Home Uncategorized ಹುಬ್ಬಳ್ಳಿ:  ಮೋದಿ ಭೇಟಿ ಹಿನ್ನೆಲೆ; ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಯ ಮನವಿ ತಿರಸ್ಕಾರ

ಹುಬ್ಬಳ್ಳಿ:  ಮೋದಿ ಭೇಟಿ ಹಿನ್ನೆಲೆ; ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಯ ಮನವಿ ತಿರಸ್ಕಾರ

6
0
bengaluru

ಇಲ್ಲಿನ ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಅನುಮತಿ ನಿರಾಕರಿಸಿದೆ. ಇತ್ತೀಚಿಗೆ ರಾಣಿ ಚೆನ್ನಮ್ಮ ಮೈದಾನ ಎಂದು ನಾಮಕರಣ ಮಾಡಲಾದ ಈದ್ಗಾ ಮೈದಾನದಲ್ಲಿ  ಹೋಳಿ ಆಚರಣೆಗಾಗಿ ಮೂರ್ತಿ ಪ್ರತಿಷ್ಠಾಪನೆಗೆ ಗಜಾನನ ಉತ್ಸವ ಮಹಾಮಂಡಳ ಅನುಮತಿ ಕೋರಿತ್ತು. ಹುಬ್ಬಳ್ಳಿ:  ಇಲ್ಲಿನ ಈದ್ಗಾ ಮೈದಾನದಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಅನುಮತಿ ನಿರಾಕರಿಸಿದೆ. ಇತ್ತೀಚಿಗೆ ರಾಣಿ ಚೆನ್ನಮ್ಮ ಮೈದಾನ ಎಂದು ನಾಮಕರಣ ಮಾಡಲಾದ ಈದ್ಗಾ ಮೈದಾನದಲ್ಲಿ  ಹೋಳಿ ಆಚರಣೆಗಾಗಿ ಮೂರ್ತಿ ಪ್ರತಿಷ್ಠಾಪನೆಗೆ ಗಜಾನನ ಉತ್ಸವ ಮಹಾಮಂಡಳ ಅನುಮತಿ ಕೋರಿತ್ತು. ಆದರೆ, ವಿವಿಐಪಿ ಭೇಟಿಯಿಂದ ಕಾನೂನು ಸುವ್ಯವಸ್ಥೆ ಸಮಸ್ಯೆ ನೆಪವೊಡ್ಡಿಅನುಮತಿಯನ್ನು ಹೆಚ್ ಡಿಎಂಸಿ ನಿರಾಕರಿಸಿತು.

ಪಾಲಿಕೆ ಆಯುಕ್ತ  ಆಯುಕ್ತ ಬಿ ಗೋಪಾಲಕೃಷ್ಣ ಮತ್ತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರು ಮಹಾಮಂಡಲದ ಸದಸ್ಯರು ಮತ್ತು ಇತರ ಹಿಂದೂ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡರು. ಮಾರ್ಚ್ 9 ರಂದು ಆಯೋಜಿಸಲು ಉದ್ದೇಶಿಸಲಾಗಿದ್ದ ಮೂರ್ತಿ ಪ್ರತಿಷ್ಠಾಪನೆಗೆ ಮಾರ್ಚ್ 7 ರಂದು ಮನವಿ ಕೇಳಲಾಗಿದೆ.

ಭದ್ರತಾ ವ್ಯವಸ್ಥೆ ಕೈಗೊಳ್ಳಲು ನಗರಾಡಳಿತಕ್ಕೆ ಸಮಯಾವಕಾಶದ ಕೊರತೆಯಿದೆ. ಅಲ್ಲದೇ  ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಅವಳಿ ನಗರಗಳಿಗೆ ಭೇಟಿ ನೀಡುತ್ತಿದ್ದು, ವಿವಿಐಪಿಗಳ ಸಂಚಾರ ಮತ್ತು ಅವರು ಭೇಟಿ ನೀಡುವ ಸ್ಥಳಗಳಾದ್ಯಂತ ಮುಂಚಿತವಾಗಿ ಭದ್ರತೆ ಕಲ್ಪಿಸಬೇಕಾಗುತ್ತದೆ ಎಂಬ ಕಾರಣ ನೀಡಲಾಗಿದೆ. ಮಹಾಮಂಡಲ ಹದಿನೈದು ದಿನಗಳ ಹಿಂದೆ ವಿನಂತಿಸಿದ್ದರೆ ಹೆಚ್ಚುವರಿ ಪೊಲೀಸರನ್ನು ಸಜ್ಜುಗೊಳಿಸಬಹುದಿತ್ತು ಎಂದು ಪೊಲೀಸ್ ಆಯುಕ್ತ ರಮಣ್ ಗುಪ್ತಾ ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಮಹಾಮಂಡಲದ ಅಧ್ಯಕ್ಷ ಸಂಜೀವ್ ಬಡಾಸ್ಕರ್ , ಪ್ರಧಾನಿ ಭೇಟಿ ಉಲ್ಲೇಖಿಸಿ ಮನವಿ ನಿರಾಕರಿಸಲಾಗಿದೆ. ಆದರೆ  ಅದನ್ನು ಇನ್ನೂ ಲಿಖಿತವಾಗಿ ಪಡೆದಿಲ್ಲ ಎಂದರು. 

bengaluru

ಮೂರ್ತಿ ಪ್ರತಿಷ್ಠಾಪನೆಗೆ ಮಹಾಮಂಡಳಕ್ಕೆ ಅನುಮತಿ ನೀಡಬೇಕು ಎಂದು ಹುಬ್ಬಳ್ಳಿ-ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ಬುಧವಾರ ಸೂಚಿಸಿದರು, ಆದರೆ ವಿವಿಐಪಿ ಭೇಟಿ ಮತ್ತು ಇತರ ಕಾನೂನು ಮತ್ತು ಸುವ್ಯವಸ್ಥೆಯ ಒತ್ತಾಯದ ಕಾರಣ ಯಾವುದೇ ನಿರ್ಧಾರ ತೆಗೆದುಕೊಳ್ಳಲು ನಂತರ ನಿರಾಕರಿಸಿದರು. ಪಾಲಿಕೆ ಆಯುಕ್ತರೇ ಜಮೀನಿನ ಮಾಲೀಕರಾಗಿರುವುದರಿಂದ ವರ್ಷಕ್ಕೆ ಎರಡು ಬಾರಿ ಮುಸ್ಲಿಮರ ಪ್ರಾರ್ಥನೆ ಹೊರತುಪಡಿಸಿ ಯಾವುದೇ ಕಾರ್ಯಕ್ರಮಕ್ಕೆ ಅವರ ಅನುಮತಿ ಕಡ್ಡಾಯ.

bengaluru

LEAVE A REPLY

Please enter your comment!
Please enter your name here