Home Uncategorized ಸುದೀಪ್​ಗಾಗಿ ಸಿನಿಮಾ ಕಥೆ ಮಾಡಿದ ಆರ್ಯವರ್ಧನ್​ ಗುರೂಜಿ; ಸ್ಟೋರಿ ಕೇಳಿ ತಲೆಕೆಡಿಸಿಕೊಂಡ ಕಿಚ್ಚ

ಸುದೀಪ್​ಗಾಗಿ ಸಿನಿಮಾ ಕಥೆ ಮಾಡಿದ ಆರ್ಯವರ್ಧನ್​ ಗುರೂಜಿ; ಸ್ಟೋರಿ ಕೇಳಿ ತಲೆಕೆಡಿಸಿಕೊಂಡ ಕಿಚ್ಚ

16
0
Advertisement
bengaluru

ಬಿಗ್ ಬಾಸ್ (Bigg Boss) ಕೊನೆಯ ಹಂತ ತಲುಪಿದೆ. ಕೆಲವೇ ದಿನಗಳಲ್ಲಿ ಈ ಶೋ ಪೂರ್ಣಗೊಳ್ಳಲಿದೆ. ಮನೆಯಲ್ಲಿ ಸದ್ಯ ಎಂಟು ಸ್ಪರ್ಧಿಗಳಿದ್ದಾರೆ. ಈ ಪೈಕಿ ಆರ್ಯವರ್ಧನ್ ಅವರು ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರು ಒಟಿಟಿ ಸೀಸನ್ ಮೂಲಕ ಬಿಗ್ ಬಾಸ್ ಜರ್ನಿ ಆರಂಭಿಸಿದರು. ಟಿವಿ ಸೀಸನ್​ಗೆ ಕಾಲಿಟ್ಟು ಆರ್ಯವರ್ಧನ್ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡರು. ಏನು ಮಾತನಾಡುತ್ತಾರೆ ಎನ್ನುವ ವಿಚಾರ ಕೆಲವೊಮ್ಮೆ ಅವರಿಗೇ ಗೊತ್ತಿರುವುದಿಲ್ಲ. ಈಗ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಈ ವಿಚಾರ ಹೇಳಿದ್ದಾರೆ. ಆರ್ಯವರ್ಧನ್ ಅವರ ಕಥೆ ಕೇಳಿ ಕಿಚ್ಚ ಸುದೀಪ್ (Kichcha Sudeep) ತಲೆಕೆಡಿಸಿಕೊಂಡಿದ್ದಾರೆ.

ವೀಕೆಂಡ್ ಎಪಿಸೋಡ್​ಗೆ ಕಿಚ್ಚ ಸುದೀಪ್ ಬರುತ್ತಾರೆ. ಈ ವೇಳೆ ಸ್ಪರ್ಧಿಗಳಿಗೆ ಕಿಚ್ಚ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇದರ ಜತೆಗೆ ಒಂದಷ್ಟು ಫನ್ ಕೂಡ ಇರುತ್ತದೆ. ಕಳೆದ ವಾರದ ಎಪಿಸೋಡ್​ನಲ್ಲೂ ಅದು ಮುಂದುವರಿದಿದೆ. ‘ಬಿಗ್ ಬಾಸ್​ನಲ್ಲಿ 50 ಲಕ್ಷ ರೂಪಾಯಿ ವಿನ್ ಆದರೆ ಆ ಹಣವನ್ನು ಏನು ಮಾಡ್ತೀರಿ’ ಎಂದು ಪ್ರಶ್ನೆ ಮಾಡಿದರು ಸುದೀಪ್. ಇದಕ್ಕೆ ಆರ್ಯವರ್ಧನ್ ಉತ್ತರ ಕೊಟ್ಟರು.

‘ನಾನು ಹಣ ಗೆದ್ದರೆ ಊಟಕ್ಕೆ ಖರ್ಚು ಮಾಡಲ್ಲ. ಈ ಹಣವನ್ನು ನೆನಪಿನ ಕಾಣಿಕೆ ಎಂದುಕೊಳ್ಳುತ್ತೇನೆ. ಒಂದು ದೇವಸ್ಥಾನ ಕಟ್ಟಿಸ್ತೀನಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮಗೊಂದು ಕಥೆ ಬರ್ದಿದೀನಿ. ನಿರ್ಮಾಪಕ ಕೆ.ಪಿ. ಶ್ರೀಕಾಂತ್ ನನ್ನ ಫ್ರೆಂಡ್. ಬಿಗ್ ಬಾಸ್​ನಿಂದ ಹೊರ ಬಂದ ನಂತರದಲ್ಲಿ ಅವರನ್ನು ಕರೆದುಕೊಂಡು ನಿಮ್ಮ ಮನೆಗೆ ಬಂದು ಕಥೆ ಹೇಳ್ತೀನಿ. ಇದು 300 ಕೋಟಿ ರೂಪಾಯಿ ಬಜೆಟ್ ಸಿನಿಮಾ’ ಎಂದರು ಆರ್ಯವರ್ಧನ್.

ಈ ಚಿತ್ರದಲ್ಲಿ ದೆವ್ವ ಹಾಗೂ ಹೀರೋ ಎರಡೂ ಸುದೀಪ್ ಅವರಂತೆ! ಈ ವಿಚಾರವನ್ನು ಕೂಡ ಆರ್ಯವರ್ಧನ್ ಹೇಳಿದ್ದಾರೆ. ಇಷ್ಟೆಲ್ಲ ಕೇಳಿದ ನಂತರದಲ್ಲಿ ಸಿನಿಮಾದ ಕಥೆ ಏನಿರಬಹುದು ಎನ್ನುವ ಕುತೂಹಲ ಅನೇಕರಲ್ಲಿ ಮೂಡಿತು. ಇದಕ್ಕೆ ರಾಕೇಶ್ ಉತ್ತರಿಸಿದರು.

bengaluru bengaluru

ಇದನ್ನೂ ಓದಿ: ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸಿದ ವಿನೋದ್​ ಗೊಬ್ಬರಗಾಲ: ಪಾಠ ಹೇಳಿದ ಕಿಚ್ಚ ಸುದೀಪ್​​ 

‘ಹೀರೋ ವಿದೇಶದಿಂದ ಹಳ್ಳಿಗೆ ಬರ್ತಾನೆ. ಹಳ್ಳಿಯಲ್ಲಿ ದೆವ್ವದ ಕಾಟ. ದೆವ್ವ ಮನೆನೇ ಎತ್ತಿ ಬೇರೆ ಕಡೆ ಇಡುತ್ತದೆ. ದೆವ್ವನ ಸಾಯಿಸಿದರೆ ಆ ದೆವ್ವಕ್ಕಿಂತ ಪವರ್​ಫುಲ್ ಆಗಬಹುದು ಎನ್ನುವ ವಿಚಾರ ಹೀರೋಗೆ ಗೊತ್ತಾಗುತ್ತದೆ. ಹೀಗಾಗಿ, ಹೀರೋ ದೆವ್ವನ ಕೊಲ್ಲೋಕೆ ಹೋಗುತ್ತಾನೆ. ಹೀಗೆ ಕೊಲ್ಲುವಾಗ ಫೌಲ್ ಆಗುತ್ತದೆ..’ ಎಂದು ರಾಕೇಶ್ ಅವರು ಆರ್ಯವರ್ಧನ್ ಹೇಳಿದ ಕಥೆ ವಿವರಿಸುತ್ತಾ ಹೋದರು. ಇದನ್ನು ಕೇಳಿ ಸುದೀಪ್​ಗೆ ಶಾಕ್ ಆಗಿದೆ. ಅವರು ತಲೆಕೆಡಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ


bengaluru

LEAVE A REPLY

Please enter your comment!
Please enter your name here