Home Uncategorized ಉಡುಪಿ ಕೃಷ್ಣ ಮಠಕ್ಕೆ ಭೂಮಿ ಕೊಟ್ಟಿದ್ದು ಮುಸಲ್ಮಾನ: ಹೊಸ ವಿವಾದ ಸೃಷ್ಟಿಸಿದ ಕಾಂಗ್ರೆಸ್ ಮುಖಂಡನ ಹೇಳಿಕೆ

ಉಡುಪಿ ಕೃಷ್ಣ ಮಠಕ್ಕೆ ಭೂಮಿ ಕೊಟ್ಟಿದ್ದು ಮುಸಲ್ಮಾನ: ಹೊಸ ವಿವಾದ ಸೃಷ್ಟಿಸಿದ ಕಾಂಗ್ರೆಸ್ ಮುಖಂಡನ ಹೇಳಿಕೆ

30
0

ಉಡುಪಿಯ ಕೃಷ್ಣಮಠಕ್ಕೆ ಭೂಮಿ ನೀಡಿದ್ದು ಮುಸಲ್ಮಾನರು ಎಂದು ಕಾಂಗ್ರೆಸ್ ಮುಖಂಡರೊಬ್ಬರು ನೀಡಿರುವ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ. ಮಂಗಳೂರು/ಉಡುಪಿ: ಉಡುಪಿಯ ಕೃಷ್ಣಮಠಕ್ಕೆ ಭೂಮಿ ನೀಡಿದ್ದು ಮುಸಲ್ಮಾನರು ಎಂದು ಕಾಂಗ್ರೆಸ್ ಮುಖಂಡರೊಬ್ಬರು ನೀಡಿರುವ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.

ಕಾಂಗ್ರೆಸ್ ಮುಖಂಡ ಹಾಗೂ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಿಥುನ್ ರೈ ಅವರು ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಮೂಡುಬಿದಿರೆಯಲ್ಲಿ ಮಸೀದಿಯೊಂದರಲ್ಲಿ ಮಾತನಾಡಿದ್ದ ರೈ, ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂದು ಹೇಳಿದ್ದಾರೆ. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಹೇಳಿಕೆ ವಿರುದ್ಧ ಬಿಜೆಪಿ ತೀವ್ರವಾಗಿ ಕಿಡಿಕಾರಿದೆ. ಈ ವಿಡಿಯೋ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್, ‘ಶ್ರೀಕೃಷ್ಣ ಮಠಕ್ಕೆ ಯಾವುದೇ ಮುಸ್ಲಿಂ ದೊರೆ ಭೂಮಿಯನ್ನು ದಾನ ಮಾಡಿಲ್ಲ, ಒಬ್ಬ ರಾಮಭೋಜ ಮಠಕ್ಕೆ ಭೂಮಿ ನೀಡಿದ್ದಾರೆ. ಭೂಮಿ ಕೊಟ್ಟ ಬಗ್ಗೆ ಉಲ್ಲೇಖಗಳಿವೆ. ಮುಂದೆ ಆ ಭೂಮಿಯೇ ಕೃಷ್ಣ ಮಠಕ್ಕೆ ಬಳಕೆಯಾಗಿದೆ, ಅನಂತೇಶ್ವರ ದೇಗುಲ ನಂತರ ಕೃಷ್ಣ ಮಠ ನಿರ್ಮಾಣಗೊಂಡಿದೆ. ಸದ್ಯದ ಜಾಮಿಯಾ ಮಸೀದಿ ಕೂಡ ಜಂಗಮರ ಮಠದ ಜಾಗದಲ್ಲಿತ್ತು. ಮುಸಲ್ಮಾನರಿಗೂ ಮಸೀದಿ ಕಟ್ಟಲು ಜಂಗಮರ ಮಠ ಜಾಗ ಕೊಟ್ಟಿದೆ, ಶೋಕಮಾತಾ ಚರ್ಚ್ ಕೃಷ್ಣ ಮಠದವರು ಕೊಟ್ಟ ಲೀಸ್ ಭೂಮಿಯಲ್ಲಿದೆ.

ಕ್ರಿಶ್ಚಿಯನ್ಸ್​​​ ಸಮುದಾಯಕ್ಕೆ ಚರ್ಚ್​​ಗೆ ಕೃಷ್ಣಾಪುರ ಮಠ ಭೂಮಿ ನೀಡಿದೆ, ಮಿಥುನ್ ರೈ ಯಾವ ಮುಸಲ್ಮಾನ ರಾಜನ ಬಗ್ಗೆ ಮಾತಾಡಿದ್ದಾರೆಂಬುದು ನನಗೆ ಗೊತ್ತಿಲ್ಲ. ಮಿಥುನ್ ರೈ ಅವಕು ಅಯೋಧ್ಯೆಯ ಪರಿಸ್ಥಿತಿ ಬಗ್ಗೆ ಚಿಂತನೆ ಮಾಡಲಿ ಎಂದು ಹೇಳಿದ್ದಾರೆ.

ಈ ನಡುವೆ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ರೈ, ಪತ್ರಿಕೆಗಳಲ್ಲಿ ಬಂದಿದ್ದ ವರದಿ ನೋಡಿ ನಾನು ಹೇಳಿಕೆ ನೀಡಿದ್ದೇನೆ. ನಾನು ಸೌಹಾರ್ದಯುತ ಹೇಳಿಕೆ ನೀಡಿದ್ದೇನೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here