Home Uncategorized ಬೆಂಗಳೂರು: ಮೊಬೈಲ್ ಕದ್ದು ರೂ.1,000ಕ್ಕೆ ಬೇಡಿಕೆಯಿಟ್ಟ ಖದೀಮ ಪೊಲೀಸರ ಬಲೆಗೆ!

ಬೆಂಗಳೂರು: ಮೊಬೈಲ್ ಕದ್ದು ರೂ.1,000ಕ್ಕೆ ಬೇಡಿಕೆಯಿಟ್ಟ ಖದೀಮ ಪೊಲೀಸರ ಬಲೆಗೆ!

18
0

ಮೊಬೈಲ್ ಕಳವು ಮಾಡಿ, ಮಾಲೀಕನಿಗೆ ಕಲೆ ಮಾಡಿ ರೂ.1,000 ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದ ಖದೀಮನೊಬ್ಬ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಬೆಂಗಳೂರು: ಮೊಬೈಲ್ ಕಳವು ಮಾಡಿ, ಮಾಲೀಕನಿಗೆ ಕಲೆ ಮಾಡಿ ರೂ.1,000 ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದ ಖದೀಮನೊಬ್ಬ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
 
ಎನ್ ಮನೋಜ್ (22) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಮಂಗಳೂರು-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಮೊಬೈಲ್ ಕಳವು ಮಾಡಿದ್ದ. ನಂತರ ಮಾಲೀಕರಿಗೆ ಕಲೆ ಮಾಡಿ ಫೋನ್ ಪೇ ಮೂಲಕ ರೂ.1,000 ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.

ಮಾರ್ಚ್ 3 ರಂದು ಆರೋಪಿ ಫೋನ್ ಕದ್ದಿದ್ದು, ಮರುದಿನವೇ ಹಲಸೂರಿನಲ್ಲಿ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡುಬಿದಿರೆಯ ಮೊದಲ ವರ್ಷದ ಬಿಬಿಎ ವಿದ್ಯಾರ್ಥಿಯಾಗಿರುವ ಆರ್ ಶಶಾಂಕ್ ಮೊಬೈಲ್ ಕಳೆದುಕೊಂಡಿದ್ದರು.

ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಹೋಗುತ್ತಿದ್ದೆ. ಮಲಗುವಾಗ ನನ್ನ ಫೋನ್ ಅನ್ನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೆ. ರೈಲು ಮೈಸೂರು ತಲುಪಿದಾಗ 3.30ಕ್ಕೆ ಫೋನ್ ನೋಡಿದ್ದೆ. ಆದರೆ, ಬೆಳಗ್ಗೆ 5 ಗಂಟೆ ಸುಮಾರಿಗೆ ಚನ್ನಪಟ್ಟಣ ತಲುಪಿದಾಗ ನನ್ನ ಫೋನ್ ನಾಪತ್ತೆಯಾಗಿತ್ತು. ಫೋನ್ ಖರೀದಿಗೆ ರೂ.6,000 ಖರ್ಚು ಮಾಡಿದ್ದೆ. ಫೋನ್ ನಾಪತ್ತೆಯಾದ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರನ್ನು ಸಂಪರ್ಕಿಸಿದ್ದೆ.

ಆರೋಪಿಯನ್ನು ಸಂಪರ್ಕಿಸಲು ಪದೇ ಪದೇ ತಮ್ಮ ಫೋನ್’ಗೆ ಶಶಾಂಕ್ ಕರೆ ಮಾಡಿದ್ದಾರೆ. ಹಲವು ಕರೆಗಳ ಬಳಿಕ ಆರೋಪಿ ಒಮ್ಮೆ ಫೋನ್ ತೆಗೆದು ಮಾತನಾಡಿದ್ದಾನೆ. ಈ ವೇಳೆ ಫೋನ್ ಪೇ ಮೂಲಕ ರೂ.1,000 ನೀಡಿದರೆ ಫೋನ್ ಹಿಂತಿರುಗಿಸುವುದಾಗಿ ಹೇಳಿದ್ದಾನೆ. ಈ ಬಗ್ಗೆ ಶಶಾಂಕ್ ನಮಗೆ ಮಾಹಿತಿ ನೀಡಿದ್ದ. ಬಳಿಕ ಆರೋಪಿ ನೀಡಿದ್ದ ಫೋನ್ ಪೇ ನಂಬರ್’ನ್ನು ಟ್ರ್ಯಾಕ್ ಮಾಡಿದೆವು. ಆ ನಂಬರ್ ಹಲಸೂರು ಮೊಬೈಲ್ ಶಾಪ್ ಮಾಲೀಕರನ್ನು ಸಂಪರ್ಕಿಸಿತ್ತು. ಬಳಿಕ ಆ ವ್ಯಕ್ತಿಗೆ ಆರೋಪಿಯೊಂದಿಗೆ ಮಾತನಾಡಿಸುತ್ತಿರುವಂತೆ ತಿಳಿಸಿದ್ದೆವು. ನಮ್ಮ ನಿರ್ದೇಶನದಂತೆಯೇ ಅವರು ನಡೆದುಕೊಂಡರು. ಆರೋಪಿ ಹಣ ಪಡೆದುಕೊಳ್ಳಲು ಸ್ಥಳಕ್ಕೆ ಬರುತ್ತಿದ್ದಂತೆಯೇ ಆತನನನ್ನು ವಶಕ್ಕೆ ಪಡೆದುಕೊಂಡೆವು ಎಂದು ಜಿಆರ್’ಪಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here