ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರಿಲ್ಲದ ಕಾರಣ ಕರ್ನಾಟಕ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಹೇಳಿದ್ದಾರೆ. ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ಸಾಕಷ್ಟು ನೀರಿಲ್ಲದ ಕಾರಣ ಕರ್ನಾಟಕ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಹೇಳಿದ್ದಾರೆ.
ಕೆ. ಕೆ ಗೆಸ್ಟ್ ಹೌಸ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ‘ನಮಗೆ ಜಗಳ ಆಡಲು ಇಷ್ಟವಿಲ್ಲ, ಕುಳಿತು ಬಗೆಹರಿಸಿಕೊಳ್ಳೋಣ ಅಂತಾ ಕೇಂದ್ರ ಬಿಜೆಪಿ ಸರ್ಕಾರದ (BJP Govt) ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಏಕರೂಪ ನಾಗರೀಕ ಕಾಯಿದೆ (Uniform Civil Code) ಜಾರಿ ವಿಚಾರ ಕುರಿತು ಡಿಕೆ ಮಾತನಾಡಿದ್ದು, ನಮ್ಮ ರಾಷ್ಟ್ರೀಯ ನಾಯಕರು ನಿರ್ಧಾರ ತಿಳಿಸುತ್ತಾರೆ ಎಂದರು.
ಇದನ್ನೂ ಓದಿ: ಮಳೆ ಅವಾಂತರಕ್ಕೆ ಮೂವರ ಸಾವು: ಕರಾವಳಿಯಲ್ಲಿ ಇಂದಿನಿಂದ 4 ದಿನ ಯೆಲ್ಲೋ ಅಲರ್ಟ್
ಈಗಲೂ ನಾವೆಲ್ಲಾ ಬದುಕುತ್ತಿದ್ದೇವೆ, ನಮ್ಮ ಪಾರ್ಟಿ ನಿರ್ಧಾರ ಹೇಳುತ್ತೆ. ನಮಗೆ ಜಗಳ ಆಡಲು ಇಷ್ಟವಿಲ್ಲ. ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಕೋಲಾರ, ತುಮಕೂರು ಕಡೆಗಿನ ನೀರಿನ ವಿಚಾರವಾಗಿ ನೋಟಿಫಿಕೇಶನ್ ಮಾಡಬೇಕು. ವಾಸ್ತವಾಂಶ ಅವರಿಗೆ ಗೊತ್ತಿಲ್ಲ ಎಂದು ಕಾಣಿಸುತ್ತದೆ, ಯಾವ ನೀರು ಅಂತ. ಬೇರೆ ಯಾವ ವಿಚಾರಕ್ಕೂ ನಾವು ಯುದ್ಧ ಮಾಡೋಕೆ ಇಷ್ಟವಿಲ್ಲ. ಅವರೆಲ್ಲ ನಮ್ಮ ಬ್ರದರ್ಸ್, ಅಲ್ಲಿಯವರೂ ಇಲ್ಲಿ ಕೆಲಸ ಮಾಡ್ತಾರೆ. ಇಲ್ಲಿಯವರೂ ಅಲ್ಲಿ ಕೆಲಸ ಮಾಡ್ತಾರೆ. ಕುಳಿತು ಬಗೆಹರಿಸಿಕೊಳ್ಳೋಣ ಎಂಬ ಆಸೆ ನಮ್ಮದು ಅಷ್ಟೇ ಎಂದು ಹೇಳಿದರು.
#Karnataka DCM @DKShivakumar in #NewDelhi calls on central ‘Jalshakti’ minister @gssjodhpur and discussed about the projects concerning the state including the #Mekedatu balancing reservoir project, sources said.@XpressBengaluru @AshwiniMS_TNIE @Cloudnirad @ramupatil_TNIE pic.twitter.com/mntZVuO8cc
— Devaraj Hirehalli Bhyraiah (@swaraj76) June 29, 2023
ತಮಿಳುನಾಡಿನ ಜನರು ನಮ್ಮ ಸಹೋದರರು ಎಂದು ನಾವು ಅವರೊಂದಿಗೆ ಸಂಘರ್ಷ ಮಾಡಲು ಬಯಸುವುದಿಲ್ಲ. ಜುಲೈ 9 ರಂದು ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದಲ್ಲಿ ಅಣೆಕಟ್ಟುಗಳ ಸುರಕ್ಷತೆಯ ಕುರಿತು ಸಭೆ ನಡೆಸಲು ಕೇಂದ್ರ, ಇತರ ರಾಜ್ಯಗಳು, ವಿಶೇಷವಾಗಿ ತಮಿಳುನಾಡು ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಅಧಿಕಾರಿಗಳನ್ನು ಆಹ್ವಾನಿಸಿದ್ದೇನೆ.
ಇದನ್ನೂ ಓದಿ: ಕರ್ನಾಟಕದ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ನೀರಿನ ಬಿಕ್ಕಟ್ಟು; ತುರ್ತು ಯೋಜನೆ ರೂಪಿಸಲು ಸರ್ಕಾರ ಸೂಚನೆ
ಕಳೆದ ವರ್ಷ ಸುಮಾರು 700 ಟಿಎಂಸಿ ಅಡಿ ನೀರು ಸಮುದ್ರ ಸೇರಿರಬಹುದು, ಈ ವರ್ಷ ತಮಿಳುನಾಡು ನೀರು ಬಿಡುವಂತೆ ಒತ್ತಾಯಿಸಿದರೂ ನೀರು ಸಾಕಾಗುತ್ತಿಲ್ಲ, ನಮಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಬೆಂಗಳೂರು ಕೂಡ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದಲ್ಲಿ ನೀರಿನ ಕಠಿಣ ಪರಿಸ್ಥಿತಿ ಇದೆ. ಇಲ್ಲಿನ ನೆಲದ ಪರಿಸ್ಥಿತಿಯ ತಿಳುವಳಿಕೆಯ ಕೊರತೆಯಿಂದಾಗಿ ನ್ಯಾಯಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ಬಂದಿರಬಹುದು.. ವಿವಾದಗಳನ್ನು ಪರಿಹರಿಸಲು ಅವರು ಸಭೆ ಕುಳಿತು ಚರ್ಚಿಸಿ ಮಾತನಾಡಬೇಕಾಗಿದೆ ಎಂದು ಅವರು ಹೇಳಿದರು.
ನಮಗೆ ಖಾಯಂ ಪರಿಹಾರ ಬೇಕು
ಇದೇ ವೇಳೆ ಅನ್ನಭಾಗ್ಯ ಯೋಜನೆ ಜಾರಿ ವಿಚಾರದಲ್ಲಿ ಸಚಿವ ಕೆಎಚ್ ಮುನಿಯಪ್ಪ ವಿಫಲರಾದರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಸಿಎಂ ಹಾಗೂ ಮುನಿಯಪ್ಪ ಅವರು ಪ್ರಯತ್ನ ಮಾಡುತ್ತಿದ್ದಾರೆ. ಎರಡು ತಿಂಗಳು, ಆರು ತಿಂಗಳು ಕೊಡಲು ಪಕ್ಕದ ರಾಜ್ಯದವರು ಕೊಡಲು ಸಿದ್ದರಾಗಿದ್ದರು. ಮಧ್ಯದಲ್ಲಿ ನಿಲ್ಲಿಸಬಾರದು ಎಂದು ಖಾಯಂ ಪರಿಹಾರ ಬೇಕು ನಮಗೆ, ಬಿಜೆಪಿಯವರು ಕೊಟ್ಟ ಸಲಹೆಯನ್ನು ತಲೆಯಲ್ಲಿಟ್ಟುಕೊಂಡೆ ಈ ತೀರ್ಮಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ತುಂಗಭದ್ರಾ ಜಲಾಶಯದಲ್ಲಿನ ನೀರನ್ನು ಉಳಿಸಲು ರಾಯಚೂರಿನಲ್ಲಿ ಸೆಕ್ಷನ್ 144 ಜಾರಿ
ಶಿವಕುಮಾರ್ ಅವರು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು, ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಸಾಧ್ಯತೆಯನ್ನು ಅನ್ವೇಷಿಸದೆ ನ್ಯಾಯಮಂಡಳಿ ರಚಿಸದಂತೆ ಮನವಿ ಮಾಡಿದರು.
ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 500 ಟಿಎಂಸಿ ಅಡಿ ಬೆಂಗಳೂರಿನ ಸಂಸ್ಕರಿಸಿದ ಒಳಚರಂಡಿ ನೀರನ್ನು ಬಳಸುತ್ತಿರುವುದಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದ್ದು, ಜುಲೈ 5ರೊಳಗೆ ನ್ಯಾಯಮಂಡಳಿ ರಚನೆಗೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.