Home Uncategorized ಗುರುವಾಯನಕೆರೆ : ರಸ್ತೆ ಬದಿ ನಿಂತಿದ್ದ ಮಹಿಳೆಗೆ ಕಾರು ಢಿಕ್ಕಿ: ಗಂಭೀರ ಗಾಯ

ಗುರುವಾಯನಕೆರೆ : ರಸ್ತೆ ಬದಿ ನಿಂತಿದ್ದ ಮಹಿಳೆಗೆ ಕಾರು ಢಿಕ್ಕಿ: ಗಂಭೀರ ಗಾಯ

39
0

ಬೆಳ್ತಂಗಡಿ, ಜ.13: ರಸ್ತೆ ಬದಿ ನಿಂತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಅರಮಲೆಬೆಟ್ಟದ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಗೋಪಿನಾಥ ನಾಯಕ್ ಅವರ ಪತ್ನಿ ಅಂಜಲಿ ನಾಯಕ್ ಗಂಭೀರವಾಗಿ ಗಾಯಗೊಂಡವರು.

ಅಂಜಲಿ ರಸ್ತೆ ಬದಿ ನಿಂತಿದ್ದ ಓಮ್ನಿ ಕಾರೊಂದರ ಪಕ್ಕದಲ್ಲೇ ರಸ್ತೆ ದಾಟಲು ಅಣಿಯಾಗುತ್ತಿದ್ದ ವೇಳೆ ಅತಿಯಾದ ವೇಗದಲ್ಲಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅವರಿಗೆ ಢಿಕ್ಕಿ ಹೊಡದಿದೆ.

ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

LEAVE A REPLY

Please enter your comment!
Please enter your name here