Home Uncategorized ಹಣದ ಆಮಿಷಕ್ಕೆ ಮರುಳಾಗದಿರಿ: ಮತದಾರರಿಗೆ ಸಚಿವ ವಿ.ಸೋಮಣ್ಣ ಮನವಿ

ಹಣದ ಆಮಿಷಕ್ಕೆ ಮರುಳಾಗದಿರಿ: ಮತದಾರರಿಗೆ ಸಚಿವ ವಿ.ಸೋಮಣ್ಣ ಮನವಿ

9
0
bengaluru

ಹಣದ ಆಮಿಷಕ್ಕೆ ಮರುಳಾಗದಿರಿ ಎಂದು ಮತದಾರರಿಗೆ ವಸತಿ ಸಚಿವ ವಿ.ಸೋಮಣ್ಣ ಅವರು ಮಂಗಳವಾರ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರು: ಹಣದ ಆಮಿಷಕ್ಕೆ ಮರುಳಾಗದಿರಿ ಎಂದು ಮತದಾರರಿಗೆ ವಸತಿ ಸಚಿವ ವಿ.ಸೋಮಣ್ಣ ಅವರು ಮಂಗಳವಾರ ಮನವಿ ಮಾಡಿಕೊಂಡಿದ್ದಾರೆ.

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಡಯಾಲಿಸಿಸ್ ಕೇಂದ್ರದ ಮೈದಾನದಲ್ಲಿ, ಸ್ವಾವಲಂಬಿ ಜೀವನ ಸಾಗಿಸಲು 433 ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಸಚಿವರು ಮಾತನಾಡಿದರು.

ರಾತ್ರಿ ವೇಳೆಯಲ್ಲಿ ಹಣ ಹಂಚಿ ಆಮಿಷ ಒಡ್ಡುವವರಿಗೆ ಜನರು ಮರುಳಾಗಬಾರದು. ಯಾವ ಯಾವ ಕಾಮಗಾರಿಗಳು ನಡೆದಿದೆ ಎಂಬುದನ್ನು ನಾಗರೀಕರೇ ಮೌಲ್ಯಮಾಪನ ಮಾಡಬೇಕು ಎಂದು ಹೇಳಿದರು.

ಆಮಿಷಕ್ಕೊಳಗಾಗಿ ಪಡೆದ ಹಣ ಒಂದು-ಎರಡು ದಿನಗಳು ಮಾತ್ರ ಇರುತ್ತದೆ. ಆದರೆ, ಸಮರ್ಥ ಅಭ್ಯರ್ಥಿಗೆ ನೀಡುವ ಮತವು ಸಾರ್ವಕಾಲಿಕ ಸೇವೆಯನ್ನು ನೀಡುತ್ತದೆ ಎಂದು ತಿಳಿಸಿದರು. ಇದೇ ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೇ ಇರುವವರು ಆದಷ್ಟು ಬೇಗ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.

bengaluru

ಹೊಲಿಗೆ ಯಂತ್ರ ವಿತರಣೆಯು ಮಹಿಳೆಯರಲ್ಲಿ ಸ್ವಾವಲಂಬನೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಕಲ್ಯಾಣ ಕಾರ್ಯಕ್ರಮದಡಿ ತರಬೇತಿ ಪಡೆದ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ.

bengaluru

LEAVE A REPLY

Please enter your comment!
Please enter your name here