Home Uncategorized ಕಡತಗಳ ವಿಲೇವಾರಿ ವಿಳಂಬ: ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ ಬಿಡಿಎ

ಕಡತಗಳ ವಿಲೇವಾರಿ ವಿಳಂಬ: ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ ಬಿಡಿಎ

25
0
Advertisement
bengaluru

ಉದ್ದೇಶಪೂರ್ವಕವಾಗಿ ಕಡತಗಳನ್ನು ವಿಲೇವಾರಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಬಿಡಿಎ ಬುಧವಾರ ಎಚ್ಚರಿಕೆ ನೀಡಿದೆ. ಬೆಂಗಳೂರು: ಉದ್ದೇಶಪೂರ್ವಕವಾಗಿ ಕಡತಗಳನ್ನು ವಿಲೇವಾರಿ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಬಿಡಿಎ ಬುಧವಾರ ಎಚ್ಚರಿಕೆ ನೀಡಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕುಮಾರ್ ಜಿ ನಾಯಕ್ ಅವರು ಬುಧವಾರ ಸಾರ್ವಜನಿಕರ ಕುಂದುಕೊರತೆಗಳ ಸಭೆ ನಡೆಸಿದರು. ಈ ವೇಳೆ ಸಾರ್ವಜನಿಕರು ನೀಡಿದ ದೂರುಗಳನ್ನು ಆಲಿಸಿದ ನಾಯಕ್ ಅವರು, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಧ್ಯಾಹ್ನ 2.15ಕ್ಕೆ ಆರಂಭವಾದ ಸಭೆಯು ಸಂಜೆ 7 ಗಂಟೆಯವರೆಗೂ ನಡೆಯಿತು. ಸಭೆಯಲ್ಲಿ ಉದ್ದೇಶಪೂರ್ವಕವಾಗಿಯೇ ಕೆಲ ಅಧಿಕಾರಿಗಳು ಕಡತಗಳ ವಿವೇವಾರಿಯಲ್ಲಿ ವಿಳಂಬ ಮಾಡುತ್ತಿದ್ದಾರೆಂದು ಸುಮಾರು 83 ದೂರುಗಳು ಬಂದವು.

ಬನಶಂಕರಿ ಆರನೇ ಹಂತದ 175 ನಿವೇಶನದಾರರನ್ನು ಪ್ರತಿನಿಧಿಸುವ ಗುಂಪೊಂದು 2006 ರಿಂದ ನ್ಯಾಯಾಲಯದಲ್ಲಿರುವ ಮಾನವತೆಕಾವಲ್ ಮತ್ತು ತಲಘಟ್ಟಪುರ ಗ್ರಾಮಗಳ ಸಮಸ್ಯೆಗಳನ್ನು ಪರಿಹರಿಸಲು ಬಿಡಿಎ ವಕೀಲರು ಮುಂದೆ ಬರುತ್ತಿಲ್ಲ ಎಂದು ಆರೋಪಿಸಿದರು. ಪರ್ಯಾಯ ಸೈಟ್‌ಗಳ ಅಗತ್ಯ ಕುರಿತು ಕೆಲವರು ಮಾತನಾಡಿದರು.

bengaluru bengaluru

“ಸ್ವಾಧೀನ ಪ್ರಮಾಣಪತ್ರವನ್ನು ನೀಡಿದ ನಂತರ, ಕೆಲವು ತರಕಾರುಗಳು ಬಂದಿದ್ದೇ ಆದರೆ, ಸ್ವಾಧೀನಪತ್ರ ಪಡೆದುಕೊಂಡಾದ ಸಮಸ್ಯೆಗೆ ಸಿಲುಕಿಕೊಳ್ಳುತ್ತಾನೆ. ಸ್ವಾಧೀನ ಪ್ರಮಾಣಪತ್ರವನ್ನು ಈಗಾಗಲೇ ಹಸ್ತಾಂತರಿಸಿರುವುದರಿಂದ ಬಿಡಿಎ ನಿಯಮ 11 (ಎ) ರ ಪ್ರಕಾರ ಬಿಡಿಎ ಯಾವುದೇ ಪರ್ಯಾಯ ಸೈಟ್ ಅನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ವ್ಯಕ್ತಿಯೊಬ್ಬರು ವಿವರಿಸಿದರು.

ನಿಯಮ 11 (ಎ) ಅನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡುವಂತೆ ಸುಪ್ರೀಂಕೋರ್ಟ್’ಗೆ ಮನವಿ ಮಾಡುವುದು ಬಿಡಿಎಗೆ ಈಗ ಲಭ್ಯವಿರುವ ಏಕೈಕ ಮಾರ್ಗವಾಗಿದೆ ಎಂದಿದ್ದಾರೆ.


bengaluru

LEAVE A REPLY

Please enter your comment!
Please enter your name here