Home ನಗರ ಜಂಬೂಸವಾರಿ 40 ನಿಮಿಷಕ್ಕೆ ಸೀಮಿತ: 300 ಜನರಿಗೆ ಮಾತ್ರ ಪ್ರವೇಶ; ಡಾ. ಚಂದ್ರಗುಪ್ತ

ಜಂಬೂಸವಾರಿ 40 ನಿಮಿಷಕ್ಕೆ ಸೀಮಿತ: 300 ಜನರಿಗೆ ಮಾತ್ರ ಪ್ರವೇಶ; ಡಾ. ಚಂದ್ರಗುಪ್ತ

72
0

ಮೈಸೂರು:

ವಿಶ್ವವಿಖ್ಯಾತ ಮೈಸೂರು ದಸರಾದ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆ 30 ರಿಂದ 40 ನಿಮಿಷಗಳ ಒಳಗೆ ಮುಗಿಯಲಿದ್ದು, ಸೋಮವಾರ ಅರಮನೆ ಸುತ್ತ ಇರುವ ಎಲ್ಲಾ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಇಂದು ಮರದ ಅಂಬಾರಿ ತಾಲೀಮಿನಲ್ಲಿ ಭಾಗವಹಿಸಿ ನಂತರ ಜಂಬೂಸವಾರಿಯ ಸಿದ್ಧತೆಯನ್ನು ಪರಿಶೀಲನೆ ನಡೆಸಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಬಾರಿ ಜಂಬೂಸವಾರಿಯ ತಾಲೀಮು ಮುಗಿದ್ದಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಬಲರಾಮ ದ್ವಾರದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಮಧ್ಯಾಹ್ನ ಮೆರವಣಿಗೆ ಆರಂಬಗೊಳ್ಳಲಿದೆ.

ಆಹ್ವಾನಿತರಿಗೆ ಮಾತ್ರ ಅರಮನೆ ಒಳಗಡೆ ಪ್ರವೇಶವಿದ್ದು ಸಾರ್ವಜನಿಕರಿಗೆ ಅರಮನೆ ಪ್ರವೇಶ ಇರುವುದಿಲ್ಲ. ಜಂಬೂಸವಾರಿ ದಿನ ಅರಮನೆ ಸುತ್ತ ಇರುವ ಎಲ್ಲಾ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಇರುತ್ತದೆ.

ಜಂಬೂಸವಾರಿಯಲ್ಲಿ ಭಾಗವಹಿಸುವ ಕಲಾವಿದರು ವೀರಗಾಸೆ, ನಾದಸ್ವರ, ಸಾಂಸ್ಕೃತಿಕ ತಂಡ, ಅಶ್ವಪಡೆ, ಪೊಲೀಸ್ ಬ್ಯಾಂಡ್, ಒಂದು ಸ್ತಬ್ಧ ಚಿತ್ರದಲ್ಲಿ ಭಾಗವಹಿಸುವ ಜನರಿಗೆ ಮಾತ್ರ ಅರಮನೆ ಒಳಗೆ ಪ್ರವೇಶ ಇರುತ್ತದೆ. ಉಳಿದ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here