Home Uncategorized ಹಾಪ್'ಕಾಮ್ಸ್'ನಲ್ಲಿ ದ್ರಾಕ್ಷಿ-ಕಲ್ಲಂಗಡಿ ಮೇಳ: ಶೇ.10ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳ ಮಾರಾಟ

ಹಾಪ್'ಕಾಮ್ಸ್'ನಲ್ಲಿ ದ್ರಾಕ್ಷಿ-ಕಲ್ಲಂಗಡಿ ಮೇಳ: ಶೇ.10ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳ ಮಾರಾಟ

30
0

ಬೆಂಗಳೂರಿನ ಲಾಲ್ ಬಾಗ್‌ನಲ್ಲಿರುವ ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ (ಹಾಪ್‌ಕಾಮ್ಸ್) ಕೇಂದ್ರ ಕಚೇರಿಯಲ್ಲಿ ವಾರ್ಷಿಕ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳ ಬುಧವಾರದಿಂದ ಆರಂಭವಾಗಿದೆ. ಬೆಂಗಳೂರು: ಬೆಂಗಳೂರಿನ ಲಾಲ್ ಬಾಗ್‌ನಲ್ಲಿರುವ ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ (ಹಾಪ್‌ಕಾಮ್ಸ್) ಕೇಂದ್ರ ಕಚೇರಿಯಲ್ಲಿ ವಾರ್ಷಿಕ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳ ಬುಧವಾರದಿಂದ ಆರಂಭವಾಗಿದೆ.
    
ನಗರದ ಲಾಲ್ ಬಾಗ್ ಬಳಿಯ ಹಾಪ್ ಕಾಮ್ಸ್ ಪ್ರಧಾನ ಕಚೇರಿ ಮಳಿಗೆಯಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಅವರು ಮೇಳಕ್ಕೆ ಚಾಲನೆ ನೀಡಿದರು.

ಹಾಪ್‌ಕಾಮ್ಸ್ ಅಧ್ಯಕ್ಷ ಎನ್.ದೇವರಾಜ್ ಮಾತನಾಡಿ, ಚಿಕ್ಕಬಳ್ಳಾಪುರ ಮತ್ತು ಇತರ ಕೆಲವು ಜಿಲ್ಲೆಗಳಿಂದ 500 ಮೆಟ್ರಿಕ್ ಟನ್ ವಿವಿಧ ತಳಿಯ ದ್ರಾಕ್ಷಿಯನ್ನು ಖರೀದಿಸಿ ಮಾರಾಟ ಮಾಡುವ ಗುರಿ ಹೊಂದಲಾಗಿದ್ದು, ಬೆಂಗಳೂರಿನ ಹಾಪ್‌ಕಾಮ್ಸ್’ನ ಎಲ್ಲಾ ಮಳಿಗೆಗಳಿಂದ 800 ಮೆಟ್ರಿಕ್ ಟನ್ ಕಲ್ಲಂಗಡಿಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ, ವಿಜಯಪುರ, ಬಾಗಲಕೋಟೆ, ಕೋಲಾರ, ಕೊಪ್ಪಳ ಭಾಗದ ಎಲ್ಲಾ ರೈತರೊಂದಿಗೆ ಸಂಪರ್ಕ ಹೊಂದಲಾಗಿದ್ದು, ಟನ್ ಗಟ್ಟಲೆ ದ್ರಾಕ್ಷಿ, ಕಲ್ಲಂಗಡಿಯನ್ನು ಖರೀದಿ ಮಡಾಲಾಗಿದೆ. “ಸುಮಾರು 13 ವಿಧದ ದ್ರಾಕ್ಷಿಗಳು ಮತ್ತು ನಾಲ್ಕು ವಿಧದ ಕರಬೂಜುಗಳು ನಮ್ಮಲ್ಲಿವೆ. ದ್ರಾಕ್ಷಿಯು ನೈಸರ್ಗಿಕ ಸಕ್ಕರೆ ಮತ್ತು ಕ್ಯಾಲ್ಸಿಯಂ, ಕಬ್ಬಿಣದಂತಹ ಖನಿಜಗಳಿಗೆ ಹೆಸರುವಾಸಿಯಾಗಿದೆ. ಹಾಗೆಯೇ ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್-ಎ, ವಿಟಮಿನ್ ಸಿ, ಬಿ-1, ಬಿ-2, ಪೊಟ್ಯಾಶಿಯಂ, ಮೆಗ್ನೀಷಿಯಂ, ಸೋಡಿಯಂ ಮೊದಲಾದ ಪೋಷಕಾಂಶಗಳಿದ್ದು, ಇದು ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಬೆಂಗಳೂರಿನಲ್ಲಿರುವ ನಮ್ಮ ಎಲ್ಲಾ ಮಳಿಗೆಗಳಲ್ಲಿ ಶೇ.10ರಷ್ಟು ರಿಯಾಯಿತಿ ದರದಲ್ಲಿ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೇವೆ. ಬೇಸಿಗೆ ಮುಗಿಯುವವರೆಗೂ ಈ ಆಫರ್ ಮುಂದುವರೆಯುತ್ತದೆ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here