Home Uncategorized ಹಳಿಯಾಳ: ದೇವಸ್ಥಾನದ ಸುತ್ತಲಿನ ಪಾದಚಾರಿ ಮಾರ್ಗದ ನಿರ್ಮಾಣ ವಿರೋಧಿಸಿ ಪ್ರತಿಭಟನೆ, ಸ್ಥಳದಲ್ಲಿ ಸೆಕ್ಷನ್ 144 ಜಾರಿ

ಹಳಿಯಾಳ: ದೇವಸ್ಥಾನದ ಸುತ್ತಲಿನ ಪಾದಚಾರಿ ಮಾರ್ಗದ ನಿರ್ಮಾಣ ವಿರೋಧಿಸಿ ಪ್ರತಿಭಟನೆ, ಸ್ಥಳದಲ್ಲಿ ಸೆಕ್ಷನ್ 144 ಜಾರಿ

23
0
Advertisement
bengaluru

ಹಳಿಯಾಳ ಗ್ರಾಮದ ಆರಾಧ್ಯ ದೈವವಾದ ಗ್ರಾಮ್ಯ ದೇವಿ ದೇವಸ್ಥಾನದ ಸುತ್ತ ಪಾದಚಾರಿ ಮಾರ್ಗ ನಿರ್ಮಿಸುತ್ತಿರುವುದನ್ನು ತಡೆಯುವಂತೆ ಆಗ್ರಹಿಸಿ ನೂರಾರು ಜನರು ಬೀದಿಗಿಳಿದ ಸಂದರ್ಭ ಸುರಕ್ಷತಾ ಕ್ರಮವಾಗಿ 144 ಸೆಕ್ಷನ್‌ ಜಾರಿ, ಹಳಿಯಾಳ ಪ್ರತಿಭಟನೆಗೆ ಸಾಕ್ಷಿಯಾಯಿತು. ಹಳಿಯಾಳ: ಹಳಿಯಾಳ ಗ್ರಾಮದ ಆರಾಧ್ಯ ದೈವವಾದ ಗ್ರಾಮ್ಯ ದೇವಿ ದೇವಸ್ಥಾನದ ಸುತ್ತ ಪಾದಚಾರಿ ಮಾರ್ಗ ನಿರ್ಮಿಸುತ್ತಿರುವುದನ್ನು ತಡೆಯುವಂತೆ ಆಗ್ರಹಿಸಿ ನೂರಾರು ಜನರು ಬೀದಿಗಿಳಿದ ಸಂದರ್ಭ ಸುರಕ್ಷತಾ ಕ್ರಮವಾಗಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು, ಭಕ್ತರಿಂದ ಪ್ರತಿಭಟನೆ ನಡೆಯಿತು.

ದೇವಸ್ಥಾನದ ಸುತ್ತ ಪಾದಚಾರಿ ಮಾರ್ಗ ನಿರ್ಮಿಸಲು ಪುರಸಭೆ ಅಧಿಕಾರಿಗಳು ಮುಂದಾಗಿದ್ದು, ಪಟ್ಟಣದ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದರು. ಎಲ್ಲರೂ ದೇವಸ್ಥಾನದಲ್ಲಿ ಜಮಾಯಿಸಿ ದೇವಿಗೆ ಪೂಜೆ ಸಲ್ಲಿಸಿದರು ಮತ್ತು ಬಳಿಕ ರಸ್ತೆಗಿಳಿದು ಪಾಲಿಕೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ದೇಗುಲದ ಸುತ್ತ ನಿರ್ಮಿಸುತ್ತಿರುವ ಪಾದಚಾರಿ ಮಾರ್ಗವನ್ನು ತೆರವುಗೊಳಿಸಬೇಕು ಹಾಗೂ ದೇವಸ್ಥಾನದ ಸುತ್ತ ಇರುವ ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಮೆರವಣಿಗೆ ನಡೆಸಿದರು. 

‘ಶತಮಾನಗಳಿಂದ ಇಲ್ಲಿ ಪೂಜೆ ಮಾಡುತ್ತಾ ಬಂದಿದ್ದೇವೆ. ವಿಜಯದಶಮಿಯಂದು ಇಲ್ಲಿನ ಬನ್ನಿ ಮರವು ನಮಗೆ ಪವಿತ್ರವಾಗಿದೆ. ಕೆಲವರ ಪ್ರಚೋದನೆ ಮೇರೆಗೆ ತೆರವುಗೊಳಿಸಲು ಯತ್ನಿಸುತ್ತಿದ್ದಾರೆ’ ಎಂದು ಗ್ರಾಮ್ಯದೇವಿ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಮಂಗೇಶ್ ದೇಶಪಾಂಡೆ ಹೇಳಿದರು.

bengaluru bengaluru

ನಂತರ ಪ್ರತಿಭಟನಾಕಾರರು ಮಣ್ಣು ತೆಗೆಯುವ ಯಂತ್ರಗಳನ್ನು ತಂದು ಪಾದಚಾರಿ ಮಾರ್ಗವನ್ನು ತೆಗೆದರು. ಪೊಲೀಸರು ಮಧ್ಯ ಪ್ರವೇಶಿಸಿದಾಗ ಪ್ರತಿಭಟನಾಕಾರರೊಂದಿಗೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾಕಾರರು ಪಾದಚಾರಿ ಮಾರ್ಗವನ್ನು ತೆರವುಗೊಳಿಸಿ ಅಲ್ಲಿ ಕೇಸರಿ ಧ್ವಜವನ್ನು ಅಳವಡಿಸಿ ಅದನ್ನು ತೆಗೆಯದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ಸ್ಥಳಕ್ಕಾಗಮಿಸಿದ ಬಿಜೆಪಿ ಮುಖಂಡ, ಮಾಜಿ ಶಾಸಕ ಸುನೀಲ್ ಹೆಗಡೆ, ಯಾರ ಆದೇಶದ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಅವರು, ಆರಾಧನೆಯ ಸ್ಥಳವು ಬೇರೆ ಧರ್ಮಕ್ಕೆ ಸೇರಿದ್ದರೆ, ನೀವು ಅದೇ ರೀತಿ ಮಾಡುತ್ತೀದ್ದೀರಾ. ಒತ್ತುವರಿ ತೆರವು ಮಾಡಿ ನಮ್ಮ ದೇವಸ್ಥಾನದ ಜಮೀನು ವಾಪಸ್ ನೀಡಬೇಕು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ ಎಂದರು.

ಪ್ರತಿಭಟನಾಕಾರರು ದಿಡೀರ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ಉತ್ತರ ಕನ್ನಡ ಎಸ್‌ಪಿ ಎನ್ ವಿಷ್ಣುವರ್ಧನ್ ಹೇಳಿದ್ದಾರೆ. ‘ನಾವು ನಮ್ಮ ಸಿದ್ಧತೆಗಳನ್ನು ಮಾಡಿದ್ದೇವೆ ಮತ್ತು ಯಾವುದೇ ಅಹಿತಕರ ಘಟನೆ ನಡೆದಿಲ್ಲ’ ಎಂದು ಅವರು ಟಿಎನ್ಐಇಗೆ ತಿಳಿಸಿದರು ಡಿಎಆರ್ ಮತ್ತು ಸ್ಥಳೀಯ ಪೊಲೀಸರ ಎರಡು ಘಟಕಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದರು.


bengaluru

LEAVE A REPLY

Please enter your comment!
Please enter your name here