Home Uncategorized ಶೀತಗಾಳಿಗೆ ನಗರದಲ್ಲಿ ವಿಪರೀತ ಚಳಿ: ಹೆಚ್ಚಿದ ಅನಾರೋಗ್ಯ, ಆಸ್ಪತ್ರೆಗಳಲ್ಲಿ ಜನವೋ ಜನ!

ಶೀತಗಾಳಿಗೆ ನಗರದಲ್ಲಿ ವಿಪರೀತ ಚಳಿ: ಹೆಚ್ಚಿದ ಅನಾರೋಗ್ಯ, ಆಸ್ಪತ್ರೆಗಳಲ್ಲಿ ಜನವೋ ಜನ!

15
0
Advertisement
bengaluru

ಶೀತಗಾಳಿಯ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಪರೀತ ಚಳಿ ವಾತಾವರಣವಿದ್ದು, ಪರಿಣಾಮ ಸಾಕಷ್ಟು ಜನರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಪರಿಣಾಮ ಆಸ್ಪತ್ರೆಗಳಲ್ಲಿ ಭೇಟಿ ನೀಡುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಳಗಳು ಕಂಡು ಬರುತ್ತಿದೆ. ಬೆಂಗಳೂರು: ಶೀತಗಾಳಿಯ ಪರಿಣಾಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಪರೀತ ಚಳಿ ವಾತಾವರಣವಿದ್ದು, ಪರಿಣಾಮ ಸಾಕಷ್ಟು ಜನರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಪರಿಣಾಮ ಆಸ್ಪತ್ರೆಗಳಲ್ಲಿ ಭೇಟಿ ನೀಡುತ್ತಿರುವ ಜನರ ಸಂಖ್ಯೆಯಲ್ಲಿ ಹೆಚ್ಚಳಗಳು ಕಂಡು ಬರುತ್ತಿದೆ.

ಚಳಿಯ ವಾತಾವರಣದ ಪರಿಮಾಮ ಇನ್‌ಫ್ಲುಯೆಂಜಾ ಪ್ರಕರಣಗಳಾದ ಸೋಂಕುಗಳು (ಐಎಲ್‌ಐ), ಜ್ವರ, ನೆಗಡಿ, ಕೆಮ್ಮು ಮತ್ತು ಇತರ ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಹೇಳಿದ್ದಾರೆ.

ಸಕ್ರಾ ವರ್ಲ್ಡ್ ಆಸ್ಪತ್ರೆಯ ವಿಭಾಗದ ಮುಖ್ಯಸ್ಥ (ಪೀಡಿಯಾಟ್ರಿಕ್ಸ್) ಡಾ ರಜತ್ ಅಥ್ರೇಜಾ ಮಾತನಾಡಿ, ಕಳೆದ ಒಂದು ತಿಂಗಳಲ್ಲಿ ಐಎಲ್‌ಐ ರೋಗಲಕ್ಷಣಗಳೊಂದಿಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳಗಳಾಗುತ್ತಿರುವುದನ್ನು ನೋಡುತ್ತಿದ್ದೇವೆ. ಸುಮಾರು 100 ರೋಗಿಗಳು ಶೀತ, ಕೆಮ್ಮು ಮತ್ತು ಜ್ವರದಂತಹ ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ಬಂದಿದ್ದಾರೆ. ಆದರೆ, ಆಸ್ಪತ್ರೆಯ ದಾಖಲಾತಿಗಳ ಅಗತ್ಯವಿರುವ ತೀವ್ರ ಸೋಂಕಿನ ಪ್ರಕರಣಗಳು ಕಡಿಮೆಯೇ ಇದೆ ಎಂದು ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯ ರೆಸಿಡೆಂಟ್ ಮೆಡಿಕಲ್ ಆಫೀಸರ್ (ಆರ್‌ಎಂಒ) ಡಾ ಶ್ರೀನಿವಾಸ್ ಅವರು ಮಾತನಾಡಿ, ಪರಿಸ್ಥಿತಿಯು ಆತಂಕಕಾರಿಯಲ್ಲ ಮತ್ತು ಪ್ರತಿ ವರ್ಷ ಹವಾಮಾನ ಏರುಪೇರಾದಾಗ ಈ ರೀತಿಯ ಪರಿಸ್ಥಿತಿಗಳು ಕಂಡುಬರುತ್ತದೆ. ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಹೊರರೋಗಿ ವಿಭಾಗಕ್ಕೆ ಬರುವ ರೋಗಿಗಳ ಸಂಖ್ಯೆಯಲ್ಲಿ ಶೇ.10ರಷ್ಟು ಏರಿಕೆಯಾಗಿದೆ. ಆದಾಗ್ಯೂ, ಪ್ರಕರಣಗಳು ಅಂತಹ ಗಂಭೀರವಾಗಿಲ್ಲ. 2-3 ದಿನಗಳಲ್ಲಿ ಚಿಕಿತ್ಸೆ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.

bengaluru bengaluru

ಕೆಸಿ ಜನರಲ್ ಆಸ್ಪತ್ರೆಯ ಮತ್ತೊಬ್ಬ ವೈದ್ಯರು ಮಾತನಾಡಿ, ಆಸ್ಪತ್ರೆಯಲ್ಲಿನ ತುರ್ತು ಚಿಕಿತ್ಸಾ ವಿಭಾಗವು ಜ್ವರ ತರಹದ ರೋಗಲಕ್ಷಣಗಳೊಂದಿಗೆ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ನೋಡುತ್ತಿದೆ. ಅನೇಕ ರೋಗಿಗಳಿಗೆ ಉಸಿರಾಟದ ಸಮಸ್ಯೆ, ಸುಸ್ತು, ಜ್ವರ ಮತ್ತು ಕೆಮ್ಮು ಮುಂತಾದ ಲಕ್ಷಣಗಳು ಕಂಡುಬಂದಿವೆ. ಕೋವಿಡ್-19 ರೋಗಿಗಳಿಗೆ ಒಂದೇ ರೀತಿಯ ರೋಗಲಕ್ಷಣಗಳು ಇರುವುದರಿಂದ, ಜನರು ಗಾಬರಿಗೊಂಡು ಆಸ್ಪತ್ರೆಗೆ ಧಾವಿಸುತ್ತಿದ್ದಾರೆಂದು ಹೇಳಿದ್ದಾರೆ.

ಈ ನಡುವೆ ಡಾ ರಜತ್ ಅವರು, ಜನತೆಗೆ ಕೆಲ ಸಲಹೆಗಳನ್ನು ನೀಡಿದ್ದು, ಚಳಿ ವಾತಾವರಣದ ಸಂದರ್ಭದಲ್ಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವಂತೆ, ರಕ್ಷಣೆಗಾಗಿ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.

5 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಜ್ವರ ಲಸಿಕೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಇದು ತೀವ್ರವಾದ ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಸೋಂಕಿನ ಕನಿಷ್ಠ ಹರಡುವಿಕೆಯನ್ನು ಖಚಿತಪಡಿಸಿಕೊಳ್ಳಲು ಕೋವಿಡ್ ಸೂಕ್ತವಾದ ನಡವಳಿಕೆಯನ್ನು (ಸಿಎಬಿ) ಅನುಸರಿಸಬೇಕು ಎಂದು ಹೇಳಿದ್ದಾರೆ.


bengaluru

LEAVE A REPLY

Please enter your comment!
Please enter your name here