ಚಿಕ್ಕಬಳ್ಳಾಪುರದ ಅವಲಕುರ್ಕಿ ಗ್ರಾಮದ ಗುಡ್ಡದಲ್ಲಿ ಪತ್ತೆಯಾದ ವೃದ್ಧೆಯ ಮೃತದೇಹವನ್ನು ಬೆಟ್ಟದಿಂದ ಹೊತ್ತು ತಂದು ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಬೆಂಗಳೂರು: ಚಿಕ್ಕಬಳ್ಳಾಪುರದ ಅವಲಕುರ್ಕಿ ಗ್ರಾಮದ ಗುಡ್ಡದಲ್ಲಿ ಪತ್ತೆಯಾದ ವೃದ್ಧೆಯ ಮೃತದೇಹವನ್ನು ಬೆಟ್ಟದಿಂದ ಹೊತ್ತು ತಂದು ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಚಿಕ್ಕಬಳ್ಳಾಪುರದ ಅವಲಕುರ್ಕಿ ಗ್ರಾಮದ ಇಶಾ ಫೌಂಡೇಶನ್ ಬಳಿಯ ಗುಡ್ಡದಲ್ಲಿ ಸೇನಾ ಸಿಬ್ಬಂದಿ ಕಸರತ್ತು ನಡೆಸುತ್ತಿದ್ದಾಗ ವೃದ್ಧೆಯ ಶವವನ್ನು ಗಮನಿಸಿದ್ದಾರೆ. ಈ ವಿಷಯವನ್ನು ಎಸ್ಪಿ ಡಿಎಲ್ ನಾಗೇಶ್ ಅವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸುವಂತೆ ತಿಳಿಸಿದ್ದಾರೆ.
ದಟ್ಟವಾದ ಪೊದೆಗಳು ಮತ್ತು ಗುಡ್ಡಗಾಡು ಪ್ರದೇಶದಿಂದಾಗಿ ಆಂಬ್ಯುಲೆನ್ಸ್ ಸೇರಿದಂತೆ ವಾಹನಗಳು ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಪೊಲೀಸರು ಸುಮಾರು ನಾಲ್ಕು ಕಿಲೋಮೀಟರ್ ನಡೆದು ಶವವನ್ನು ಸಾಗಿಸಿದರು.
ಇದನ್ನೂ ಓದಿ: ಚಾಮರಾಜನಗರ: ಶಾಲೆಯಲ್ಲಿ ರಾಷ್ಟ್ರಗೀತೆ ಹಾಡುವ ವೇಳೆ ಕುಸಿದು ಬಿದ್ದ ಬಾಲಕಿ, ಆಸ್ಪತ್ರೆ ತಲುಪುವ ಮುನ್ನವೇ ಸಾವು
ನಂತರ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಒಟ್ಟಾಗಿ ಕೆಲಸ ಮಾಡಿ ಬಿದಿರಿನ ಕೋಲುಗಳ ಸಹಾಯದಿಂದ ಶವವನ್ನು ಹೆಗಲ ಮೇಲೆ ಹೊತ್ತು ಆಂಬುಲೆನ್ಸ್ ತಲುಪಲು 4 ಕಿ.ಮೀ. ನಡೆದರು. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ನಾಗೇಶ್, ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಮೃತದೇಹವನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು. ಶವವನ್ನು ಹೊತ್ತೊಯ್ಯಲು ಪೊಲೀಸರು ಮತ್ತು ಭಾರತೀಯ ಸೇನೆಯ ಸಿಬ್ಬಂದಿಯ ಪ್ರಯತ್ನವನ್ನು ಅವರು ಶ್ಲಾಘಿಸಿದರು.
ಇದನ್ನೂ ಓದಿ: ಜೆಡಿಎಸ್ ಮುಖಂಡ, ಶಾಸಕ ಹೆಚ್ ಡಿ ರೇವಣ್ಣ ಆಪ್ತನ ಬರ್ಬರ ಹತ್ಯೆ!
ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿಯ ಶವವನ್ನು ಜಿಲ್ಲಾಸ್ಪತ್ರೆಯ ಶೈತ್ಯಾಗಾರದಲ್ಲಿ ಇಡಲಾಗಿದ್ದು, ಮೃತರ ವಾರಸುದಾರರು ಯಾರಾದರೂ ಇದ್ದರೆ ತಮ್ಮನ್ನು ಸಂಪರ್ಕಿಸುವಂತೆ ಗ್ರಾಮಾಂತರ ಪೋಲಿಸರು ತಿಳಿಸಿದ್ದಾರೆ.