Home Uncategorized ಸರ್ಕಾರ ಬರೀ ಮಾಸ್ಕ್ ಹಾಕಿ ಅಂತ ಹೇಳಿದರೆ ಸಾಕಾಗಲ್ಲ. ಆಕ್ಸಿಜನ್ ಪ್ಲಾಂಟ್ ಸೇರಿದ್ದಂತೆ ವಿವಿಧ ರೀತಿ ಸಜ್ಜಾಗಬೇಕು:...

ಸರ್ಕಾರ ಬರೀ ಮಾಸ್ಕ್ ಹಾಕಿ ಅಂತ ಹೇಳಿದರೆ ಸಾಕಾಗಲ್ಲ. ಆಕ್ಸಿಜನ್ ಪ್ಲಾಂಟ್ ಸೇರಿದ್ದಂತೆ ವಿವಿಧ ರೀತಿ ಸಜ್ಜಾಗಬೇಕು: ಯು ಟಿ ಖಾದರ್

11
0

ಕೋವಿಡ್ ರೂಪಾಂತರಿ ಬಿಎಫ್.7 ಭಾರತಕ್ಕೆ ಕಾಲಿಡುತ್ತಿದ್ದಂತೇ ಆತಂಕ ಮನೆಮಾಡಿದೆ. ಜನರು ಮಾಸ್ಕ್ ಹಾಕಿಕೊಳ್ಳಿ, ಮುಂಜಾಗ್ರತೆ ಕೈಗೊಳ್ಳಿ ಎಂದು ಸರ್ಕಾರ ಹೇಳುತ್ತಿದೆ. ಹಾಗೆಂದು ಜನರಲ್ಲಿ ಗೊಂದಲ ಸೃಷ್ಟಿಸಬೇಡಿ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡಲಿ. ಬೆಳಗಾವಿ: ಕೋವಿಡ್ ರೂಪಾಂತರಿ ಬಿಎಫ್.7 ಭಾರತಕ್ಕೆ ಕಾಲಿಡುತ್ತಿದ್ದಂತೇ ಆತಂಕ ಮನೆಮಾಡಿದೆ. ಜನರು ಮಾಸ್ಕ್ ಹಾಕಿಕೊಳ್ಳಿ, ಮುಂಜಾಗ್ರತೆ ಕೈಗೊಳ್ಳಿ ಎಂದು ಸರ್ಕಾರ ಹೇಳುತ್ತಿದೆ. ಹಾಗೆಂದು ಜನರಲ್ಲಿ ಗೊಂದಲ ಸೃಷ್ಟಿಸಬೇಡಿ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡಲಿ. ಮಾಸ್ಕ್ ಹಾಕಿಕೊಳ್ಳುವ ಬದಲು ಎಚ್ಚರಿಕೆ ಕ್ರಮದ ಬಗ್ಗೆ ಜನರಿಗೆ ಮಾಹಿತಿ ನೀಡಲಿ, ಜನರೇ ಮುಂಜಾಗ್ರತೆ ಕೈಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು ಟಿ ಖಾದರ್ ಒತ್ತಾಯಿಸಿದ್ದಾರೆ.

ಇಂದು ಬೆಳಗಾವಿ ಸುವರ್ಣಸೌಧದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿ, ಸರ್ಕಾರ ಮಾಡುವ ಕೆಲಸ ಮಾಡಬೇಕಾಗುತ್ತದೆ. ಆಕ್ಸಿಜನ್ ಪ್ಲಾಂಟ್ ಗುಣಮಟ್ಟ ತಪಾಸಣೆ ಮಾಡಬೇಕು. ಕೋವಿಡ್ ಚಿಕಿತ್ಸೆಗೆ ಮೂಲಭೂತ ಸೌಕರ್ಯಗಳ ಅನುಷ್ಠಾನ ಮಾಡುವ ದೂರಾಲೋಚನೆ ಹೊಂದಬೇಕು. ಗಡಿಬಿಡಿಯಲ್ಲಿ ಸರ್ಕಾರ ನಿರ್ಣಯ ಕೈಗೊಳ್ಳಬಾರದು, ರೋಗಿಗಳಿಗೆ ತಕ್ಷಣ ಚಿಕಿತ್ಸೆ ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕು ಎಂದರು.

ಕೋವಿಡ್ ವಿಚಾರದಲ್ಲಿ ಜನರು ಗೊಂದಲ ಸೃಷ್ಟಿಸಬಾರದು. ಜನರಿಗೆ ಆತಂಕ ತರಬಾರದು. ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಬಂದಿದ್ದೇ ನಿಜ ಎಂದು ಭಾವಿಸಬಾರದು. ಚೀನಾ ಸೇರಿದಂತೆ ವಿದೇಶಗಳಲ್ಲಿ ಬರುತ್ತಿರುವ ಈಗಿನ ಕೋವಿಡ್ ಬಗ್ಗೆ ಜನರಿಗೆ ನಿಜಾಂಶ ತಿಳಿಸಬೇಕು ಎಂದರು.

ಸಮುದಾಯ ಕೇಂದ್ರದಲ್ಲಿ ಸರಿಯಾಗಿ ವೈದ್ಯರು, ಆಕ್ಸಿಜನ್ ಘಟಕ, ವೈದ್ಯಕೀಯ ವ್ಯವಸ್ಥೆಯ ಬಗ್ಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದರು.

LEAVE A REPLY

Please enter your comment!
Please enter your name here