ಕುಂದಾಪುರ: ಸ್ವಾಮಿ ವಿವೇಕಾನಂದರ 160ನೇ ದಿನಾಚರಣೆ ಪ್ರಯುಕ್ತ ಬೆಲೆ ಏರಿಕೆ, ಬಡತನ, ಹಸಿವು, ಅಪೌಷ್ಟಿ ಕತೆ ನಿಯಂತ್ರಣಕ್ಕಾಗಿ, ದುಡಿಯುವ ಜನರ ಐಕ್ಯತೆ ಮತ್ತು ಹಕ್ಕುಗಳ ರಕ್ಷಣೆಗಾಗಿ, ವೇತನ, ಉದ್ಯೋಗ, ಜೀವನೋಪಾ ಯಕ್ಕಾಗಿ, ರೈತ,ಕಾರ್ಮಿಕ, ಜನವಿರೋಧಿ ಕಾನೂನುಗಳ ವಾಪಾಸ್ಸಾತಿಗಾಗಿ, ಕೇಂದ್ರದ ಸಾರ್ವಜನಿಕ ಉದ್ದಿಮೆಗಳು, ಸಂವಿಧಾನ ಮೌಲ್ಯಗಳ ರಕ್ಷಣೆಗಾಗಿ 25 ಬೇಡಿಕೆಗಳನ್ನೊಳಗೊಂಡಂತೆ ಸಿಐಟಿಯು ರಾಜ್ಯ ಸಮಿತಿ ಕರೆಯ ಮೇರೆಗೆ ಸಾರ್ವಜನಿಕರಿಂದ ಸಹಿ ಸಂಗ್ರಹದ ಕಾರ್ಯಕ್ರಮಕ್ಕೆ ಶುಕ್ರವಾರ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಚಾಲನೆ ನೀಡಲಾಯಿತು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿದರು. ಈ ವೇಳೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ತಾಲೂಕು ಸಂಚಾಲಕ ಚಂದ್ರಶೇಖರ ವಿ., ಸಿಐಟಿಯು ಮುಖಂಡರಾದ ಚಿಕ್ಕ ಮೊಗವೀರ, ಸಂತೋಷ ಹೆಮ್ಮಾಡಿ, ಮಧುಶ್ರೀ, ಸುಧೀರ್, ಕೃಷ್ಣ ಪೂಜಾರಿ, ಅಣ್ಣಪ್ಪಅಬ್ಬಿಗುಡ್ಡಿ, ಚಂದ್ರ ದೇವಾಡಿಗ, ಮೋಹನ, ರಾಜು ದೇವಾಡಿಗ, ಸುಧಾಕರ, ಅಲೆಕ್ಸಾಂಡರ್, ರೆಹಮಾನ್, ಗುಲಾಬಿ ಮೊದ ಲಾದವರು ಉಪಸ್ಥಿತರಿದ್ದರು.
ಬೈಂದೂರು: ಕಾರ್ಮಿಕರ ಬೇಡಿಕೆಗಳಿಗಾಗಿ ಸಂಸದರ ಕಚೇರಿ ಚಲೋ ಹೋರಾಟ ಕಾರ್ಯಕ್ರಮದ ಅಂಗವಾಗಿ ಸಿಐಟಿಯು ಬೈಂದೂರು ತಾಲೂಕು ಸಮಿತಿ ನೇತೃತ್ವದಲ್ಲಿ ಎರಡು ಕೋಟಿ ಸಹಿ ಸಂಗ್ರಹದ ಅಂದೋಲನಕ್ಕೆ ಸಿಐಟಿಯು ಮುಖಂಡ ರಮೇಶ್ ಗುಲ್ವಾಡಿ ಬೈಂದೂರು ತಹಶೀಲ್ದಾರ್ ಕಚೇರಿ ಆಡಳಿತ ಸೌಧ ಬಳಿಯ ಬಸ್ಸು ನಿಲ್ದಾಣದಲ್ಲಿ ಶುಕ್ರವಾರ ಚಾಲನೆ ನೀಡಿದರು.
ಸಿಐಟಿಯು ಜಿಲ್ಲಾ ಮುಖಂಡ ಗಣೇಶ ತೊಂಡೆಮಕ್ಕಿ ಸಿಐಟಿಯು ಕೆಂಬಾವುಟ ಹಸ್ತಾಂತರಿಸಿದರು. ಸ್ಥಳಿಯ ಕಾರ್ಮಿಕ ಮುಖಂಡ ವೆಂಕಟೇಶ ಕೋಣಿ ಮಾತನಾಡಿದರು. ಬೈಂದೂರು ಪೇಟೆಯಲ್ಲಿ ಸಹಿ ಸಂಗ್ರಹ ನಡೆಸಿ, ಸಾರ್ವಜನಿಕ ರಿಗೆ ಪ್ರಚಾರ ಕರಪತ್ರಗಳನ್ನು ವ್ಯಾಪಕವಾಗಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಮುಖಂಡರಾದ ರಾಮ ಕಂಬದಕೋಣೆ, ಮಂಜು ಪಡುವರಿ, ಶ್ರೀಧರ ದೇವಾಡಿಗ ಉಪ್ಪುಂದ, ಅಮ್ಮಯ್ಯ ಪೂಜಾರಿ ಬಿಜೂರು, ಸಾವಿತ್ರಿ ಹೆಮ್ಮಾಡಿ, ನಾಗರತ್ನ ಪಡುವರಿ, ಅಣ್ಣಪ್ಪಬಿಲ್ಲವ ನಾವುಂದ, ರಾಜು ದೇವಾಡಿಗ ಹೇರೂರು, ಲಕ್ಷ್ಮಣ ದೇವಾಡಿಗ, ಯಡ್ತರೆ, ರೇವತಿ ಪಡುವರಿ ಮೊದಲಾದವರು ಉಪಸ್ಥಿತರಿದ್ದರು.