Home Uncategorized ಹಂಪಿ ಸ್ಮಾರಕದ ಮೇಲೆ ನೃತ್ಯದ ರೀಲ್ಸ್ ಮಾಡಿ ಬಂಧನಕ್ಕೊಳಗಾಗಿದ್ದ ದೀಪತ್ ಗೌಡಗೆ ಜಾಮೀನು

ಹಂಪಿ ಸ್ಮಾರಕದ ಮೇಲೆ ನೃತ್ಯದ ರೀಲ್ಸ್ ಮಾಡಿ ಬಂಧನಕ್ಕೊಳಗಾಗಿದ್ದ ದೀಪತ್ ಗೌಡಗೆ ಜಾಮೀನು

38
0
Advertisement
bengaluru

ರೀಲ್ಸ್​ಗಾಗಿ ಹಂಪಿಯ 14ನೇ ಶತಮಾನದ ಸ್ಮಾರಕವನ್ನೇರಿ ನೃತ್ಯ ಮಾಡಿ ಬಂಧನಕ್ಕೊಳಗಾಗಿದ್ದ ಇನ್ ಸ್ಟಾಗ್ರಾಂ ಖ್ಯಾತಿಯ ದೀಪಕ್ ಗೌಡಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಹೊಸಪೇಟೆ: ರೀಲ್ಸ್​ಗಾಗಿ ಹಂಪಿಯ 14ನೇ ಶತಮಾನದ ಸ್ಮಾರಕವನ್ನೇರಿ ನೃತ್ಯ ಮಾಡಿ ಬಂಧನಕ್ಕೊಳಗಾಗಿದ್ದ ಇನ್ ಸ್ಟಾಗ್ರಾಂ ಖ್ಯಾತಿಯ ದೀಪಕ್ ಗೌಡಗೆ (28) ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಹಂಪಿಯ ಹೇಮಕೂಟ ಬೆಟ್ಟದಲ್ಲಿ ದೀಪಕ್ ಗೌಡ ಕುಣಿದು ಕುಪ್ಪಳಿಸುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

14ನೇ ಶತಮಾನದ ಪುರಾತನ ಸ್ಮಾರಕದ ಮಂಟಪಕ್ಕೆ ಹತ್ತುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಹಂಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಗೌಡರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ದೀಪಕ್ ನನ್ನು ಬಂಧನಕ್ಕೊಳಪಡಿಸಿದ್ದರು.

ಹೊಸಪೇಟೆ ತಾಲೂಕು ನ್ಯಾಯಾಲಯ ದೀಪಕ್’ಗೆ ಜಾಮೀನು ಮಂಜೂರು ಮಾಡಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

bengaluru bengaluru

ಫೆಬ್ರವರಿ 27 ರಂದು ಘಟನೆ ವರದಿಯಾಗಿದ್ದು. ಆರೋಪಿಯನ್ನು ಮಾರ್ಚ್ ಮೊದಲ ವಾರದಲ್ಲಿ ಬಂಧಿಸಲಾಯಿತು. ವಿಡಿಯೋ ವೈರಲ್ ಆದ ಬಳಿಕ ತಲೆಮರೆಸಿಕೊಂಡಿದ್ದ ಆತನನ್ನು ಬಂಧಿಸಲು ವಿಶೇಷ ತಂಡ ರಚಿಸಲಾಗಿತ್ತು. 2 ಲಕ್ಷ ರೂ.ಗಳ ಶ್ಯೂರಿಟಿ ಮೇಲೆ ಇದೀಗ ದೀಪಕ್’ನನ್ನು ಬಿಡುಗಡೆ ಮಾಡಲಾಗಿದೆ. ಜಾಮೀನು ಆದೇಶದಲ್ಲಿನ ಷರತ್ತುಗಳ ಪ್ರಕಾರ ಆರೋಪಿಯು ಪ್ರತಿ ತಿಂಗಳು ಹಂಪಿ ಠಾಣೆಗೆ ಭೇಟಿ ನೀಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸುವವರಿಗೆ ಈ ಘಟನೆ ತಕ್ಕ ಪಾಠವಾಗಲಿದೆ ಎಂದು ಹಂಪಿ ಮಾರ್ಗದರ್ಶಕರ ಸಂಘದ ಸದಸ್ಯರು ಹೇಳಿದ್ದಾರೆ.

ಹಂಪಿ ಒಂದು ಸೂಕ್ಷ್ಮ ಸ್ಥಳವಾಗಿದೆ. ಪ್ರವಾಸಿಗರು ಸ್ಮಾರಕಗಳಿಗೆ ಮತ್ತು ಸ್ಥಳೀಯ ಸಂಸ್ಕೃತಿಗೆ ಅಗೌರವ ತೋರಿಸಲು ಪ್ರಯತ್ನಿಸಿದರೆ ಅದು ಜನರನ್ನು ಪ್ರಚೋದಿಸಿದಂತಾಗುತ್ತದೆ. ಇಲ್ಲಿನ ಕೆಲವು ದೇವಾಲಯಗಳಲ್ಲಿ ದಿನನಿತ್ಯದ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತದೆ. ಆದರೆ, ಕೆಲವೊಮ್ಮೆ ಪ್ರವಾಸಿಗರು ಮದ್ಯ ಸೇವಿಸಿ ಇಲ್ಲಿಗೆ ಬಂದು ಫೋಟೋ ಶೂಟ್ ಮಾಡುತ್ತಾರೆಂದು ಗೈಡ್ ಒಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.


bengaluru

LEAVE A REPLY

Please enter your comment!
Please enter your name here