Home Uncategorized ಸಿಕ್ಕಿಂ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣಕ್ಕೆ Bigg ​​ಟ್ವಿಸ್ಟ್: ಕುಡಿದ ಮತ್ತಿನಲ್ಲಿ ತಲೆಗೆ ಪೆಟ್ಟು, ಹೆಂಡತಿ...

ಸಿಕ್ಕಿಂ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣಕ್ಕೆ Bigg ​​ಟ್ವಿಸ್ಟ್: ಕುಡಿದ ಮತ್ತಿನಲ್ಲಿ ತಲೆಗೆ ಪೆಟ್ಟು, ಹೆಂಡತಿ ಭಯಕ್ಕೆ ಜನಾಂಗೀಯ ದಾಳಿ ಕಥೆ ಕಟ್ಟಿದ ಭೂಪ!

8
0
Advertisement
bengaluru

ಸಿಲಿಕಾನ್​ ಸಿಟಿ (Silicon City) ಬೆಂಗಳೂರಿನಲ್ಲಿ (Bengaluru) ಸಿಕ್ಕಿಂ ವ್ಯಕ್ತಿ ಹಲ್ಲಿನ ಕೇಸ್‌ಗೆ ದೊಡ್ಡ ತಿರುವು ದೊರೆತಿದ್ದು, ಇಷ್ಟಕ್ಕೂ ಅದು ಹಲ್ಲೆ ಪ್ರಕರಣವೇ ಅಲ್ಲ ಎಂಬ ಸತ್ಯಾಂಶವನ್ನು ಬೆಂಗಳೂರು ಪೊಲೀಸರು ಬಯಲಿಗೆಳೆದಿದ್ದಾರೆ. ಬೆಂಗಳೂರು: ಸಿಲಿಕಾನ್​ ಸಿಟಿ (Silicon City) ಬೆಂಗಳೂರಿನಲ್ಲಿ (Bengaluru) ಸಿಕ್ಕಿಂ ವ್ಯಕ್ತಿ ಹಲ್ಲಿನ ಕೇಸ್‌ಗೆ ದೊಡ್ಡ ತಿರುವು ದೊರೆತಿದ್ದು, ಇಷ್ಟಕ್ಕೂ ಅದು ಹಲ್ಲೆ ಪ್ರಕರಣವೇ ಅಲ್ಲ ಎಂಬ ಸತ್ಯಾಂಶವನ್ನು ಬೆಂಗಳೂರು ಪೊಲೀಸರು ಬಯಲಿಗೆಳೆದಿದ್ದಾರೆ.

ಹೌದು.. ಚೀನಿ ವ್ಯಕ್ತಿ ಎಂದು ಮೂವರು ಬೈಕ್ ಸವಾರರು ಥಳಿಸಿದರು ಎಂಬ ಸಿಕ್ಕಿ ಮೂಲದ ವ್ಯಕ್ತಿಯ ಹೇಳಿಕೆ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಈಶಾನ್ಯ ಭಾರತದಲ್ಲಿ ಹಿಂಸಾಚಾರ ಪ್ರಕರಣಗಳು ಚಾಲ್ತಿಯಲ್ಲಿರುವಂತೆಯೇ ಇಂತಹುದೊಂದು ಗಂಭೀರ ಆರೋಪ ರಾಜ್ಯದ ಪೊಲೀಸರ ಗಮನ ಸೆಳೆದಿತ್ತು. ಆದರೆ ಪೊಲೀಸ್ ತನಿಖೆಯ ವೇಳೆ ಸಿಕ್ಕಿ ವ್ಯಕ್ತಿಯ ಕಳ್ಳಾಟ ಬಯಲಾಗಿದೆ.

ಇದನ್ನೂ ಓದಿ:  ಬೆಂಗಳೂರಿನಲ್ಲಿ ಜನಾಂಗೀಯ ದಾಳಿ: ಸಿಕ್ಕಿಂ ವ್ಯಕ್ತಿಯ ಮೇಲೆ ಅಮಾನುಷ ಹಲ್ಲೆ..!

ಪೊಲೀಸ್ ಮೂಲಗಳ ಪ್ರಕಾರ ಹಲ್ಲೆ ಕಥೆ ಕಟ್ಟಿದ್ದ ಸಿಕ್ಕಿ ವ್ಯಕ್ತಿ ದಿನೇಶ್ ಮೇಲೆ ಯಾವುದೇ ರೀತಿಯ ಹಲ್ಲೆಯಾಗಿರಲಿಲ್ಲ. ಬದಲಿಗೆ ಬುಧವಾರ ರಾತ್ರಿ ಸ್ನೇಹಿತರ (Friends) ಜೊತೆ ದಿನೇಶ್ ಪಾರ್ಟಿ‌ ಮಾಡಿದ್ದನಂತೆ. ಈ ವೇಳೆ ಕಂಠಪೂರ್ತಿ ಕುಡಿದು ನಡೆಯಲೂ ಆಗದ ಸ್ಥಿತಿಗೆ ತಲುಪಿದ್ದನಂತೆ. ಆ ಬಳಿಕ ಮನೆಗೆ ಹೋಗುವಾಗ ನಶೆಯಲ್ಲಿ ಕೆಳಗೆ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾನೆ. ತಲೆಗೆ ಪೆಟ್ಟು ಮಾಡಿಕೊಂಡು ಮನೆಗೆ ಹೋದರೆ ಪತ್ನಿ ಬೈತಾಳೆ ಅಂತ ಭಯಗೊಂಡಿದ್ದ ಪತಿ ದಿನೇಶ್​​ ಹಲ್ಲೆ ನಾಟಕ ಮಾಡಿದ್ದನಂತೆ. ಸತ್ಯಾಂಶ ಬೆಳಕಿಗೆ ಬಂದ ಬಳಿಕ ಸದ್ಯ ದಿನೇಶ್‌ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ. 

bengaluru bengaluru

ಈ ಮೊದಲು ಪೊಲೀಸರ ಮುಂದೆ ಕೆಲವರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದಿನೇಶ್‌‌ ಹೇಳಿದ್ದ. ಬಳಿಕ ಪೊಲೀಸರ ತನಿಖೆ ನಡೆಸಿದ್ದರು. ಹಲ್ಲೆ ನಡೆದಿದೆ ಎನ್ನಲಾದ ಪ್ರದೇಶ ಮತ್ತು ಅದರ ಸಮುತ್ತಮುತ್ತಲ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ಅಲ್ಲಿ ಯಾವುದೇ ರೀತಿಯ ಹಲ್ಲೆ ಕೃತ್ಯಗಳು ಕಂಡಿರಲಿಲ್ಲ. ಯಾವುದೇ ದೃಶ್ಯಗಳಲ್ಲಿ ಆತನನ್ನು ನಿಂದಿಸಿದ ಮತ್ತು ಹಲ್ಲೆ ಮಾಡಿದ ಮೂವರ ಕುರುಹು ಇಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಳಿಕ ದಿನೇಶ್ ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯಾಂಶವನ್ನು ಹೇಳಿದ್ದಾನೆ ಎಂದು ಸಿಕೆ ಬಾಬಾ, ಉಪ ಪೊಲೀಸ್ ಆಯುಕ್ತ (ಆಗ್ನೇಯ ವಿಭಾಗ) ಹೇಳಿದ್ದಾರೆ.

ಇದನ್ನೂ ಓದಿ: ಸಿಕ್ಕಿಂ: ಪ್ರವಾಹ, ಭೂಕುಸಿತದಿಂದ ಚುಂಗ್ ತಾಂಗ್ ನಲ್ಲಿ ಸಿಲುಕಿದ 300 ಪ್ರವಾಸಿಗರ ರಕ್ಷಣೆ

ಏನೆಲ್ಲಾ ಕಥೆ ಕಟ್ಟಿದ್ದ ಗೊತ್ತಾ ಸಿಕ್ಕಿಂ ವ್ಯಕ್ತಿ?
ಪತ್ನಿಗೆ ಹೆದರಿಕೊಂಡಿದ್ದ ದಿನೇಶ್​​, ತನಿಖೆಗೆ ನಗರದ ಎಲೆಕ್ಟ್ರಾನಿಕ್ ಸಿಟಿಯ ದೊಡ್ಡತೋಗೂರಿನ ಪಾರ್ಕ್ ಕೆಲ ದುಷ್ಕರ್ಮಿಗಳು ಅಡ್ಡಗಟ್ಟಿದ್ದರು. ಅಲ್ಲದೇ ನನಗೆ ಚೈನೀಸ್ ಚೈನೀಸ್ ಎಂದು ನಿಂದಿಸಿ ಹಲ್ಲೆ ನಡೆಸಿದ್ದರು ಎಂದಿದ್ದ. ದೊಡ್ಡ ತೋಗೂರಿನ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ದಿನೇಶ್​, ಬೈಕ್​​ನಲ್ಲಿ ಬಂದ ಮೂವರು ನನ್ನ ಮೇಲೆ ಹಲ್ಲೆ ಮಾಡಿದ್ದರು. ತಲೆಗೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು, ಈ ವೇಳೆ ನಾನು ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡ ಬಳಿಕ ಅಲ್ಲಿಂದ ಓಡಿ ಹೋದರು ಅಂತ ತಿಳಿಸಿದ್ದ. ಅಲ್ಲದೇ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು ಮಾಡಿದ್ದ. ಆದರೆ ವಿಚಾರಣೆ ವೇಳೆ ದಿನೇಶ್ ಕಳ್ಳಾಟ ಬೆಳಕಿಗೆ ಬಂದಿದೆ.
 


bengaluru

LEAVE A REPLY

Please enter your comment!
Please enter your name here