Home Uncategorized ಸ್ವಾತಂತ್ರ್ಯವೆಂದರೆ ಘನತೆಯ ಬದುಕಿನ ಗ್ಯಾರೆಂಟಿ: ಸಿಎಂ ಸಿದ್ದರಾಮಯ್ಯ

ಸ್ವಾತಂತ್ರ್ಯವೆಂದರೆ ಘನತೆಯ ಬದುಕಿನ ಗ್ಯಾರೆಂಟಿ: ಸಿಎಂ ಸಿದ್ದರಾಮಯ್ಯ

5
0
Advertisement
bengaluru

ದ್ವೇಷ, ವೈರುಧ್ಯಗಳ ಕತ್ತಲು ಕಳೆದು ಎಲ್ಲರೆದೆಯಲ್ಲಿ ಸ್ನೇಹ, ಸೌಹಾರ್ದತೆ, ಭಾತೃತ್ವದ ಜ್ಯೋತಿ ಬೆಳಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದು, ನಾಡಿನ ಜನತೆಗೆ 77ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿದ್ದಾರೆ. ಬೆಂಗಳೂರು: ನಾಡಿನ ಪ್ರತಿಯೊಬ್ಬ ಪ್ರಜೆಗೂ ಘನತೆಯ ಬದುಕಿನ ಸ್ವಾತಂತ್ರ್ಯವನ್ನು ಸಾಕಾರಗೊಳಿಸಲು ನಮ್ಮ ಸರ್ಕಾರವು ಗ್ಯಾರೆಂಟಿ ಯೋಜನೆಗಳನ್ನು ರೂಪಿಸಿದೆ. ಸ್ವಾತಂತ್ರ್ಯವೆಂದರೆ ಘನತೆಯ ಬದುಕಿನ ಗ್ಯಾರೆಂಟಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ನಾಡಿನ ಜನತೆಗೆ 77ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, 1947 ಆಗಸ್ಟ್ 15 ರಂದು ಕೋಟ್ಯಂತರ ಭಾರತೀಯರ ತ್ಯಾಗ, ಬಲಿದಾನದ ಫಲವಾಗಿ ನಮಗೆ ದೊರೆತಿರುವ ಈ ಸ್ವಾತಂತ್ರ್ಯವನ್ನು ಸಮಾಜದಲ್ಲಿರುವ ಅಸಮಾನತೆ, ಶೋಷಣೆ, ತಾರತಮ್ಯಗಳ ನಿರ್ಮೂಲನೆಗೈಯ್ಯುವ ಶಪಥದೊಂದಿಗೆ ಅರ್ಥಪೂರ್ಣವಾಗಿ ಆಚರಿಸೋಣ. ದ್ವೇಷ, ವೈರುಧ್ಯಗಳ ಕತ್ತಲು ಕಳೆದು ಎಲ್ಲರೆದೆಯಲ್ಲಿ ಸ್ನೇಹ, ಸೌಹಾರ್ದತೆ, ಭಾತೃತ್ವದ ಜ್ಯೋತಿ ಬೆಳಗಲಿ ಎಂದು ಹಾರೈಸುತ್ತೇನೆ. ನಾಡಬಂಧುಗಳಿಗೆ ಸ್ವಾತಂತ್ರ್ಯೋತ್ಸವದ ಶುಭಕಾಮನೆಗಳು ಎಂದು ಹೇಳಿದ್ದಾರೆ.
– ಮುಖ್ಯಮಂತ್ರಿ @siddaramaiah#IndependenceDay2023 pic.twitter.com/Nc83gRaol4

 

bengaluru bengaluru

— CM of Karnataka (@CMofKarnataka) August 15, 2023

ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿ, ‘ನಾಡಿನ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು’ ಎಂದು ಹೇಳಿದೆ.

ರಾಜ್ಯ ಬಿಜೆಪಿ ಟ್ವೀಟ್ ಮಾಡಿ, ದೇಶದ ಸಮಸ್ತ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಬ್ರಿಟೀಷರ ವಿರುದ್ಧ ಸಮರ ಸಾರಿದ ಕರುನಾಡಿನ ಧೀರ ಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು ಶತ ಶತ ನಮನಗಳು’ ಎಂದು ತಿಳಿಸಿದೆ.

77ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ನಗರದ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಇನ್ನು ಕೆಲವೇ ಹೊತ್ತಿನಲ್ಲಿ ಆರಂಭಗೊಳ್ಳಲಿದೆ.

9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಧ್ವಜಾರೋಹಣ ಮಾಡಲಿದ್ದಾರೆ. ಕಾರ್ಯಕ್ರಮದ ಹಿನ್ನಲೆಯಲ್ಲಿ ಭದ್ರತಾ ದೃಷ್ಟಿಯಿಂದ ಬೆಂಗಳೂರು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.


bengaluru

LEAVE A REPLY

Please enter your comment!
Please enter your name here