Home Uncategorized ಸ್ಯಾಂಟ್ರೊ ರವಿ ಪ್ರಕರಣ: ಕುಮಾರಕೃಪ ಅತಿಥಿಗೃಹ ಅಧಿಕಾರಿ ಎತ್ತಂಗಡಿ

ಸ್ಯಾಂಟ್ರೊ ರವಿ ಪ್ರಕರಣ: ಕುಮಾರಕೃಪ ಅತಿಥಿಗೃಹ ಅಧಿಕಾರಿ ಎತ್ತಂಗಡಿ

36
0
Advertisement
bengaluru

ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಕೃಪ ಅತಿಥಿಗೃಹ ಅಧಿಕಾರಿಯನ್ನು ಎತ್ತಂಗಡಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಕೃಪ ಅತಿಥಿಗೃಹ ಅಧಿಕಾರಿಯನ್ನು ಎತ್ತಂಗಡಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಸ್ಯಾಂಟ್ರೊ ರವಿ ಕಾರ್ಯಸ್ಥಾನ ಬೆಂಗಳೂರಿನ ಕುಮಾರಕೃಪ ಅತಿಥಗೃಹ ಆಗಿತ್ತು ಎಂಬ ವರದಿಗಳ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕುಮಾರಕೃಪ ಅತಿಥಿಗೃಹದ ಅಧಿಕಾರಿಯನ್ನು ಎತ್ತಂಗಡಿ ಮಾಡಿದೆ. ಸ್ಯಾಂಟ್ರೊ ರವಿ ಕುಮಾರಕೃಪ ಅತಿಥಿ ಗೃಹದಲ್ಲೇ ವರ್ಗಾವಣೆ ಸೇರಿದಂತೆ ಕೆಲ ವ್ಯವಹಾರಗಳನ್ನು ಮಾಡುತ್ತಿದ್ದ ವರದಿಗಳ ಹಿನ್ನೆಲೆಯಲ್ಲಿ ಕುಮಾರಕೃಪ ಅತಿಥಿ ಗೃಹ ಸಹಾಯಕ ವ್ಯವಸ್ಥಾಪಕ ದೇವರಾಜ್ ಅವರನ್ನು ಸರ್ಕಾರ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸ್ಯಾಂಟ್ರೋ ರವಿ ವಿರುದ್ಧ ತನಿಖೆಗೆ ಸಿಎಂ ಬೊಮ್ಮಾಯಿ ಸೂಚನೆ

ಕುಮಾರಕೃಪ ಅತಿಥಿ ಗೃಹ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ವ್ಯಾಪ್ತಿಗೆ ಸೇರಿದ್ದಾಗಿದ್ದು, ದೇವರಾಜ್ ಅವರನ್ನು ವರ್ಗಾಯಿಸಿ ಅವರಿಗೆ ಯಾವುದೇ ಹುದ್ದೆ ನೀಡದೆ ಕೇಂದ್ರ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.

bengaluru bengaluru

ಸ್ಯಾಂಟ್ರೋ ರವಿ ಬಂಧನಕ್ಕೆ ತೀವ್ರ ಶೋಧ
ಇನ್ನು ಸ್ಯಾಂಟ್ರೋ ರವಿ ಬಂಧನಕ್ಕೆ ನಗರ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ. ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ವರದಕ್ಷಿಣೆ ಕಿರುಕುಳ, ವಂಚನೆ, ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಪ್ರಕರಣ ದಾಖಲಾಗಿ 5 ದಿನಗಳು ಕಳೆದರೂ ಸ್ಯಾಂಟ್ರೋ ರವಿ ಮಾತ್ರ ಪೊಲೀಸರ ಕೈಗೆ ಸಿಕ್ಕಿಲ್ಲ.. ಸದ್ಯ ತಲೆಮರೆಸಿಕೊಂಡಿರುವ ಸ್ಯಾಂಟ್ರೋ ರವಿ ಬಂಧನಕ್ಕೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ವಂಚನೆ, ವರದಕ್ಷಿಣೆ, ಕಿರುಕುಳ, ಅತ್ಯಾಚಾರ ಆರೋಪದಡಿ ಸ್ಯಾಂಟ್ರೋ ರವಿ ವಿರುದ್ಧ ಜನವರಿ 2 ರಂದು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನ್ನ ವಿರುದ್ಧ ದೂರುಗಳು ದಾಖಲಾಗುತ್ತಿದ್ದಂತೆ ಆರೋಪಿ ಸ್ಯಾಂಟ್ರೋ ರವಿ ಪರಾರಿಯಾಗಿದ್ದಾನೆ. 

ಇದನ್ನೂ ಓದಿ: ಕುಮಾರ ಕೃಪವೇ ಸ್ಯಾಂಟ್ರೋ ರವಿ ಹೆಡ್ಡಾಫೀಸ್: ಅನೇಕ ಸಚಿವರ ಜೊತೆಗಿನ ಆತನ ಫೋಟೋ ಹಂಚಿಕೊಂಡ ಕಾಂಗ್ರೆಸ್

ಪೊಲೀಸ್ ವಿಶೇಷ ತಂಡ ರಚನೆಟ
ರವಿ ಬಂಧನಕ್ಕೆ ಈತನ ಪತ್ತೆಗಾಗಿ ಡಿಸಿಪಿ ಮುತ್ತುರಾಜ್ ಮಾರ್ಗದರ್ಶನದಲ್ಲಿ ಎಸಿಪಿ ಶಿವಶಂಕರ್ ನೇತೃತ್ವದಲ್ಲಿ ರಚಿಸಿರುವ ವಿಶೇಷ ತಂಡದಲ್ಲಿ ಮೂವರು ಇನ್ಸಪೆಕ್ಟರ್, ಐದಕ್ಕೂ ಹೆಚ್ಚು ಸಬ್ ಇನ್ಸಪೆಕ್ಟರ್‌ಗಳು ಒಳಗೊಂಡಿರುವ ವಿಶೇಷ ತಂಡಗಳನ್ನು ರಟಿಸಲಾಗಿದ್ದು, ಈ ತಂಡಗಳು ಶೋಧ ಕೈಗೊಂಡಿವೆ. ಪೊಲೀಸರು ಬೆಂಗಳೂರು ಹಾಗೂ ಮೈಸೂರಿನಲ್ಲಿ ಸ್ಯಾಂಟ್ರೋ ರವಿಗಾಗಿ ಹುಡುಕಾಟ ನಡೆಸುತ್ತಿದ್ದು, ಒಡನಾಡಿ ಸಂಸ್ಥೆಯಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ನಡುವೆ ಸ್ಯಾಂಟ್ರೋ ರವಿ ತನ್ನ ವಕೀಲರ ಮೂಲಕ ಮೈಸೂರು ಸೆಷನ್ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾನೆ. 

ಇದನ್ನೂ ಓದಿ: ಸ್ಯಾಂಟ್ರೋ ರವಿ ವಿರುದ್ಧ ಯಾವುದೇ ದೂರು ಇದ್ದರೆ ತನಿಖೆ: ಗೃಹ ಸಚಿವ ಆರಗ ಜ್ಞಾನೇಂದ್ರ

ವೈರಲ್ ಆಡಿಯೋ ಬಳಿಕ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಸ್ಯಾಂಟ್ರೋ ರವಿ
ವರ್ಗಾವಣೆ ವಿಚಾರದಲ್ಲಿ ಡಿವೈಎಸ್?ಪಿ ಜೊತೆಗಿನ ಮಾತುಕತೆಯ ಆಡಿಯೋ ವೈರಲ್ ಆದ ನಂತರ ರಾಜ್ಯದಲ್ಲಿ ಸ್ಯಾಂಟ್ರೋ ರವಿ ಹೆಸರು ಮುನ್ನಲೆಗೆ ಬಂದಿತ್ತು. ಇದಾದ ನಂತರ ಹಲವು ಪ್ರಭಾವಿ ರಾಜಕೀಯ ನಾಯಕರ ಜೊತೆ ಚಾಟಿಂಗ್ ನಡೆಸಿರುವ ಹಾಗೂ ತೆಗೆಸಿಕೊಂಡಿದ್ದ ಫೋಟೋಗಳು ವೈರಲ್ ಆದವು. ಸಿಎಂ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ, ಸಚಿವ ಎಸ್.ಟಿ.ಸೋಮಶೇಖರ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜೊತೆ ಮಾತ್ರವಲ್ಲದೆ ಉನ್ನತ ಹುದ್ದೆಗಳಲ್ಲಿ ಇರುವ ಅಧಿಕಾರಿಗಳೊಂದಿಗೆ ಮಾಡಿದ್ದಾನೆ ಎನ್ನಲಾದ ವಾಟ್ಸ್ಆಯಪ್ ಚಾಟ್ಗಳು ಹರಿದಾಡುತ್ತಿವೆ. ಇದನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್, ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದೆ.


bengaluru

LEAVE A REPLY

Please enter your comment!
Please enter your name here