಕಲು ಮುಂದೆ ಬಂದಿಲ್ಲ. ಈ ಸೋಂಕಿತರಿಗೆ ಮತಚಲಾಯಿಸಲು ಅವಕಾಶ ಕಲ್ಪಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತಗಟ್ಟೆ ಸಿಬ್ಬಂದಿ ಮತ್ತು ಮತ ಚಲಾಯಿಸುವವರು ಪಿಪಿಇ ಕಿಟ್‌ ಧರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಿದ್ದರು.

ಎರಡೂ ಕ್ಷೇತ್ರಗಳಿಂದ ಒಟ್ಟು 52 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ನಾಲ್ವರು ಮಹಿಳೆಯರು ಸೇರಿ 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಕ್ಷೇತ್ರಗಳಲ್ಲಿ ಒಟ್ಟು 6,77,926 ಮತದಾರರಿದ್ದು, 86 ಸೇವಾ ಮತದಾರರಿದ್ದಾರೆ.

ಶಾಂತಿಯುತ ಮತದಾನಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಹಾಗೂ ಕೋವಿಡ್‌ ಸೋಂಕಿನ ಬಾಧೆಯ ನಡುವೆಯೂ ತಮ್ಮ ಹಕ್ಕು ಚಲಾಯಿಸಿದ ಸೋಂಕಿತರಿಗೆ ಚುನಾವಣಾಧಿಕಾರಿ ಧನ್ಯವಾದ ಸಮರ್ಪಿಸಿದ್ದಾರೆ.

LEAVE A REPLY

Please enter your comment!
Please enter your name here