Home Uncategorized ಹುಡುಗಿ ವಿಚಾರಕ್ಕೆ ಇಬ್ಬರು ಯುವಕರ ಮಧ್ಯೆ ಜಗಳ: ಕೊಲೆಯಲ್ಲಿ ಅಂತ್ಯ

ಹುಡುಗಿ ವಿಚಾರಕ್ಕೆ ಇಬ್ಬರು ಯುವಕರ ಮಧ್ಯೆ ಜಗಳ: ಕೊಲೆಯಲ್ಲಿ ಅಂತ್ಯ

10
0
Advertisement
bengaluru

ಯುವತಿ ವಿಚಾರವಾಗಿ ಇಬ್ಬರು ಯುವಕರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಂಗೊಂಡನಹಳ್ಳಿ ನಿವಾಸಿ ಮೊಹಮ್ಮದ್ ತಾಹಿರ್ (19) ಎಂಬಾತನನ್ನು ಚಾಮರಾಜಪೇಟೆಯ ಟಿಪ್ಪುನಗರ ನಿವಾಸಿ ನ್ಯಾಮತ್ ಎಂಬಾತ ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.  ಬೆಂಗಳೂರು:ಯುವತಿ ವಿಚಾರವಾಗಿ ಇಬ್ಬರು ಯುವಕರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಂಗೊಂಡನಹಳ್ಳಿ ನಿವಾಸಿ ಮೊಹಮ್ಮದ್ ತಾಹಿರ್ (19) ಎಂಬಾತನನ್ನು ಚಾಮರಾಜಪೇಟೆಯ ಟಿಪ್ಪುನಗರ ನಿವಾಸಿ ನ್ಯಾಮತ್ ಎಂಬಾತ ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 

ತಾಹಿರ್ ತಂದೆ ಸೈಯದ್ ಮಹಮೂದ್, ನ್ಯಾಮತ್ ಮತ್ತು ಇತರರ ವಿರುದ್ಧ ಅಪಹರಣ ಪ್ರಕರಣವನ್ನು ದಾಖಲಿಸಿದ್ದಾರೆ. ತಾಹಿರ್‌ನ ಕುಟುಂಬ ಟಿಪ್ಪುನಗರದಲ್ಲಿ ವಾಸವಾಗಿದೆ. ಕಳೆದ ವರ್ಷದಿಂದ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ತಾಹೀರ್ ಮತ್ತು ನ್ಯಾಮತ್ ಹುಡುಗಿ ವಿಷಯದಲ್ಲಿ ಜಗಳವಾಡುತ್ತಿದ್ದರು. ಇದರಿಂದಾಗಿ ಮಹಮೂದ್ ಕುಟುಂಬವನ್ನು ಗಂಗೊಂಡನಹಳ್ಳಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದರು. 

ಮೊನ್ನೆ ಸೋಮವಾರ ರಾತ್ರಿ ತಾಹಿರ್‌ಗೆ ಕರೆ ಮಾಡಿದ ತಂಡ ನಾಯಂಡಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಬರುವಂತೆ ಹೇಳಿ ಆಟೋದಲ್ಲಿ ಅಪಹರಿಸಿದ್ದಾರೆ.

ನ್ಯಾಮತ್‌ನ ಮೇಲೆ ಶಂಕೆಯಿಂದ ಮಹಮೂದ್ ಟಿಪ್ಪುನಗರಕ್ಕೆ ಹೋಗಿ ಆತನ ತಂದೆಯನ್ನು ವಿಚಾರಿಸಿದ್ದಾರೆ. ತಾಹಿರ್ ನನ್ನು ನ್ಯಾಮತ್ ಅಪಹರಿಸಿರುವುದು ಗೊತ್ತಾಗಿದೆ. ನಂತರ ಮಹಮೂದ್ ತನ್ನ ಮಗನನ್ನು ಹುಡುಕಿಕೊಂಡು ಕೆಂಗೇರಿಗೆ ಹೋಗಿದ್ದಾರೆ. ಆದರೆ ಅಲ್ಲಿ ಪತ್ತೆಯಾಗಲಿಲ್ಲ. ಕೊನೆಗೆ ಚಂದ್ರಾ ಲೇಔಟ್ ಪೊಲೀಸರಿಗೆ ದೂರು ನೀಡಿದ್ದರು.

bengaluru bengaluru

ನಿನ್ನೆ ಮಂಗಳವಾರ ಬೆಳಗ್ಗೆ ಕೆಂಗೇರಿಯ ಉತ್ತರಹಳ್ಳಿಯ ಪೊದೆಯೊಂದರಲ್ಲಿ ತಾಹಿರ್ ಶವ ಪತ್ತೆಯಾಗಿತ್ತು. ಪೊಲೀಸರು ನ್ಯಾಮತ್ ಮತ್ತು ಇತರ ಕೆಲವರನ್ನು ಬಂಧಿಸಿದ್ದಾರೆ.ಚಂದ್ರಾ ಲೇಔಟ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


bengaluru

LEAVE A REPLY

Please enter your comment!
Please enter your name here