Home Uncategorized ಸುಭಾಷ್ ಚಂದ್ರ ಬೋಸ್ ಹಂತಕರು ಕಾಂಗ್ರೆಸ್ ನವರು, ನೆಹರೂ ಅವ್ರೇ ಕೊಲ್ಲಿಸಿದ್ರು ಎಂದು ಹಲವರು ಮಾತನಾಡಿಕೊಳ್ತಾರೆ: ಬಸನಗೌಡ...

ಸುಭಾಷ್ ಚಂದ್ರ ಬೋಸ್ ಹಂತಕರು ಕಾಂಗ್ರೆಸ್ ನವರು, ನೆಹರೂ ಅವ್ರೇ ಕೊಲ್ಲಿಸಿದ್ರು ಎಂದು ಹಲವರು ಮಾತನಾಡಿಕೊಳ್ತಾರೆ: ಬಸನಗೌಡ ಪಾಟೀಲ್ ಯತ್ನಾಳ್

1
0
Advertisement
bengaluru

ಸುಭಾಷ್ ಚಂದ್ರ ಬೋಸ್ ಅವರ ಹಂತಕರು ಕಾಂಗ್ರೆಸ್ ನವರು, ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡಿದ ಅನೇಕರನ್ನು ಕಾಂಗ್ರೆಸ್ ನವರು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಹುಬ್ಬಳ್ಳಿ: ಸುಭಾಷ್ ಚಂದ್ರ ಬೋಸ್ ಅವರ ಹಂತಕರು ಕಾಂಗ್ರೆಸ್ ನವರು, ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಮಾಣಿಕವಾಗಿ ಹೋರಾಟ ಮಾಡಿದ ಅನೇಕರನ್ನು ಕಾಂಗ್ರೆಸ್ ನವರು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸುಭಾಷ್ ಚಂದ್ರ ಬೋಸ್ ರ ಸಾವಿನ ಬಗ್ಗೆ ಇಂದಿಗೂ ಗೊಂದಲ, ಸಂಶಯಗಳಿವೆ. ಕಾಂಗ್ರೆಸ್ ನವರೇ ಅವರನ್ನು ಕೊಂದಿದ್ದು, ಅದರಲ್ಲೂ ನೆಹರೂ ಅವರೇ ಕೊಲ್ಲಿಸಿದರು ಎಂದು ಹಲವರು ಮಾತನಾಡಿಕೊಳ್ಳುತ್ತಾರೆ ಎಂದು ಕೂಡ ಯತ್ನಾಳ್ ಹೇಳಿಕೆ ನೀಡಿದ್ದಾರೆ.

ಸುಭಾಷ್ ಚಂದ್ರ ಬೋಸ್ ಅವರು ಈ ದೇಶದ ಮೊದಲ ಪ್ರಧಾನಿಯಾಗಬೇಕಿತ್ತು. ಅವರಿಗೆ ಎಲ್ಲಾ ಅರ್ಹತೆಗಳಿದ್ದವು. ಆದರೆ ನೆಹರೂರವನ್ನು ಪ್ರಧಾನಿ ಮಾಡುವ ಏಕೈಕ ಉದ್ದೇಶದಿಂದ ಮಹಾತ್ಮಾ ಗಾಂಧಿಯವರು ತಪ್ಪು ನಿರ್ಧಾರ ತೆಗೆದುಕೊಂಡರು ಎಂದಿದ್ದಾರೆ.


bengaluru

LEAVE A REPLY

Please enter your comment!
Please enter your name here