Home Uncategorized ಕಾರಾಗೃಹಗಳಲ್ಲಿ ಕೈದಿಗಳಿಗೆ ಸ್ಥಳಾವಕಾಶದ ಕೊರತೆಯಿದ್ದು, ಹೆಚ್ಚುವರಿ ಜೈಲುಗಳ ನಿರ್ಮಾಣಕ್ಕೆ ಕ್ರಮ: ಗೃಹ ಸಚಿವ

ಕಾರಾಗೃಹಗಳಲ್ಲಿ ಕೈದಿಗಳಿಗೆ ಸ್ಥಳಾವಕಾಶದ ಕೊರತೆಯಿದ್ದು, ಹೆಚ್ಚುವರಿ ಜೈಲುಗಳ ನಿರ್ಮಾಣಕ್ಕೆ ಕ್ರಮ: ಗೃಹ ಸಚಿವ

8
0

ರಾಜ್ಯದ ಬಹುತೇಕ ಕಾರಾಗೃಹಗಳಲ್ಲಿ ಸ್ಥಳಾವಕಾಶ ಕೊರತೆಯಿದ್ದು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜೈಲುಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ. ಬೆಂಗಳೂರು: ರಾಜ್ಯದ ಬಹುತೇಕ ಕಾರಾಗೃಹಗಳಲ್ಲಿ ಸ್ಥಳಾವಕಾಶ ಕೊರತೆಯಿದ್ದು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜೈಲುಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ.

ಬಿಜೆಪಿ ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್ ಕೆ ಅವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ ಅವರು, ರಾಜ್ಯದಲ್ಲಿ 54 ಕಾರಾಗೃಹಗಳಿದ್ದು, ಅವುಗಳಲ್ಲಿ 9 ಕೇಂದ್ರ, 21 ಜಿಲ್ಲಾ ಕಾರಾಗೃಹ, 29 ತಾಲೂಕು ಕಾರಾಗೃಹಗಳಿವೆ. ಪ್ರಸ್ತುತ 14,237 ಬಂಧಿಗಳಿಗೆ ಅವಕಾಶವಿದೆಯಾದರೂ, ಈಗ 16,053 ಮಂದಿ ಕೈದಿಗಳು ಇದ್ದಾರೆ ಎಂದು ಹೇಳಿದರು.

ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಅವರ ಮನ ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅವರ ಜೀವನ ನಿರ್ವಹಿಸಲು ತರಬೇತಿಯನ್ನು ನೀಡುತ್ತಿದ್ದೇವೆ. 28 ಕಾರಾಗೃಹಗಳಲ್ಲಿ ಅಧಿಕೃತ ಸ್ಥಳಾವಕಾಶಕ್ಕಿಂತ ಹೆಚ್ಚುವರಿ ಬಂಧಿಗಳು ದಾಖಲಾಗಿದ್ದಾರೆ. ಬಹಳ ಮಂದಿ ವಿದ್ಯಾವಂತರಿದ್ದಾರೆ, ಅವರಿಗೂ ಕಂಪ್ಯೂಟರ್ ತರಬೇತಿ ಸೇರಿದಂತೆ ಹಲವು ತರಬೇತಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here