Home Uncategorized ಸ್ಕೂಟರ್ ಹಿಂದೆ ವೃದ್ದನನ್ನು ಧರಧರನೇ ಎಳೆದೊಯ್ದ ಆರೋಪಿಗೆ ನ್ಯಾಯಾಂಗ ಬಂಧನ

ಸ್ಕೂಟರ್ ಹಿಂದೆ ವೃದ್ದನನ್ನು ಧರಧರನೇ ಎಳೆದೊಯ್ದ ಆರೋಪಿಗೆ ನ್ಯಾಯಾಂಗ ಬಂಧನ

6
0
bengaluru

ಸ್ಕೂಟರ್ ಹಿಂದೆ ಜೋತುಬಿದ್ದ ವೃದ್ದನನ್ನು ಎಳೆದೊಯ್ದು ಅಮಾನವೀಯವಾಗಿ ವರ್ತಿಸಿದ ಪ್ರಕರಣ ಸಂಬಂಧ ಆರೋಪಿ ಸುಹೇಲ್’ಗೆ ಜ.31ರವರೆಗೆ ನ್ಯಾಯಾಂದ ಬಂಧನಕ್ಕೊಪ್ಪಿಸಿ ಎಸಿಎಂಎಂ ನ್ಯಾಯಾಲಯವು ಬುಧವಾರ ಆದೇಶಿಸಿದೆ. ಬೆಂಗಳೂರು: ಸ್ಕೂಟರ್ ಹಿಂದೆ ಜೋತುಬಿದ್ದ ವೃದ್ದನನ್ನು ಎಳೆದೊಯ್ದು ಅಮಾನವೀಯವಾಗಿ ವರ್ತಿಸಿದ ಪ್ರಕರಣ ಸಂಬಂಧ ಆರೋಪಿ ಸಾಹಿಲ್ ಯಾಸಿನ್ ಲೋಟಿಯಾಗೆ ಜ.31ರವರೆಗೆ ನ್ಯಾಯಾಂದ ಬಂಧನಕ್ಕೊಪ್ಪಿಸಿ ಎಸಿಎಂಎಂ ನ್ಯಾಯಾಲಯವು ಬುಧವಾರ ಆದೇಶಿಸಿದೆ.

ನಾಯಂಡಹಳ್ಳಿ ನಿವಾಸಿ ಸಾಹಿಲ್ ಯಾಸಿನ್ ಲೋಟಿಯಾ ಎಂಬಾತನನ್ನು ಗೋವಿಂದರಾಜನಗರ ಪೊಲೀಸರು ಮಂಗಳವಾರ ಬಂಧಿಸಿ. ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದರು. ಇದರಂತೆ ನಿನ್ನೆ 34ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಗಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇದೀಗ ಆರೋಪಿಯನ್ನು ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ. ತಪ್ಪಿನಿಂದಾಗುವ ಪರಿಣಾಮದ ಭಯದಿಂದ ವಾಹನ ನಿಲ್ಲಿಸದೆ ಮುಂದೆ ಸಾಗಿದ್ದೆ ಎಂದು ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ.

bengaluru

ಈ ನಡುವೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಮುತ್ತಪ್ಪ ಶಿವಯೋಗಿ ತೋಂಟಾಪುರ (71) ಅವರು, ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬುಧವಾರ ಬಿಡುಗಡೆಯಾಗಿದ್ದಾರೆಂದು ತಿಳಿದುಬಂದಿದೆ.

bengaluru

LEAVE A REPLY

Please enter your comment!
Please enter your name here