Home ನಗರ ಸೈಕಲ್ ಜಾಥಾಕ್ಕೆ ಗೃಹ ಸಚಿವ ಬೊಮ್ಮಾಯಿ‌ ಚಾಲನೆ

ಸೈಕಲ್ ಜಾಥಾಕ್ಕೆ ಗೃಹ ಸಚಿವ ಬೊಮ್ಮಾಯಿ‌ ಚಾಲನೆ

24
0

ಬೆಂಗಳೂರು:

ಇಂದು ರಾಷ್ಟ್ರೀಯ ಐಕ್ಯತಾ ದಿನಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಕ್ರೀಡಾಭಿವೃದ್ಧಿ ಮಂಡಳಿ ಸಂಯುಕ್ತಾಶ್ರಯದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಸೈಕಲ್ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Cycle Rally

ಸದೃಢ ಹಾಗೂ ಆರೋಗ್ಯಕರ ಬೆಂಗಳೂರಿಗಾಗಿ ‘ಸೈಕಲ್ ಜಾಥ’ ಕಾರ್ಯ ಕ್ರಮಕ್ಕೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ‌ ಚಾಲನೆ ನೀಡಿದರು.

ನಗರದ ವಿಧಾನ ಸೌಧದದಿಂದ ಆರಂಭಗೊಂಡ ಜಾಥ ನೃಪತುಂಗ ರಸ್ತೆ, ರಿಚ್ಮಂಡ್ ಸರ್ಕಲ್, ಇಂದಿರಾನಗರ ಮಾರ್ಗವಾಗಿ ಬೊಮ್ಮನಹಳ್ಳಿಗೆ ತಲುಪಿತು.

ಈ ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹಿರಿಯ ಪೊಲೀಸ್ ಆಧಿಕಾರಿಗಳು, ಪೊಲೀಸ್ ಸಿಬ್ಬಂದಿ ಸೇರಿ ನಗರದ ಸಾರ್ವಜನಿಕರು ಪಾಲ್ಗೊಂಡಿದ್ದಾರೆ.

LEAVE A REPLY

Please enter your comment!
Please enter your name here