Home Uncategorized ಹಂಪಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಕ್ಕೆ ಮನಸೋತ ಪ್ರವಾಸಿಗರು

ಹಂಪಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಕ್ಕೆ ಮನಸೋತ ಪ್ರವಾಸಿಗರು

7
0
Advertisement
bengaluru

ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಗಳು, ಹಂಪಿಯಲ್ಲಿ ರಾರಾಜಿಸುತ್ತಿದ್ದು, ಈ ಚಿತ್ರಗಳಿಗೆ ಪ್ರವಾಸಿಗರು ಮನಸೋತಿದ್ದಾರೆ. ಹುಬ್ಬಳ್ಳಿ: ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಗಳು, ಹಂಪಿಯಲ್ಲಿ ರಾರಾಜಿಸುತ್ತಿದ್ದು, ಈ ಚಿತ್ರಗಳಿಗೆ ಪ್ರವಾಸಿಗರು ಮನಸೋತಿದ್ದಾರೆ.

ಹಂಪಿಯಲ್ಲಿ ಕೆಲದಿನಗಳ ಹಿಂದಷ್ಟೇ ಜಿ 20 ಸಭೆ ನಡೆದಿತ್ತು. ಸಭೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳು ಈ ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಚಿತ್ರಗಳು ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಗಳು ವಿಜಯನಗರ, ಹಂಪಿಯ ಪರಂಪರೆಯನ್ನು ಸಾರುತ್ತಿದೆ. ಇಲ್ಲಿನ ಹಳೆಯ ಮಾರುಟ್ಟೆ, ಜನರ ಖರೀದಿ, ಕುದುರೆ, ಆನೆ ಹಾಗೂ ಇತರೆ ಪ್ರಾಣಿಗಳನ್ನು ಸುಂದರ ರೀತಿಯಲ್ಲಿ ಬಿಡಿಸಲಾಗಿದೆ. ರಾಜಮನೆತನದ ಚಿತ್ರ ಹಲವರ ಕಣ್ಮನ ಸೆಳೆಯುತ್ತಿದೆ ಎಂದು ಜಿ20 ಪ್ರತಿನಿಧಿಗಳಿಗೆ ಪ್ರವಾಸಿ ತಾಣಗಳ ಪರಿಚಯಿಸಿದ ಗೈಡ್ ನಾಗರಾಜ್ ಕೆ ಎಂಬವವರು ಹೇಳಿದ್ದಾರೆ.

ಹಂಪಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದ. ಹಂಪಿಯಲ್ಲಿರುವ ಸ್ಮಾರಕಗಳು, ದೇವಾಲಯಗಳು ಮತ್ತು ಇತರ ಪಾರಂಪರಿಕ ಸ್ಥಳಗಳ ಚಿತ್ರಗಳು ಪ್ರವಾಸಿಗರ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.

bengaluru bengaluru

ಹಂಪಿಯಲ್ಲಿ ಇಂದು ಪ್ರೀ ವೆಡ್ಡಿಂಗ್ ಶೂಟ್‌ಗಳು ಜನಪ್ರಿಯವಾಗುತ್ತಿವೆ. ಆದರೆ, ಫೋಟೋ ಅಥವಾ ಫಿಲ್ಮ್ ಶೂಟ್‌ಗಳಿಗೆ ಸ್ಥಳೀಯ ಅಧಿಕಾರಿಗಳ ಅನುಮತಿ ಅಗತ್ಯವಿದೆ. ಇಲ್ಲಿ ಸೆಲ್ ಫೋನ್ ಫೋಟೋಗ್ರಫಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಮಾಹಿತಿ ನೀಡಿದರು.

ಹಂಪಿಯ ಖ್ಯಾತ ಛಾಯಾಗ್ರಾಹಕ ಶಿವಶಂಕರ ಬಣಗಾರ್ ಮಾತನಾಡಿ, ಎಐ ಚಿತ್ರಗಳು ಆಕರ್ಷಕವಾಗಿವೆ. ಆದರೆ ಅವು ಹಂಪಿಯ ಸ್ಮಾರಕಗಳಿಗೆ ನ್ಯಾಯ ಒದಗಿಸುತ್ತಿಲ್ಲ. ಚಿತ್ರಗಳು ಉತ್ತರ ಭಾರತದಲ್ಲಿ ಇರುವ ದೇವಾಲಯಗಳನ್ನು ಹೋಲುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here