Home Uncategorized ಸಾಹಿತಿಗಳ ಪ್ರತಿಮೆಗಳುಳ್ಳ ಬಯಲು ವಸ್ತುಸಂಗ್ರಹಾಲಯ ಸ್ಥಾಪನೆಗೆ ಸರ್ಕಾರದ ಚಿಂತನೆ: ಸಿಎಂ ಬಸವರಾಜ ಬೊಮ್ಮಾಯಿ

ಸಾಹಿತಿಗಳ ಪ್ರತಿಮೆಗಳುಳ್ಳ ಬಯಲು ವಸ್ತುಸಂಗ್ರಹಾಲಯ ಸ್ಥಾಪನೆಗೆ ಸರ್ಕಾರದ ಚಿಂತನೆ: ಸಿಎಂ ಬಸವರಾಜ ಬೊಮ್ಮಾಯಿ

8
0

ಬೆಂಗಳೂರು: ಕನ್ನಡ ನಾಡಿಗೆ ಜ್ಞಾನಪೀಠ ಪ್ರಶಸ್ತಿ ಹಾಗೂ ಅಪರೂಪದ ಸಾಹಿತ್ಯವನ್ನು ನೀಡಿದವರಿಗೆ ಬಯಲು ವಸ್ತುಸಂಗ್ರಹಾಲಯ (ಓಪನ್ ಏರ್ ಮ್ಯೂಸಿಯಂ) ಸ್ಥಾಪಿಸಿ ಅವರ ಪ್ರತಿಮೆಗಳನ್ನು ಅಳವಡಿಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ನುಡಿನಮನ ಮೊದಲು ಮಾನವನಾಗು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾನ್ಯವಾಗಿ ರಾಜಕಾರಣಿಗಳ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತದೆ. ಆದರೆ ಸಾಹಿತಿಗಳ ಪ್ರತಿಮೆ ಅಪರೂಪ. ವಸ್ತುಸಂಗ್ರಹಾಲಯದಲ್ಲಿ ಶಿವಮೊಗ್ಗ ಸುಬ್ಬಣ್ಣ ಅವರಿಗೆ ವಿಶೇಷವಾದ ಸ್ಥಾನವಿರಲಿದೆ. ವಿಭಿನ್ನ ವ್ಯಕ್ತಿಯಾಗಿದ್ದ ಸುಬ್ಬಣ್ಣ ಅವರ ವ್ಯಕ್ತಿತ್ವ, ಧ್ವನಿ, ಆತ್ಮೀಯತೆ, ಚಿಂತನೆ, ತತ್ವಾದರ್ಶಗಳು ತಮ್ಮದೇ ಆದ ಮೆರಗನ್ನು ಹೊಂದಿವೆ. ಇನ್ನೊಬ್ಬ ಸುಬ್ಬಣ್ಣ ಇರಲು ಸಾಧ್ಯವಿಲ್ಲ. ಹಾಗಾಗಿ ಸುಬ್ಬಣ್ಣ ಅವರನ್ನು ಎಲ್ಲರೂ ಚಿರಕಾಲ ಸ್ಮರಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.

ಗಾಯನದ ಉತ್ಕೃಷ್ಟತೆ

ಶರೀಫರು ಧರ್ಮದ ಚೌಕಟ್ಟನ್ನು ಮೀರಿ ತಮ್ಮ ತತ್ವಗಳನ್ನು ಮನಮುಟ್ಟುವಂತೆ ಹೇಳುತ್ತಿದ್ದ ಕವಿ .ಶಿಶುನಾಳ ಶರೀಫರು ದಿನನಿತ್ಯ ಮಾಡುವ ಕರ್ಮಗಳಲ್ಲಿ ತತ್ವಗಳನ್ನು ಅಳವಡಿಸಿದ್ದಾರೆ. ತತ್ವ ಮತ್ತು ಮಾರ್ಮಿಕತೆಗೆ ವಿಶೇಷ ಭಾವನೆಗಳನ್ನು ನೀಡಿದವರು ಶಿವಮೊಗ್ಗ ಸುಬ್ಬಣ್ಣ. ತಮ್ಮ ಭಾಗದಲ್ಲಿ ಪ್ರಸಿದ್ಧರಾಗಿದ್ದ ಶರೀಫರನ್ನು ಇಡೀ ಕರ್ನಾಟಕಕ್ಕೆ ಮತ್ತು ಭಾರತಕ್ಕೆ ಶಿಶುನಾಳ ಶರೀಫರನ್ನು ಪರಿಚಯಿಸಿದ್ದು ಸುಬ್ಬಣ್ಣ. ಸಂತ ಶಿಶುನಾಳ ಶರೀಫರ ತತ್ವ ಹಾಗೂ ಸುಬ್ಬಣ್ಣನವರ ಗಾಯನದ ಉತ್ಕಷ್ಠತೆ ಅನನ್ಯವಾದುದು ಎಂದು ಹೇಳಿದರು.

ಇದನ್ನೂ ಓದಿ: ನೇಕಾರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ: ನೇಕಾರ ಸಮ್ಮಾನ್ ಯೋಜನೆಗೆ ಡಿ. 16ರಂದು ಸಿಎಂ ಬೊಮ್ಮಾಯಿ ಚಾಲನೆ

ಸಾಹಿತ್ಯ, ಸಂಗೀತದ ರಕ್ಷಣೆಗೆ ಸದಾ ಬದ್ಧ:

ಕನ್ನಡ ನಾಡಿನಲ್ಲಿ ಹುಟ್ಟಿ ಅವರ ಸಮಕಾಲೀನರಾಗಿ ನಾವು ಕೂಡ ಇದ್ದೆವು ಎನ್ನುವುದೇ ಭಾವನೆ ಹೆಮ್ಮೆ ಹಾಗೂ ಸಂತೋಷ ತರುತ್ತದೆ. ಕನ್ನಡ ನಾಡು ಹಾಗೂ ಭಾಷೆಯನ್ನು ಶ್ರೀಮಂತಗೊಳಿಸಿದವರೇ ಇಂಥ ಸಾಹಿತಿಗಳು ಹಾಗೂ ಗಾಯಕರು. ಇಂಥವರನ್ನು ನಾವು ಉಳಿಸಿಕೊಂಡು, ಚಿರಸ್ಮರಣೀಯವಾಗಿ ಇಟ್ಟುಕೊಂಡು ಮುಂದಿನ ಜನಾಂಗಕ್ಕೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯ. ಸುಬ್ಬಣ್ಣ ಅವರ ಬಗ್ಗೆ ಗಾಯನಗಳ ಬಗ್ಗೆ ಅಧ್ಯಯನ ಮಾಡಿ, ಇನ್ನಷ್ಟು ಪ್ರಸಿದ್ಧಿಗೆ ತರುವ ಕೆಲಸವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೂಲಕ ಮಾಡಲಾಗುವುದು ಎಂದರು. ನಾನು ಸುಬ್ಬಣ್ಣ ಅವರ ಅಭಿಮಾನಿ. ಕನ್ನಡ ನಾಡಿನ ಅದ್ಭುತ ಸಾಹಿತ್ಯ, ಸಂಗೀತದ ರಕ್ಷಣೆಗೆ ಸದಾ ಬದ್ಧ ಎಂದು ತಿಳಿಸಿದರು.

ಕವಿತೆಗಳಿಗೆ ಜೀವ ತುಂಬುವಂತಹ ಹಾಡುಗಾರಿಕೆ:

ಶಿವಮೊಗ್ಗ ಸುಬ್ಬಣ್ಣ ಅವರಿಗೆ ನಾನು ಒಬ್ಬ ಅಭಿಮಾನಿ ಅಷ್ಟೇ. ಅವರನ್ನು ಹತ್ತಿರದಿಂದ ಬಲ್ಲವನಾಗಿದ್ದರೂ ಅಭಿಮಾನಿಯಾಗಿ ಉಳಿಯುತ್ತೇನೆ. ನಾನು ಅಭಿಮಾನಿಯಾಗಿ ಗುರುತಿಸಿಕೊಂಡಿರಲು ಬಯಸುತ್ತೇನೆ. ಅದನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಅವರ ಗಡುಸಾದ ಧ್ವನಿಯಲ್ಲಿ ಇಂಪಾಗಿ ಹಾಡುವುದು ಸುಲಭವಲ್ಲ. ಅವರು ತಮ್ಮ ಧ್ವನಿಯಿಂದ ಕವಿತೆಗಳಿಗೆ ಜೀವ ತುಂಬುವಂತೆ ಅತ್ಯಂತ ಸರಳ ಹಾಗೂ ಸುಲಭವಾಗಿ ಹಾಡುತ್ತಿದ್ದರು ಎಂದರು.

ಇದನ್ನೂ ಓದಿ: ಉದ್ಘೋಷಿತ ಅಪರಾಧಿಗಳ ಸುಳಿವು ಕೊಟ್ಟವರಿಗೆ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ. ಬಹುಮಾನ

ಸಂಗೀತದ ಮೂಲಕ ಜನಮನದಲ್ಲಿ ಚಿರಸ್ಥಾಯಿ:

ದ.ರಾ ಬೇಂದ್ರೆ, ವಿಕೃ ಗೊಕಾಕ್, ಬಸವರಾಜ ರಾಜಗುರು, ಮಲ್ಲಿಕಾರ್ಜುನ ಮನ್ಸೂರು, ಗಂಗೂಬಾಯಿ ಹಾನಗಲ್, ಕನಕದಾಸರು ಕೂಡ ನಮ್ಮ ಕ್ಷೇತ್ರದವರು. ಸಂಗೀತ ಸಾಹಿತ್ಯ ಕ್ಷೇತ್ರಕ್ಕೆ ನಮ್ಮ ಸರ್ಕಾರ ಏನಾದರೂ ಕೊಡುಗೆ ನೀಡುತ್ತದೆ. ಸುಬ್ಬಣ್ಣ ಅವರ ಹಾಡು ಸದಾಕಾಲ ಜೀವಂತವಾಗಿರುತ್ತದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ. ಸುಬ್ಬಣ್ಣನವರು ತಮ್ಮ ಸಂಗೀತ ಹಾಗೂ ಸಾಧನೆಗಳ ಮೂಲಕ ಜನಮನದಲ್ಲಿ ಚಿರಸ್ಥಾಯಿಯಾಗಿರುತ್ತಾರೆ. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್‌. ಅಶೋಕ್, ಸಾಹಿತಿ ಚಂದ್ರಶೇಖರ ಕಂಬಾರ, ಕವಿ ಎಚ್.‌ ಎಸ್. ವೆಂಕಟೇಶ ಮೂರ್ತಿ, ಲಹರಿ ವೇಲು ಹಾಗೂ ಮತ್ತಿತರರು ಹಾಜರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

LEAVE A REPLY

Please enter your comment!
Please enter your name here