Home Uncategorized ಹಾರ್ನ್ ಮಾಡಿದರೂ ಜಗ್ಗುತ್ತಿಲ್ಲ; ಬೆಂಗಳೂರಿನ ಟೆಕ್ಕಿಗಳನ್ನು ಕೆರಳಿಸುತ್ತಿರುವ ಎಮ್ಮೆಗಳು

ಹಾರ್ನ್ ಮಾಡಿದರೂ ಜಗ್ಗುತ್ತಿಲ್ಲ; ಬೆಂಗಳೂರಿನ ಟೆಕ್ಕಿಗಳನ್ನು ಕೆರಳಿಸುತ್ತಿರುವ ಎಮ್ಮೆಗಳು

3
0
bengaluru

ಬೆಂಗಳೂರು: ನಗರದ ಕೆಲವೆಡೆ ಎಮ್ಮೆಗಳು ರಸ್ತೆಗೆ ಅಡ್ಡಿಪಡಿಸಿದ ಪರಿಣಾಮ ನಗರದ ಟೆಕ್ಕಿಗಳು ನಗರ ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ. ಹಲವು ಬಾರಿ ಎಮ್ಮೆಗಳ ಹಿಂಡು ರಸ್ತೆಗೆ ಬಂದು ಸಂಚಾರಕ್ಕೆ ಅಡ್ಡಿಪಡಿಸುವುದರಿಂದ ಗಂಟೆಗಟ್ಟಲೆ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದೆ ಎಂದು ದೂರಿದರು. ಬೆಂಗಳೂರು: ನಗರದ ಕೆಲವೆಡೆ ಎಮ್ಮೆಗಳು ರಸ್ತೆಗೆ ಅಡ್ಡಿಪಡಿಸಿದ ಪರಿಣಾಮ ನಗರದ ಟೆಕ್ಕಿಗಳು ನಗರ ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ. ಹಲವು ಬಾರಿ ಎಮ್ಮೆಗಳ ಹಿಂಡು ರಸ್ತೆಗೆ ಬಂದು ಸಂಚಾರಕ್ಕೆ ಅಡ್ಡಿಪಡಿಸುವುದರಿಂದ ಗಂಟೆಗಟ್ಟಲೆ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದೆ ಎಂದು ದೂರಿದರು.

ಇತ್ತೀಚೆಗೆ ನಗರದ ಕಸವನಹಳ್ಳಿಯ ಐಟಿ ಹಬ್‌ನಲ್ಲಿ ಎಮ್ಮೆಗಳು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಟ್ರಾಫಿಕ್‌ನಿಂದಾಗಿ ನಿರ್ದಿಷ್ಟ ಪ್ರದೇಶದಲ್ಲಿ ಪ್ರಯಾಣದ ಸಮಯವು ಸಾಮಾನ್ಯ 20 ನಿಮಿಷಗಳ ಬದಲಿಗೆ 40 ರಿಂದ 50 ನಿಮಿಷಗಳನ್ನು ತೆಗೆದುಕೊಳ್ಳುವುದರಿಂದ ಇದು ಪ್ರತಿದಿನ ತಲೆನೋವಾಗುತ್ತಿದೆ. ಇದರಿಂದ ಕೆಲಸಕ್ಕೆ ತಡವಾಗಿ ಹೋಗಬೇಕಾಗುತ್ತಿದೆ ಎಂದು ದಿನನಿತ್ಯ ಓಡಾಡುವ ಪ್ರಯಾಣಿಕರು ಹೇಳುತ್ತಾರೆ. 

ಇದರಿಂದ ರೊಚ್ಚಿಗೆದ್ದ ನಾಗರಿಕರು, ಮುಂಜಾನೆ ಅಥವಾ ಸಂಜೆ ವೇಳೆ ಎಮ್ಮೆಗಳು ರಸ್ತೆಯನ್ನು ಆಕ್ರಮಿಸುತ್ತಿರುವುದರಿಂದ ಸುದೀರ್ಘ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ  ದೂರಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪಶು ಸಂಗೋಪನಾ ಇಲಾಖೆ ಹಾಗೂ ಸಂಚಾರ ಪೊಲೀಸರು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕಾಟನ್‌ಪೇಟೆ, ಚಾಮರಾಜಪೇಟೆ, ಕಲಾಸಿಪಾಳ್ಯ, ವಿವಿ ಪುರಂ ಸೇರಿದಂತೆ ನಗರದ ಕೇಂದ್ರ ಭಾಗಗಳಲ್ಲಿ ಈಗಾಗಲೇ ಎಮ್ಮೆಗಳಿಂದ ಹಾವಳಿ ಉಂಟಾಗಿದ್ದು, ಇದೀಗ ವೈಟ್‌ಫೀಲ್ಡ್, ಬೆಳ್ಳಂದೂರು, ಕಸವನಹಳ್ಳಿಯಂತಹ ಹಲವು ಐಟಿ ಕಂಪನಿಗಳಿರುವ ಪ್ರದೇಶಗಳಿಗೂ ವ್ಯಾಪಿಸಿದೆ.

bengaluru
bengaluru

LEAVE A REPLY

Please enter your comment!
Please enter your name here