Home Uncategorized ಸಂಚಾರ ನಿಯಮ ಪಾಲಿಸಿ: ವಿದ್ಯಾರ್ಥಿಗಳಿಗೆ ಟ್ರಾಫಿಕ್ ಮಂತ್ರ ಹೇಳಿಕೊಟ್ಟ ಸಲೀಂ

ಸಂಚಾರ ನಿಯಮ ಪಾಲಿಸಿ: ವಿದ್ಯಾರ್ಥಿಗಳಿಗೆ ಟ್ರಾಫಿಕ್ ಮಂತ್ರ ಹೇಳಿಕೊಟ್ಟ ಸಲೀಂ

49
0
Advertisement
bengaluru

ನಾಳೆ ನೀವು ನಾಗರೀಕರಾಗುತ್ತೀರಿ, ಟ್ರಾಫಿಕ್ ನಿಯಮಗಳ ಅನುಸರಿಸುವುದನ್ನು ಕಲಿಯಿರಿ, ಅದು ನೀವು ನಮಗೆ ನೀಡುವ ದೊಡ್ಡ ಧನ್ಯವಾದ ಹಾಗೂ ಕೊಡುಗೆಯಾಗಿದೆ ಎಂದು ವಿದ್ಯಾರ್ಥಿಗಳಿಗೆ ವಿಶೇಷ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಹೇಳಿದ್ದಾರೆ. ಬೆಂಗಳೂರು: ನಾಳೆ ನೀವು ನಾಗರೀಕರಾಗುತ್ತೀರಿ, ಟ್ರಾಫಿಕ್ ನಿಯಮಗಳ ಅನುಸರಿಸುವುದನ್ನು ಕಲಿಯಿರಿ, ಅದು ನೀವು ನಮಗೆ ನೀಡುವ ದೊಡ್ಡ ಧನ್ಯವಾದ ಹಾಗೂ ಕೊಡುಗೆಯಾಗಿದೆ ಎಂದು ವಿದ್ಯಾರ್ಥಿಗಳಿಗೆ ವಿಶೇಷ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು ಹೇಳಿದ್ದಾರೆ.

ಚಿಲ್ಡ್ರನ್ಸ್ ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್ನೆಸ್ (ಸಿಎಂಸಿಎ) ಆಯೋಜಿಸಿದ್ದ 15ನೇ ‘ಸೆಲೆಬ್ರೇಟಿಂಗ್ ನಮ್ಮ ಬೆಂಗಳೂರಿನ ಟ್ರಾಫಿಕ್ ಪೊಲೀಸ್’ ಕಾರ್ಯಕ್ರಮದ ಬೌರಿಂಗ್ ಇನ್‌ಸ್ಟಿಟ್ಯೂಟ್ ಪಕ್ಕದಲ್ಲಿರುವ ಬೆಂಗಳೂರು ಟ್ರಾಫಿಕ್ ಪಾರ್ಕ್‌ನಲ್ಲಿ ಮಂಗಳವಾರ ನಡೆಯಿತು. ಕಾರ್ಯಕ್ರಮದಲ್ಲಿ 50 ವಿದ್ಯಾರ್ಥಿಗಳು ಹಾಗೂ 50 ಸಂಚಾರ ಪೊಲೀಸರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಟ್ರಾಫಿಕ್ ಪೊಲೀಸರಿಗೆ ಧನ್ಯವಾದ ಅರ್ಪಿಸಿದರು.

ಈ ವೇಳೆ ಮಾತನಾಡಿದ ವಿಶೇಷ ಆಯುಕ್ತ (ಸಂಚಾರ) ಎಂ.ಎ.ಸಲೀಂ ಅವರು, ಇದು ನನ್ನ ಪಾಲಿಗೆ ಸ್ಮರಣೀಯ ಕ್ಷಣವಾಗಿದೆ, ಈ ಹಿಂದೆಯೂ ಇಂತಹ ಕಾರ್ಯಕ್ರಮಗಳನ್ನು ಸಿಎಂಸಿಎ ನಡೆಸಿದೆ. ಸಂಚಾರಿ ಪೊಲೀಸರ ಕಾರ್ಯವನ್ನು ಸಿಎಂಸಿಎ ಗುರುತಿಸುತ್ತಲೇ ಬಂದಿದೆ. ಇಂತಹ ಕಾರ್ಯಕ್ರಮಗಳು ನಮ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮವಾಗಿ ಕೆಲಸ ಮಾಡಲು ನಮಗೆ ಸಹಾಯ ಮಾಡುತ್ತದೆ. ಕಳೆದ ಎರಡು ದಶಕಗಳಲ್ಲಿ, ನಗರವು ಅಗಾಧವಾದ ಬೆಳವಣಿಗೆಯನ್ನು ಕಂಡಿದೆ. 10 ದಶಲಕ್ಷಕ್ಕೂ ಹೆಚ್ಚು ವಾಹನಗಳು ರಸ್ತೆಗಿಳಿದಿವೆ. ಟ್ರಾಫಿಕ್ ಪೊಲೀಸರ ಕೆಲಸವು ತುಂಬಾ ಕ್ಲಿಷ್ಚಕರವಾದದ್ದು. ಆದರೂ ನಾವು ಸೇವೆಗೆ ಬದ್ಧರಾಗಿದ್ದೇವೆಂದು ಹೇಳಿದ್ದಾರೆ.

ನೀವು (ವಿದ್ಯಾರ್ಥಿಗಳು) ನಾಳೆ ನಾಗರಿಕರಾಗುತ್ತೀರಿ ಮತ್ತು ಟ್ರಾಫಿಕ್ ನಿಯಮಗಳನ್ನು ಅನುಸರಿುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ, ಅದು ನೀವು ನಮಗೆ ಮಾಡಬಹುದಾದ ದೊಡ್ಡ ಧನ್ಯವಾದ ಮತ್ತು ಕೊಡುಗೆಯಾಗಿದೆ ಎಂದು ತಿಳಿಸಿದರು.

bengaluru bengaluru

ಇದೇ ವೇಳೆ ಸಿಎಂಸಿಎ ಟ್ರಾಫಿಕ್ ಪೊಲೀಸರ ಪಾತ್ರವನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಿದರು. ವಿದ್ಯಾರ್ಥಿಗಳು ವಿವಿಧ ಟ್ರಾಫಿಕ್ ಪೊಲೀಸ್ ಠಾಣೆಗಳು ಮತ್ತು ಜಂಕ್ಷನ್‌ಗಳಿಗೆ ಭೇಟಿ ನೀಡಿದರು.


bengaluru

LEAVE A REPLY

Please enter your comment!
Please enter your name here