Home Uncategorized ಹುಬ್ಬಳ್ಳಿ ಧಾರವಾಡದಲ್ಲಿ ರಾಷ್ಟ್ರೀಯ ಯುವ ಜನೋತ್ಸವ: ನಟ ಅಕ್ಷಯ್ ಕುಮಾರ್ ಗೆ ಆಹ್ವಾನ

ಹುಬ್ಬಳ್ಳಿ ಧಾರವಾಡದಲ್ಲಿ ರಾಷ್ಟ್ರೀಯ ಯುವ ಜನೋತ್ಸವ: ನಟ ಅಕ್ಷಯ್ ಕುಮಾರ್ ಗೆ ಆಹ್ವಾನ

0
0
bengaluru

ಅವಳಿ ನಗರ ಹುಬ್ಬಳ್ಳಿ- ಧಾರವಾಡದಲ್ಲಿ ಜನವರಿ 12ರಿಂದ 16ರವರೆಗೆ ನಡೆಯಲಿರುವ  ರಾಷ್ಟ್ರೀಯ ಯುವ ಜನೋತ್ಸವಕ್ಕೆ ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆ. ಧಾರವಾಡ: ಅವಳಿ ನಗರ ಹುಬ್ಬಳ್ಳಿ- ಧಾರವಾಡದಲ್ಲಿ ಜನವರಿ 12ರಿಂದ 16ರವರೆಗೆ ನಡೆಯಲಿರುವ  ರಾಷ್ಟ್ರೀಯ ಯುವ ಜನೋತ್ಸವಕ್ಕೆ ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರನ್ನು ಆಹ್ವಾನಿಸಲಾಗಿದೆ.

ಧಾರವಾಡದ ವಿವಿಧ ಕಡೆಗಳಲ್ಲಿ ಯುವ ಜನೋತ್ಸವ ಆಯೋಜನೆ ಮಾಡಲು ಸೂಕ್ತ ಸ್ಥಳ ವೀಕ್ಷಣೆ ನಂತರ  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ ನಡೆಸುವಾಗಲೇ  ಅಕ್ಷಯ್ ಕುಮಾರ್ ಅವರಿಗೆ ಕರೆ ಮಾಡಿ, ಯುವಜನೋತ್ಸವಕ್ಕೆ ಆಹ್ವಾನಿಸಿದರು. ಜ. 16ರಂದು ನಡೆಯುವ ಸಮಾರೋಪಕ್ಕೆ ಆಗಮಿಸುವಂತೆ ಜೋಶಿ, ಅಕ್ಷಯ ಕುಮಾರ್​ಗೆ ಹೇಳಿದರು. ಆದರೆ  ಜ. 12ರಂದೇ ಬರುತ್ತೇನೆ ಎಂದು ಅಕ್ಷಯ್ ಕುಮಾರ್ ಹೇಳಿದರು. ಆದರೆ ಪ್ರಧಾನಿ ಕಾರ್ಯಕ್ರಮ ಭದ್ರತೆ ವಿಷಯ ಇರುತ್ತೆ ಎಂದು ಜೋಶಿ ಹೇಳಿದರು.

ಐದು ದಿನಗಳ ಕಾರ್ಯಕ್ರಮಕ್ಕೆ ಜನವರಿ 12 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ವಿವಿಧ ರಾಜ್ಯಗಳಿಂದ ಸುಮಾರು 7,500 ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗುತ್ತಾರೆ. ಅಂದು ನಾಡು ನುಡಿ ನಮ್ಮ ಸಾಂಸ್ಕೃತಿಕ ಬಿಂಬಿಸುವ ಅನೇಕ ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳಗಳು ಸಹ ಇರುತ್ತವೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು. 

bengaluru

LEAVE A REPLY

Please enter your comment!
Please enter your name here