Home Uncategorized ಹಾಸನ: ಕಾಡ್ಗಿಚ್ಚು ನಂದಿಸುತ್ತಿದ್ದ ಮೂವರು ಅರಣ್ಯ ಸಿಬ್ಬಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ಹಾಸನ: ಕಾಡ್ಗಿಚ್ಚು ನಂದಿಸುತ್ತಿದ್ದ ಮೂವರು ಅರಣ್ಯ ಸಿಬ್ಬಂದಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

28
0

ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್ ಬಳಿಯ ಅರಣ್ಯದಲ್ಲಿ ಗುರುವಾರ ಕಾಡ್ಗಿಚ್ಚು ನಂದಿಸಲು ಹೋಗಿದ್ದ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಗೆ ಬೆಂಕಿ ತಗುಲಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಹಾಸನ: ಸಕಲೇಶಪುರ ತಾಲೂಕಿನ ಕಾಡುಮನೆ ಎಸ್ಟೇಟ್ ಬಳಿಯ ಅರಣ್ಯದಲ್ಲಿ ಗುರುವಾರ ಕಾಡ್ಗಿಚ್ಚು ನಂದಿಸಲು ಹೋಗಿದ್ದ ಅರಣ್ಯ ಇಲಾಖೆಯ ಮೂವರು ಸಿಬ್ಬಂದಿಗೆ ಬೆಂಕಿ ತಗುಲಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಅರಣ್ಯಾಧಿಕಾರಿಗಳಾದ ಮಂಜುನಾಥ್, ಅರಣ್ಯ ವೀಕ್ಷಕರಾದ ಸುಂದರೇಶ್ ಮತ್ತು ತುಂಗೇಶ್ ಅವರು ಕಾಡ್ಗಿಚ್ಚು ನಂದಿಸುವ ವೇಳೆ ಗಾಯಗೊಂಡಿದ್ದು, ಅವರನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಹಾಸನ: ಆಭರಣ ವ್ಯಾಪಾರಿಯ ದರೋಡೆ, 25 ಲಕ್ಷ ರೂ ಮೌಲ್ಯದ ಅಮೂಲ್ಯ ಹರಳು ಕಳ್ಳತನ

ಸುಂದರೇಶ್ ಮತ್ತು ಮಂಜುನಾಥ್ ಸ್ಥಿತಿ ಗಂಭೀರವಾಗಿದೆ. ಕಾಡುಮನೆ ಪಕ್ಕದ ಪಶ್ಚಿಮ ಘಟ್ಟದಲ್ಲಿ ಗ್ರಾಮಸ್ಥರ ಸಹಾಯದಿಂದ ಕಾಳ್ಗಿಚ್ಚು ನಂದಿಸಲು ಹೋದಾಗ ಈ ಘಟನೆ ನಡೆದಿದೆ.

ಸ್ಥಳೀಯರ ನೆರವಿನಿಂದ 12 ಕಿ.ಮೀ ಆಳದ ಅರಣ್ಯ ಪ್ರದೇಶದಿಂದ ಗಾಯಾಳುಗಳನ್ನು ಕಾಡುಮನೆಗೆ ಸ್ಥಳಾಂತರಿಸಲು ಸಿಬ್ಬಂದಿ ಹರಸಾಹಸ ಪಟ್ಟಿದ್ದು, ಗ್ರಾಮಸ್ಥರು ಗಾಯಾಳುಗಳನ್ನು ಹೊತ್ತು ಸಾಗಿ ಕಾಡುಮನೆ ತಲುಪಿದ್ದಾರೆ.

LEAVE A REPLY

Please enter your comment!
Please enter your name here