Home Uncategorized ಚರಿತ್ರೆ ನಿರ್ಮಿಸುವ ಹೊಸ್ತಿಲಿನಲ್ಲಿ ಭಾರತೀಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ

ಚರಿತ್ರೆ ನಿರ್ಮಿಸುವ ಹೊಸ್ತಿಲಿನಲ್ಲಿ ಭಾರತೀಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ

6
0

ಹೊಸದಿಲ್ಲಿ: ಪುರುಷರ ಡಬಲ್ಸ್ ನಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರನಾಗುವ ಮೂಲಕ ಆ ಸಾಧನೆಗೈದ ಅತ್ಯಂತ ಹಿರಿಯ ಆಟಗಾರ ಎಂಬ ಹೊಸ ಚರಿತ್ರೆಯನ್ನು ನಿರ್ಮಿಸುವ ಹೊಸ್ತಿಲಿನಲ್ಲಿ ಭಾರತದ ಅನುಭವಿ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಇದ್ದಾರೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಜೊತೆಗೂಡಿ ಆರನೆ ಕ್ರಮಾಂಕದ ಅರ್ಜೆಂಟೀನಾ ಜೋಡಿಗಳಾದ ಮ್ಯಾಕ್ಸಿಮೊ ಗೋನ್ಝಾಲೆಝ್ ಹಾಗೂ ಆ್ಯಂಡ್ರೆಸ್ ಮೊಲ್ಟೇನಿ ಅವರನ್ನು ಸುಲಭವಾಗಿ ಪರಾಭವಗೊಳಿಸುವ ಮೂಲಕ 43 ವರ್ಷದ ರೋಹನ್ ಬೋಪಣ್ಣ ಆಸ್ಟ್ರೇಲಿಯಾ ಮುಕ್ತ ಟೆನಿಸ್ ಕ್ರೀಡಾಕೂಟದ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ತಮ್ಮ ವೃತ್ತಿಜೀವನದ ಅತ್ಯಂತ ಉನ್ನತ ಕ್ರಮಾಂಕವಾದ ನಂ. 3 ಕ್ರಮಾಂಕದ ಆಟಗಾರರಾಗಿ ಎಬ್ಡೆನ್ ಅವರೊಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿರುವ ರೋಹನ್ ಬೋಪಣ್ಣ, ಸೆಮಿಫೈನಲ್ ಪಂದ್ಯದಲ್ಲಿ ಕ್ರಮಾಂಕರಹಿತ ಆಟಗಾರರಾದ ಮ್ಯಾಕಾಕ್ ಹಾಗೂ ಝಿಂಝೆನ್ ಝಾಂಗ್ ಅವರನ್ನು ಎದುರಿಸಲಿದ್ದಾರೆ. ಈ ಭಾರತ-ಆಸ್ಟ್ರೇಲಿಯಾ ಜೋಡಿಯು ಕ್ರೀಡಾಕೂಟದ ಫೈನಲ್ ಪಂದ್ಯದ ಮೇಲೆ ಕಣ್ಣು ನೆಟ್ಟಿದೆ.

ರೋಹನ್ ಬೋಪಣ್ಣ ಅವರು, ಇದುವರೆಗೂ ಡಬಲ್ಸ್ ಕ್ರಮಾಂಕದಲ್ಲಿ ವಿಶ್ವ ನಂ. 1 ಕ್ರಮಾಂಕ ಹೊಂದಿದ್ದ ಹಿರಿಯ ಆಟಗಾರರಾದ ಅಮೆರಿಕಾದ ರಾಜೀವ್ ರಾಮ್ ಅವರನ್ನು ಹಿಂದಿಕ್ಕಲಿದ್ದಾರೆ. ರಾಜೀವ್ ರಾಮ್ ಅವರು ವಿಶ್ವದ ನಂ. 1 ಕ್ರಮಾಂಕವನ್ನು ತಮ್ಮ 38 ನೇ ವಯಸ್ಸಿನಲ್ಲಿ, ಅಕ್ಟೋಬರ್ 2022ರಲ್ಲಿ ತಲುಪಿದ್ದರು.

ಸೋಮವಾರ ಕ್ರೀಡಾಕೂಟ ಮುಕ್ತಾಯಗೊಂಡ ನಂತರ ವಿಶ್ವದ ನಂ. 1 ಪಟ್ಟವನ್ನು ರೋಹನ್ ಬೋಪಣ್ಣ ಅವರ ಮುಡಿಗೇರಲಿದೆ.

LEAVE A REPLY

Please enter your comment!
Please enter your name here