Home Uncategorized 'ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಬೀರಲು ಎನ್ಇಪಿಗೆ ಆದ್ಯತೆ ನೀಡಲಾಗಿದೆ: ಕೇಂದ್ರದ ಬಜೆಟ್ ಟೀಕಿಸಿದ ಬ್ರೇಕ್...

'ಸರ್ಕಾರಿ ಶಾಲೆಗಳ ಮೇಲೆ ಪರಿಣಾಮ ಬೀರಲು ಎನ್ಇಪಿಗೆ ಆದ್ಯತೆ ನೀಡಲಾಗಿದೆ: ಕೇಂದ್ರದ ಬಜೆಟ್ ಟೀಕಿಸಿದ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ

6
0
bengaluru

ಕೇಂದ್ರ ಬಜೆಟ್’ನಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಬದಲು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ ಎಂದು ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ (ಬಿಎಸ್‌ಎಸ್) ಟೀಕಿಸಿದೆ. ಬೆಂಗಳೂರು: ಕೇಂದ್ರ ಬಜೆಟ್’ನಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಬದಲು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ ಎಂದು ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ (ಬಿಎಸ್‌ಎಸ್) ಟೀಕಿಸಿದೆ.

ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗಿರುವ ಅನುದಾನ ಅತ್ಯಂತ ಕಡಿಮೆಯಾಗಿದೆ. ಬಜೆಟ್ ನಲ್ಲಿ ಸರ್ಕಾರ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯವನ್ನು ಸುಧಾರಿಸುವ ಬದಲು ಆನ್‌ಲೈನ್ ಶಿಕ್ಷಣವನ್ನು ಸುಗಮಗೊಳಿಸಲು ಹೆಚ್ಚಿನ ಹಂಚಿಕೆಯನ್ನು ಎನ್‌ಜಿಒಗಳು ಮತ್ತು ಇತರ ಖಾಸಗಿ ಕಂಪನಿಗಳಿಗೆ ಒದಗಿಸಲಾಗಿದೆ. “ಎನ್ಇಪಿ-2020 ಅನ್ನು ಪರಿಚಯಿಸಿದಾಗಿನಿಂದ, ಯಶಸ್ವಿ ಬಜೆಟ್ ಗಳನ್ನು ಮಂಡನೆಯಾಗುತ್ತಿಲ್ಲ ಎಂದು ಬಿಎಸ್ಎಸ್ ಹೇಳಿದೆ.

ಈ ವರ್ಷವೂ ಶಿಕ್ಷಣ ಕ್ಷೇತ್ರಕ್ಕೆ 1,12,899 ಕೋಟಿ ರೂ.ಗಳನ್ನು ನೀಡಲಾಗಿದೆ. ಶೇ.2.507 ರಷ್ಟು ಅನುದಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿರಿಸಲಾಗಿದೆ. ಕೇಂದ್ರವು ಎನ್ಇಪಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಇದರಿಂದ ಸ್ಪಷ್ಟವಾಗುತ್ತಿದೆ. ಶಿಕ್ಷಣಕ್ಕೆ ನೀಡಲಾದ ಈ ಅಲ್ಪ ಮೊತ್ತದಲ್ಲಿಯೂ 5G ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗಾಗಿ ಅಪ್ಲಿಕೇಶನ್‌ಗಳ ಅಭಿವೃದ್ಧಿಪಡಿಸಲು, ಆನ್‌ಲೈನ್ ಶಿಕ್ಷಣವನ್ನು ಸುಗಮಗೊಳಿಸಲು, ಡಿಜಿಟಲ್ ಲೈಬ್ರರಿಗಳು ಮತ್ತು ಲ್ಯಾಬ್‌ಗಳ ಸ್ಥಾಪನೆಗೆ ಎನ್‌ಜಿಒಗಳು ಮತ್ತು ಖಾಸಗಿ ಕಂಪನಿಗಳಿಗೆ ಹಣವನ್ನು ನೀಡಲಾಗುತ್ತಿದೆ ಎಂದು ಬಿಎಸ್‌ಎಸ್ ಅಧ್ಯಕ್ಷ ಧ್ರುಬಜ್ಯೋತಿ ಮುಖರ್ಜಿ ಅವರು ಹೇಳಿದ್ದಾರೆ.

ಇದಲ್ಲದೆ, ಬಜೆಟ್‌ನಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಮೀಸಲಿಟ್ಟಿರುವ ಅನುದಾನ ಕೂಡ ಕಡಿಮೆಯಿದೆ. ಇದರಿಂದ ಭಾರತ ಇತರೆ ದೇಶಗಳೊಂದಿಗೆ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ. ವಿಜ್ಞಾನದಲ್ಲಿ ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬೇಕಾದರೆ ಅದಕ್ಕೆ ಅನುದಾನ ಅತ್ಯಂತ ಮುಖ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

bengaluru
bengaluru

LEAVE A REPLY

Please enter your comment!
Please enter your name here