Home Uncategorized ಹಿಂದುಳಿದ ಜಾತಿಗಳಿಗೆ ಅನ್ಯಾಯವಾದರೆ ಸಹಿಸೊಲ್ಲ,‌ಸಾಮಾಜಿಕ ನ್ಯಾಯದ ಪರ ಹೋರಾಟ- ಸಿದ್ದರಾಮಯ್ಯ

ಹಿಂದುಳಿದ ಜಾತಿಗಳಿಗೆ ಅನ್ಯಾಯವಾದರೆ ಸಹಿಸೊಲ್ಲ,‌ಸಾಮಾಜಿಕ ನ್ಯಾಯದ ಪರ ಹೋರಾಟ- ಸಿದ್ದರಾಮಯ್ಯ

12
0
Advertisement
bengaluru

ಹಿಂದುಳಿದ ಜಾತಿಗಳಿಗೆ ಅನ್ಯಾಯವಾದರೆ ಸಹಿಸೊಲ್ಲ,‌ ಅಧಿಕಾರಕ್ಕಾಗಿ ಅಂಟಿಕೊಂಡು ಕೂರುವುದಿಲ್ಲ. ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ನಡೆಸುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ತುಮಕೂರು: ಹಿಂದುಳಿದ ಜಾತಿಗಳಿಗೆ ಅನ್ಯಾಯವಾದರೆ ಸಹಿಸೊಲ್ಲ,‌ ಅಧಿಕಾರಕ್ಕಾಗಿ ಅಂಟಿಕೊಂಡು ಕೂರುವುದಿಲ್ಲ. ಸಾಮಾಜಿಕ ನ್ಯಾಯದ ಪರವಾಗಿ ಹೋರಾಟ ನಡೆಸುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ,  ಹಿಂದುಳಿದ ಸಮುದಾಯದಲ್ಲಿ 102 ಜಾತಿಗಳಿವೆ, ಒಟ್ಟು ಜನಸಂಖ್ಯಾ ಪ್ರಮಾಣ ಶೇಕಡಾ 52ರಷ್ಟಿದ್ದರೂ ಕೇವಲ ಶೇಕಡಾ 27ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಶೇಕಡಾ 4ರಷ್ಟಿರುವವರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡಲಾಗಿದೆ, ಇದು ತಪ್ಪು ಎಂದಿದ್ದಾರೆ.

 ಬೇರೆ ರಾಜ್ಯಗಳಲ್ಲಿ ಶೇಕಡಾ 50ರ ಮಿತಿಯನ್ನು ಮೀರಿ ಮೀಸಲಾತಿ ನೀಡಿದರೆ ರದ್ದು ಪಡಿಸಲಾಗುತ್ತದೆ. ಆದರೆ ರಾಜ್ಯದ ಬಿಜೆಪಿ ಸರ್ಕಾರ ಎಲ್ಲ ನಿಯಮಾವಳಿಗಳನ್ನು ಮೀರಿ ಮೀಸಲಾತಿ ಹೆಚ್ಚಿಸುವ ಘೋಷಣೆ ಮಾಡುತ್ತಿದ್ದರೂ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.  

ಹಿಂದುಳಿದ ಜಾತಿಗಳಿಗೆ 2ಎನಲ್ಲಿ ಮೀಸಲಾತಿ ನೀಡಲಾಗಿದ್ದರೂ ಇತ್ತೀಚೆಗೆ ಬೇರೆ ಜಾತಿಗಳು ಈ ಗುಂಪಿಗೆ ಸೇರಿಕೊಳ್ಳಲು ಪ್ರಯತ್ನ‌ ಮಾಡುತ್ತಿವೆ. ಹಿಂದೆ ಲಿಂಗಾಯತ ಸಾದರರು ಹಿಂದೂ ಸಾದರ ಹೆಸರಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಸೌಲಭ್ಯ ಪಡೆಯಲು ಪ್ರಯತ್ನಿಸಿದ್ದರು. ಮೀಸಲಾತಿ ದುರುಪಯೋಗ ತಡೆಯಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಹಿಂದುಳಿದ ಜಾತಿಗಳಿಗೆ 2ಎನಲ್ಲಿ ಮೀಸಲಾತಿ ನೀಡಲಾಗಿದ್ದರೂ ಇತ್ತೀಚೆಗೆ ಬೇರೆ ಜಾತಿಗಳು ಈ ಗುಂಪಿಗೆ ಸೇರಿಕೊಳ್ಳಲು ಪ್ರಯತ್ನ‌ ಮಾಡುತ್ತಿವೆ.ಹಿಂದೆ ಲಿಂಗಾಯತ ಸಾದರರು ಹಿಂದೂ ಸಾದರ ಹೆಸರಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಸೌಲಭ್ಯ ಪಡೆಯಲು ಪ್ರಯತ್ನಿಸಿದ್ದರು.ಮೀಸಲಾತಿ ದುರುಪಯೋಗ ತಡೆಯಬೇಕು. 4/4#ತುಮಕೂರು_ಸಮಾರಂಭ— Siddaramaiah (@siddaramaiah) December 24, 2022

bengaluru bengaluru

bengaluru

LEAVE A REPLY

Please enter your comment!
Please enter your name here