Home Uncategorized ಹುಬ್ಬಳ್ಳಿ KBJNL: ಭಾರೀ ಅವ್ಯವಹಾರ, ಲೋಕಾಯುಕ್ತಕ್ಕೆ ದೂರು, ಸಚಿವ ಗೋವಿಂದ ಕಾರಜೋಳ ಭಾಗಿ ಶಂಕೆ

ಹುಬ್ಬಳ್ಳಿ KBJNL: ಭಾರೀ ಅವ್ಯವಹಾರ, ಲೋಕಾಯುಕ್ತಕ್ಕೆ ದೂರು, ಸಚಿವ ಗೋವಿಂದ ಕಾರಜೋಳ ಭಾಗಿ ಶಂಕೆ

1
0
bengaluru

ಧಾರವಾಡ: ಹುಬ್ಬಳ್ಳಿಯ (Hubli) ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ (KBJNL) ನಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುಕುಂದ್ ರಾವ್ ಭವಾನಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಟೆಂಡರ್ ಅಂದಾಜು ಮೊತ್ತ ಪರಿಷ್ಕರಣೆಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಬಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಕಲ್ಲೂರ ಮಠ, ಮುಖ್ಯ ಇಂಜಿನಿಯರ್​ ಮನ್ಮಥಯ್ಯಸ್ವಾಮಿ, KBJNL ಎಂಡಿ, ಕಚೇರಿ ತಾಂತ್ರಿಕ ಸಹಾಯಕ ನಿರ್ದೇಶಕ ಶಿವಮಾದಯ್ಯ, ತಾಂತ್ರಿಕ ನಿರ್ದೇಶಕರಾದ ಬಿ.ಕೆ.ರಾಜೇಂದ್ರ, ವೀರಬಾಬು, KBJNL ​ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಕುಮಾರ್​ ಮತ್ತು ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಸಿದ್ದಗಂಗಪ್ಪ ವಿರುದ್ಧ ದೂರು ನೀಡಿದ್ದಾರೆ.

ಇನ್ನೂ ಬಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರದಿಂದ ರಸ್ತೆ ನಿರ್ಮಾಣ, ನೀರು ಸರಬರಾಜು, ವಿದ್ಯುತ್ ಸಂಪರ್ಕ, ಸಸಿ ನೆಡುವ ಕಾಮಗಾರಿ ಮತ್ತು ವಿವಿಧ ಕಾಮಗಾರಿ ನಡೆಸಲು 1,300 ಕೋಟಿ ಅಂದಾಜು ವೆಚ್ಚ ಎಂದು ಪತ್ರಿಕೆ ಸಿದ್ಧಪಡಿಸಲಾಗಿತ್ತು. ನಂತರ 2,868 ಕೋಟಿಗೆ ಏರಿಸಿದ್ದಾರೆ. ಏತ ನೀರವಾರಿ ಯೋಜನೆ 25 ಕಿ.ಮೀ. ಪೈಪ್ ಲೈನ್ ಕಾಮಗಾರಿಗೆ 415 ಕೋಟಿ ಅಂದಾಜು ಎಂದು ವರದಿ ಸಿದ್ಧವಾಗಿತ್ತು. ಆದರೆ ನಂತರ ಅದೇ ಮೊತ್ತವನ್ನು 815 ಕೋಟಿಗೆ ಏರಿಕೆಮಾಡಿ ಭ್ರಷ್ಟಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿ ಮೇಲೆ ಅನ್ಯಕೋಮಿನ ವಿದ್ಯಾರ್ಥಿಗಳಿಂದ ಹಲ್ಲೆ

ಇದಕ್ಕೆ ಸಚಿವ ಗೋವಿಂದ ಕಾರಜೋಳ ಕಾರಣ ಎಂದು ಆರೋಪಿಸಿದ್ದಾರೆ. ಹಾಗೆ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ನರೇಶ್ ಗುಪ್ತಾ ಮತ್ತು ಪ್ರಕರಣದ ನಡುವೆ ಲಿಂಕ್ ಇದೆ ಎಂದು ಶಂಕಿಸಲಾಗಿದೆ. ನರೇಶ್ KBJNL ಕೆಲಸ ಕೊಡಿಸುವ ಮಧ್ಯಸ್ಥಿಕೆ ವ್ಯವಹಾರ ಮಾಡುತ್ತಿದ್ದನು. ಟಾರ್ಚರ್​ನಿಂದಲೇ ನರೇಶ್ ಆತ್ಮಹತ್ಯೆಗೆ ಶರಣಾಗಿರುವ ಆರೋಪ ಕೇಳಿಬಂದಿದೆ.

bengaluru

ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ  ಸುವರ್ಣಸೌಧ ಮುತ್ತಿಗೆ

ಡಿಸೆಂಬರ್​ 23 ರ ಒಳಗೆ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ನಾವು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಹುಬ್ಬಳ್ಳಿಯಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬರ ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಕ್ಕೆ ನಾವು ಡಿಸೆಂಬರ್​ 23 ರ ವರೆಗೂ ಗಡುವು ಕೊಡುತ್ತೇವೆ. ಸರ್ಕಾರ ನಮ್ಮ ಸಮಸ್ಯೆ ಬಗೆಹರಿಸದೆ ಹೋದರೇ, ಧಾರವಾಡದಿಂದ ರ್ಯಾಲಿ‌ ಮೂಲಕ ಸುವರ್ಣ ಸೌಧ ಮುತ್ತಿಗೆ ಹಾಕುತ್ತೇವೆ ಎಂದರು.

ಇದನ್ನೂ ಓದಿ: ಸ್ಪರ್ಧೆ ನಿಶ್ಚಿತ, 5 ಕ್ಷೇತ್ರ ಆಯ್ಕೆ ಮಾಡಿರುವೆ, ಬಿಜೆಪಿ ಟಿಕೆಟ್ ಕೊಡದಿದ್ದರೆ ನಾನು ಇಂಡಿಪೆಂಡೆಂಟ್ -ಪ್ರಮೋದ್ ಮುತಾಲಿಕ್ ಪ್ರಕಟ

ಡಿಸೆಂಬರ್​ 23 ರಂದು ರಾಜ್ಯ ಮಟ್ಟದ ರೈತರ ದಿನ ಆಯೋಜನೆ ಮಾಡಲಾಗಿದೆ. ಧಾರವಾಡದಲ್ಲಿ 5 ಸಾವಿರ ರೈತರು ಭಾಗಿಯಾಗಲಿದ್ದಾರೆ. ಸಭೆ ಬಳಿಕ ನಾವು ಸುವರ್ಣ ಸೌಧಕ್ಕೆ ರ್ಯಾಲಿ ಹೋಗುತ್ತೇವೆ.  ಸಕ್ಕರೆ ನಿಯಂತ್ರಣ ಕಾಯ್ದೆ ಪ್ರಕಾರ 14 ದಿನದೊಳಗೆ ಬಿಲ್ ಕೊಡಬೇಕು. ಆದರೆ ಇನ್ನು 2000 ಕೋಟಿ ಹಣ ಬಾಕಿ ಉಳಿದಿದೆ.  ದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ್ದೇನೆ. ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿ ಮಾಡಿದ ದರ ಅವೈಜ್ಞಾನಿಕವಾಗಿದೆ. ಕಾರ್ಖಾನೆಗಳಿಂದ ರೈತರಿಗೆ ತೂಕದಲ್ಲಿ ಮೋಸ ಆಗುತ್ತಿದೆ.  ಹೋರಾಟದ ಫಲವಾಗಿ ಸರ್ಕರೆ ಕಾರ್ಖಾನೆ ಮೇಲೆ ದಾಳಿ ಮಾಡಲಾಗಿದೆ. ಅಧಿವೇಶನದಲ್ಲಿ ಈ ಭಾಗದ ಸಮಸ್ಯೆ ಚರ್ಚೆ ಆಗಲ್ಲ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here