Home Uncategorized 'ಸಿದ್ದರಾಮಯ್ಯಗೆ ಹಸಿವಿನ ಅನುಭವವಿದೆ: ನನ್ನಂತಹ ಕೋಟ್ಯಂತರ ಬಡವರ ಪಾಲಿಗೆ ಅಕ್ಕಿ ದೇವರು'

'ಸಿದ್ದರಾಮಯ್ಯಗೆ ಹಸಿವಿನ ಅನುಭವವಿದೆ: ನನ್ನಂತಹ ಕೋಟ್ಯಂತರ ಬಡವರ ಪಾಲಿಗೆ ಅಕ್ಕಿ ದೇವರು'

7
0

‘ಶ್ರೀಮಂತರು, ಪ್ರತಿ ಪಕ್ಷಗಳು ಅಕ್ಕಿಯನ್ನು ಪಡಿತರವೆಂದು ನೋಡಬಹುದು, ಆದರೆ ನನ್ನಂತಹ ಕೋಟ್ಯಂತರ ಬಡವರ ಪಾಲಿಗೆ ಅಕ್ಕಿ ಎಂದರೆ ದೇವರು. ಅನ್ನಭಾಗ್ಯ ಜಾರಿಗೊಳಿಸಿರುವ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಬೆಂಗಳೂರು: ಶ್ರೀಮಂತರು, ಪ್ರತಿ ಪಕ್ಷಗಳು ಅಕ್ಕಿಯನ್ನು ಪಡಿತರವೆಂದು ನೋಡಬಹುದು, ಆದರೆ ನನ್ನಂತಹ ಕೋಟ್ಯಂತರ ಬಡವರ ಪಾಲಿಗೆ ಅಕ್ಕಿ ಎಂದರೆ ದೇವರು. ಅನ್ನಭಾಗ್ಯ ಜಾರಿಗೊಳಿಸಿರುವ ಮುಖ್ಯಮಂತ್ರಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಬಡವರ ದೇವಾಲಯ ಕನ್ನಡ ಶಾಲೆ. ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯಾ ಎನ್ನುವ ಹಾಗೆ ಬಡವರ ಮಕ್ಕಳು ವಿಧಾನಸೌಧಕ್ಕೆ ಬರಲು ಸಾಧ್ಯವಾಗಿರುವುದು ಸಂವಿಧಾನದಿಂದ. ನಮ್ಮ ಪಕ್ಷದ ನಾಯಕರು ನನ್ನಂತ ಬಡವರ ಮಗನನ್ನು ವಿಧಾನಸೌಧಕ್ಕೆ ಕಳುಹಿಸಿದ್ದಾರೆ ಎಂದರು. ಸರ್ಕಾರಿ ಶಾಲೆಗಳು ಮತ್ತು ಆಸ್ಪತ್ರೆಗಳಿಗೆ ಇನ್ನಷ್ಟು ಶಕ್ತಿ ತುಂಬಲು ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದರು.

ಇದನ್ನೂ ಓದಿ: ಬಿಲ್ ಬಾಕಿ ಉಳಿಸಿಕೊಂಡಿದ್ದರೂ ಗೃಹಜ್ಯೋತಿ ಪ್ರಯೋಜನ ಪಡೆಯಬಹುದು: ಬೆಸ್ಕಾಂ

ಇಂಗ್ಲಿಷ್ ಇರೋದೇ ತಪ್ಪು ಮಾತಾಡೋಕೆ, ಆದರೆ ಕನ್ನಡ  ಇರೋದು ಸರಿಯಾಗಿ ಮಾತನಾಡಲು ಎಂದು  ಪ್ರದೀಪ್ ಈಶ್ವರ್ ಹೇಳಿದ್ದಾರೆ. ಅನ್ನಭಾಗ್ಯ  ಶ್ರೀಮಂತರ ದೃಷ್ಟಿಯಲ್ಲಿ ರೇಷನ್ ಅಷ್ಟೇ. ಆದರೆ ನನ್ನಂತವನ ದೃಷ್ಟಿಯಲ್ಲಿ ಅನ್ನ ಎನ್ನುವುದು ದೇವರು.

ಗೃಹಜ್ಯೋತಿ ಕೇವಲ ಮನೆಯನ್ನು ಬೆಳಗುತ್ತಿಲ್ಲ. ಕೋಟ್ಯಂತರ ಮಕ್ಕಳು ತಡರಾತ್ರಿಯವರೆಗೆ ಓದಲು ಸಹಾಯಕವಾಗಿದೆ. ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಲು ಆದ್ಯತೆ ನೀಡಬೇಕಿದೆ. ಅದರ ಬಗ್ಗೆ ಸಂಬಂಧಿಸಿದ ಸಚಿವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಅನ್ನಭಾಗ್ಯದ ಅಕ್ಕಿ ಜೊತೆ ಹಣ ಭಾಗ್ಯ; ಗೃಹಜ್ಯೋತಿ ಭಾಗ್ಯ ಇಂದಿನಿಂದ ಅಧಿಕೃತ ಆರಂಭ

ಸರ್ಕಾರಿ ಆಸ್ಪತ್ರೆಯ ಚಿಕಿತ್ಸಾ ಗುಣಮಟ್ಟ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು. ಉತ್ತಮ ಚಿಕಿತ್ಸೆ ಸಿಗದೆ ನನ್ನ ಅಪ್ಪ-ಅಮ್ಮನನ್ನು ಕಳೆದುಕೊಂಡೆ. ಅಂತಹ ಸ್ಥಿತಿ ಯಾರಿಗೂ ಬರಬಾರದು. ಅದಕ್ಕಾಗಿ ಸರ್ಕಾರಿ ಆಸ್ಪತ್ರೆ ಉಳಿಸಬೇಕು. ಸಿದ್ದರಾಮನಹುಂಡಿಯಲ್ಲಿ ಹುಟ್ಟಿದ ಸಿದ್ದರಾಮಯ್ಯನವರಿಗೆ ಹಸಿವಿನ ಅನುಭವವಿದೆ. ಅದಕ್ಕಾಗಿ ಅನ್ನಭಾಗ್ಯ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಐಎಎಸ್ ಮತ್ತು ಮೆಡಿಕಲ್ ಓದಲು ಬರುವ ಕನ್ನಡ ಮಾಧ್ಯಮದವರನ್ನು  ಸರ್ಕಾರ ಆದ್ಯತೆ ಮೇಲೆ ಪರಿಗಣಿಸಬೇಕು. ಉನ್ನತ ಶಿಕ್ಷಣ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಗೆ ಮರಿಚೀಕೆ ಆಗಬಾರದು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

LEAVE A REPLY

Please enter your comment!
Please enter your name here