Home Uncategorized ಸ್ಯಾಂಕಿ ಕೆರೆ ಫ್ಲೈಓವರ್ ಯೋಜನೆಯಲ್ಲಿ ಹಲವು ಲೋಪದೋಷಗಳಿವೆ: ತಜ್ಞರು

ಸ್ಯಾಂಕಿ ಕೆರೆ ಫ್ಲೈಓವರ್ ಯೋಜನೆಯಲ್ಲಿ ಹಲವು ಲೋಪದೋಷಗಳಿವೆ: ತಜ್ಞರು

7
0
bengaluru

ಸ್ಯಾಂಕಿ ಕೆರೆ ಫ್ಲೈಓವ್ ಯೋಜನೆಯಲ್ಲಿ ಹಲವಾರು ಲೋಪದೋಷಗಳಿವೆ ಎಂದು ನಾಗರೀಕ ಕಾರ್ಯಕರ್ತರು ಹಾಗೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು: ಸ್ಯಾಂಕಿ ಕೆರೆ ಫ್ಲೈಓವ್ ಯೋಜನೆಯಲ್ಲಿ ಹಲವಾರು ಲೋಪದೋಷಗಳಿವೆ ಎಂದು ನಾಗರೀಕ ಕಾರ್ಯಕರ್ತರು ಹಾಗೂ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಲ್ಲೇಶ್ವರಂನ ಕೆನರಾ ಯೂನಿಯನ್‌ನಲ್ಲಿ ಸಿಟಿಜನ್ ಫಾರ್ ಸ್ಯಾಂಕಿ (ಸಿಎಫ್‌ಎಸ್) ಬುಧವಾರ ಸಭೆಯೊಂದನ್ನು ನಡೆಸಿದ್ದು, ಈ ಸಭೆಯಲ್ಲಿ ಭಾಗವಿಸಿದ್ದ ಸ್ಯಾಂಕಿ ರಸ್ತೆಯ ಮೇಲ್ಸೇತುವೆ ನಿವಾಸಿಗಳು, ನಾಗರಿಕ ಕಾರ್ಯಕರ್ತರು ಮತ್ತು ನಗರದ ತಜ್ಞರು ಸರ್ಕಾರ ಯೋಜನೆ ವಿರುದ್ಧ ಭಾರೀ ಟೀಕೆಗಳನ್ನು ವ್ಯಕ್ತಪಡಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಚಲನಶೀಲತೆ ತಜ್ಞ ಪ್ರೊ ಆಶಿಶ್ ವರ್ಮಾ ಅವರ ಮಾತನಾಡಿ, ಫ್ಲೈಓವರ್‌ಗಳು ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ, ಸಂಚಾರ ದಟ್ಟಣೆ ಸಮಸ್ಯೆಯನ್ನು ಇತರ ಭಾಗಗಳಿಗೆ ವರ್ಗಾಯಿಸುತ್ತವೆಯಷ್ಟೇ ಎಂದು ಹೇಳಿದ್ದಾರೆ.

ಈ ಪ್ರಾಜೆಕ್ಟ್‌ಗೆ ಸಮಗ್ರ ನಗರ ಯೋಜನೆ, ಮುನ್ಸೂಚನೆಯ ಅಗತ್ಯವಿದೆ ಸರ್ಕಾರ ಲಘು ಬಸ್, ಮೆಟ್ರೋ ರೈಲು, ನಗರ ರೈಲು ಇತ್ಯಾದಿಗಳಂತಹ ಪರ್ಯಾಯ ಯೋಜನೆಗಲನ್ನು ಅಭಿವೃದ್ಧಿಪಡಿಸಬೇಕು. ಜೊತೆಗೆ, ಯಾವುದೇ ಯೋಜನೆ ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಬೇಕು. ನಂತರ ವಿವರವಾದ ಯೋಜನಾ ವರದಿ  (ಡಿಪಿಆರ್) ಸಿದ್ಧಪಡಿಸಬೇಕು. ಆದರೆ, ಸ್ಯಾಂಕಿ ಕೆರೆ ಫ್ಲೈಓರ್ ಯೋಜನೆ ವಿಚಾರದಲ್ಲಿ ಇಂತಹ ಯಾವುದೇ ಪ್ರಕ್ರಿಯೆಗಳೂ ನಡೆದಿಲ್ಲ. ಕಾರ್ಯಸಾಧ್ಯವಾದ ಅಧ್ಯಯನ ನಡೆಸುವ ಬದಲು ನೇರವಾಗಿ ಡಿಪಿಆರ್ ಹಂತಕ್ಕೆ ಯೋಜನೆ ಹೋಗಿದೆ. ಈ ಮೂಲಕ ಸಾರ್ವಜನಿಕರನ್ನು ಮೂರ್ಖರನ್ನಾಗಿಸುವ ಪ್ರಯತ್ನಗಳಾಗಿವೆ ಎಂದು ತಿಳಿಸಿದ್ದಾರೆ.

bengaluru

ಬಸ್ ಪ್ರಯಾಣಿಕ ವೇದಿಕೆಯ ಸಂಸ್ಥಾಪಕ ಶಾಹೀನ್ ಶಾಸಾ ಅವರು ಮಾತನಾಡಿ, ಫ್ಲೈ ಓವರ್ ಯೋಜನೆ ಬದಲಿಗೆ ಬಸ್ ಟಿಕೆಟ್ ದರ ಕಡಿಮೆ ಮಾಡುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿತ್ತು. ಬಸ್ ಗಳು ಹೆಚ್ಚು ಜನರನ್ನು ಹೊತ್ತೊಯ್ಯುವುದರಿಂದ ಸಂಚಾರ ಸಮಸ್ಯೆಗಳು ಕಡಿಮೆಯಾಗುತ್ತವೆ. ಪೀಕ್ ಅವರ್ ನಲ್ಲಿ ರಸ್ತೆಗಳಲ್ಲಿ ಕೇವಲ 5,000 ಬಿಎಂಟಿಸಿ ಬಸ್ಗಳು ಸಂಚಾರ ಮಾಡಿದರೆ, 2.75 ಲಕ್ಷ ಕಾರುಗಳು ಸಂಚರಿಸುತ್ತಿರುತ್ತವೆ. ಸರ್ಕಾರ ರೂ.1,350 ಕೋಟಿಯನ್ನು ಬಸ್ ಗಳ ಮೇಲೆ ಹೂಡಬೇಕು. ರೂ.100 ಕೋಟಿಯನ್ನು ಹೆಚ್ಚುವರಿ ಸಿಬ್ಬಂದಿಗಳಿಗಾಗಿ ವ್ಯಯಿಸಬೇಕು ಎಂದು ಹೇಳಿದ್ದಾರೆ.

ವಕೀಲ ಹರೀಶ್ ನರಸಪ್ಪ ಮಾತನಾಡಿ, ಮೇಲ್ಸೇತುವೆ ಸಮಗ್ರ ಅಭಿವೃದ್ಧಿ ಯೋಜನೆಯ ಭಾಗವಾಗಿಲ್ಲ. ಇದು ಯೋಜನೆಗೆ ಸವಾಲಾಗಿ ಪರಿಣಮಿಸಬಹುದು ಎಂದಿದ್ದಾರೆ.

ಬಿಬಿಎಂಪಿ ಇಂಜಿನಿಯರ್-ಇನ್-ಚೀಫ್ ಬಿ.ಎಸ್.ಪ್ರಹ್ಲಾದ್ ಅವರು ಮಾತನಾಡಿ, ಯೋಜನೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.

ಬಿಬಿಎಂಪಿ ಸಾರ್ವಜನಿಕರು ಮತ್ತು ತಜ್ಞರ ಸಲಹೆಗಳನ್ನು ಸ್ವಾಗತಿಸುತ್ತದೆ. ಪ್ರಸ್ತಾವಿತ 60 ಕೋಟಿ ರೂಯನ್ನು ಬಾಷ್ಯಂ ವೃತ್ತದಿಂದ ಮಲ್ಲೇಶ್ವರಂ 18ನೇ ಕ್ರಾಸ್ ನಲ್ಲಿ ರಸ್ತೆ ವಿಸ್ತರಣೆ ಮತ್ತು ಸ್ಯಾಂಕಿ ರಸ್ತೆ ಮೇಲ್ಸೇತುವೆ ಯೋಜನೆಗೆ ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗೊರಗುಂಟೆಪಾಳ್ಯ, ಕೆಆರ್ ಪುರಂ ಸಿಲ್ಕ್ ಬೋರ್ಡ್ ಮತ್ತಿತರ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ತಗ್ಗಿಸಲು ಬಿಬಿಎಂಪಿ ಕಾರ್ಯೋನ್ಮುಖವಾಗಿದೆ. ಬಾಷ್ಯಂ ವೃತ್ತದಿಂದ ಮುಕ್ತ ಸಂಚಾರಕ್ಕೆ ಸಮಸ್ಯೆಗಳಾಗುತ್ತಿದೆ. ಇದಲ್ಲದೆ, ದೀರ್ಘ ಟ್ರಾಫಿಕ್‌ನಿಂದಾಗಿ ಮಾಲಿನ್ಯ ಹೆಚ್ಚಾಗುತ್ತಿದ್ದು, ಜನರು ಹತಾಶರಾಗುತ್ತಿದ್ದಾರೆ, ಪೀಕ್ ಅವರ್‌ಗಳಲ್ಲಿ 10,000 ಕ್ಕೂ ಹೆಚ್ಚು ವಾಹನಗಳು ರಸ್ತೆಗಿಳಿದರೆ, ಜಂಕ್ಷನ್ ಸುಧಾರಣೆಯ ಅವಶ್ಯಕತೆ ಎದುರಾಗುತ್ತದೆ ಎಂದಿದ್ದಾರೆ.

bengaluru

LEAVE A REPLY

Please enter your comment!
Please enter your name here