Home Uncategorized ಕರ್ನಾಟಕ ಡಿಐಜಿಗೆ ಜೈಲಿನಿಂದ ಬೆದರಿಕೆ ಕರೆ, ತನಿಖೆ ಶುರು!

ಕರ್ನಾಟಕ ಡಿಐಜಿಗೆ ಜೈಲಿನಿಂದ ಬೆದರಿಕೆ ಕರೆ, ತನಿಖೆ ಶುರು!

24
0

ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್(ಡಿಐಜಿ)ಗೆ ರಾಜ್ಯದ ಎರಡು ವಿಭಿನ್ನ ಕಾರಾಗೃಹಗಳಿಂದ ಬಂದ ಬೆದರಿಕೆ ಕರೆಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು: ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್(ಡಿಐಜಿ)ಗೆ ರಾಜ್ಯದ ಎರಡು ವಿಭಿನ್ನ ಕಾರಾಗೃಹಗಳಿಂದ ಬಂದ ಬೆದರಿಕೆ ಕರೆಗಳ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಡಿಐಜಿ ಕಾರಾಗೃಹ(ಉತ್ತರ ವಲಯ) ಟಿಪಿ ಶೆಹಾ ಅವರಿಗೆ ಬೆಂಗಳೂರಿನ ಹೊರವಲಯದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಮತ್ತು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬೆದರಿಕೆ ಕರೆಗಳು ಬಂದಿವೆ.

ತನ್ನ ವಸತಿ ಗೃಹವನ್ನು ಸ್ಫೋಟಿಸುವುದಾಗಿ ಶೆಹಾಗೆ ವ್ಯಕ್ತಿಯೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ ಭೂಗತ ಪಾತಕಿ ಬನ್ನಂಜೆ ರಾಜಾ ಜೈಲಿನಲ್ಲಿದ್ದಾಗ ಆತನಿಗೆ ಸಹಾಯ ಮಾಡಿದ್ದು ತನಗೆ ಗೊತ್ತು ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಡಲಗಾ ಜೈಲು ಮುಖ್ಯ ವಾರ್ಡನ್‌ಗಳಾದ ಜಗದೀಶ ಗಸ್ತಿ ಮತ್ತು ಎಸ್‌ಎಂ ಗೋಟೆ ಪರಿಚಯ ತನಗಿದೆ ಎಂದು ಕರೆ ಮಾಡಿದ ವ್ಯಕ್ತಿ ತಿಳಿಸಿದ್ದಾನೆ ಎದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಥಳೀಯ ರೈಲುಗಳಲ್ಲಿ ‘ಸರಣಿ ಬಾಂಬ್ ಸ್ಫೋಟ’ ಕುರಿತು ಮುಂಬೈ ಪೊಲೀಸರಿಗೆ ಬೆದರಿಕೆ ಕರೆ; ವ್ಯಕ್ತಿ ಬಂಧನ

ಜೈಲಿನೊಳಗೆ ಗಲಾಟೆ ನಡೆಸುವುದಾಗಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ. ಡಿಐಜಿ ಶೆಹಾ ಅವರು ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಬೆಳಗಾವಿಯ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಹಾರಾಷ್ಟ್ರದ ನಾಗ್ಪುರ ಕಚೇರಿಗೂ ಬೆದರಿಕೆ ಕರೆ ಮಾಡಲಾಗಿತ್ತು. ಕರೆ ಮಾಡಿದ ವ್ಯಕ್ತಿ 10 ಕೋಟಿ ರುಪಾಯಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಇಲ್ಲದಿದ್ದರೆ ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಸಿದ್ದನು.

ಹಿಂಡಲಗಾ ಜೈಲಿನಲ್ಲಿರುವ ಜಯೇಶ್ ಪೂಜಾರಿ ಎಂಬಾತ ಜನವರಿ 14 ಮತ್ತು ಮಾರ್ಚ್ 21ರಂದು ಸೆಲ್‌ಫೋನ್‌ನಿಂದ ಕರೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿತ್ತು. ಅಷ್ಟೇ ಅಲ್ಲದೆ ಭಯೋತ್ಪಾದಕ ಅಫ್ಸರ್ ಪಾಷಾ ಜೊತೆ ಸಂಪರ್ಕ ಇರುವುದುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

LEAVE A REPLY

Please enter your comment!
Please enter your name here