Home Uncategorized ಶಿವಮೊಗ್ಗ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಮನೆಯಲ್ಲಿ 40 ಕೆ.ಜಿ. ಗೋಮಾಂಸ ಪತ್ತೆ

ಶಿವಮೊಗ್ಗ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಮನೆಯಲ್ಲಿ 40 ಕೆ.ಜಿ. ಗೋಮಾಂಸ ಪತ್ತೆ

14
0

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶಾಮೀರ್ ಖಾನ್ ಮನೆಯ ಮೇಲೆ ತುಂಗನಗರ ಪೊಲೀಸರು ದಾಳಿ ನಡೆಸಿದ್ದು 40 ಕೆ.ಜಿ. ಗೋಮಾಂಸ ಪತ್ತೆಯಾಗಿದೆ. ಶಿವಮೊಗ್ಗದ ಟಿಪ್ಪುನಗರದ ಮೂರನೇ ತಿರುವಿನಲ್ಲಿರುವ ಶಾಮೀರ್ ಖಾನ್ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಮನೆಯಲ್ಲಿ ಗೋಮಾಂಸ ಮಾರಾಟ ಮಾಡುವ ಉದ್ದೇಶದಿಂದ ಪಾಲಿಕೆ ಸದಸ್ಯನ ಪುತ್ರ ಇಬಾದ್ ಮತ್ತು ಇತರೆ ಸಹಚರರು ಮನೆಯಲ್ಲಿ ಮಾಂಸ ಇಟ್ಟಿದ್ದರು ಎನ್ನಲಾಗಿದೆ. ಈ ವೇಳೆ ದಾಳಿ ನಡೆದಿದ್ದು ಗೋಮಾಂಸ ಪತ್ತೆಯಾಗಿದೆ. ಶಾಮೀರ್ ಖಾನ್ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ದಾಳಿ ವೇಳೆ ಶಾಮೀರ್ ಖಾನ್ ಮತ್ತು ಇಬಾದ್ ಹಾಗೂ ಸಹಚರರು ಪರಾರಿಯಾಗಿದ್ದಾರೆ. ಪ್ರಕರಣ ತುಂಗನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇನ್ನು ಶಾಮೀರ್ ಖಾನ್ ಇವರ ಪತ್ನಿ ಮಾಜಿ ಮೇಯರ್ ಆಗಿದ್ದರು.

ಇದನ್ನೂ ಓದಿ: ಗಂಗಾವತಿಯ ಕಣವಿ ಆಂಜನೇಯ ದೇವಸ್ಥಾನದ ಬಳಿ ಕಾರು-ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ, ಪ್ರಾಣಾಪಾಯ ಇಲ್ಲ!

ಜೆಸಿಬಿಗೆ ಬೈಕ್ ಡಿಕ್ಕಿಯಾಗಿ ಸುಟ್ಟು ಕರಕಲಾದ ಬೈಕ್, ಸವಾರ ಸಾವು

ಹುಬ್ಬಳ್ಳಿಯ ಕಾರವಾರ ರಸ್ತೆಯ ಇರ್ಫಾನ್ ಐಸ್ ಫ್ಯಾಕ್ಟರಿ‌ ಮುಂದೆ ಭೀಕರ ಅಪಘಾತ ಸಂಭವಿಸಿದೆ. ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆ ತಿರುವಿನಲ್ಲಿ ನಿಂತಿದ್ದ ಜೆಸಿಬಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸುಟ್ಟು ಕರಕಲಾಗಿದ್ದು, ಬೈಕ್ ಸವಾರ ಅದಿಲ್ ಸಿಖಂದರ್ (18) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಿನ್ನೆ ಮಧ್ಯಾಹ್ನ ನಡೆದ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಿಂಬದಿ ಸವಾರ ಖಾದಿರ್ ಶೇಖ್ ಗೆ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ದಕ್ಷಿಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here