Home ಬೆಂಗಳೂರು ನಗರ ಗುರುಪೂರ್ಣಿಮೆ: ಶ್ರೀಶೈಲ ಸ್ವಾಮಿಗಳ ಆಶೀರ್ವಾದ ಪಡೆದ ಸಚಿವ ಎಂ ಬಿ ಪಾಟೀಲ

ಗುರುಪೂರ್ಣಿಮೆ: ಶ್ರೀಶೈಲ ಸ್ವಾಮಿಗಳ ಆಶೀರ್ವಾದ ಪಡೆದ ಸಚಿವ ಎಂ ಬಿ ಪಾಟೀಲ

50
0
Guru Purnima: Minister MB Patil took blessings of Srishaila Swami
Guru Purnima: Minister MB Patil took blessings of Srishaila Swami
Advertisement
bengaluru

ಲಿಂಗಾಯತ ಮಠಗಳ ಕೆಲಸ ಅಮೋಘವಾದುದು

ಬೆಂಗಳೂರು:

ಭಾರತ ಮತ್ತು ಕರ್ನಾಟಕದ ಚರಿತ್ರೆಯಲ್ಲಿ ಶಿಕ್ಷಣ ಮತ್ತು ದಾಸೋಹದ ಸಂಸ್ಕೃತಿಯನ್ನು ಆರಂಭಿಸುವ ಮೂಲಕ ಲಿಂಗಾಯತ ಮಠಮಾನ್ಯಗಳು ಅಮೋಘವಾದ ಕೆಲಸ ಮಾಡಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಶನಿವಾರ ಇಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗುರುಪೂರ್ಣಿಮೆ ಪ್ರಯುಕ್ತ ನಗರದ ವಿಜಯನಗರದ ಸುಜ್ಞಾನ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಶೈಲ ಮಹಾಸಂಸ್ಥಾನದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದರ್ಶನ ಪಡೆದು, ಆಶೀರ್ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶ್ರೀಗಳು, ಪುಷ್ಪಮಾಲೆ ಹಾಕಿ, ಶಾಲು ತೊಡಿಸಿ, ಸಚಿವರನ್ನು ಗೌರವಿಸಿದರು.

bengaluru bengaluru

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸ್ವತಃ ನಾನು ವರ್ಷದಲ್ಲಿ ಎರಡು ಸಲವಾದರೂ ಶ್ರೀಶೈಲ ಕ್ಷೇತ್ರಕ್ಕೆ ಹೋಗಿ, ಶ್ರೀಗಳ ಆಶ್ರಯದಲ್ಲಿ ಇದ್ದುಬರುತ್ತೇನೆ. ಇದರಿಂದ ನನಗೆ ಅವರ ಮಾರ್ಗದರ್ಶನ, ಪ್ರೋತ್ಸಾಹ, ಪ್ರೇರಣೆಗಳ ಕೃಪೆ ಸಿಗುತ್ತಿದೆ. ಅವರು ಮಾಡುವ ಒಳ್ಳೆಯ ಕೆಲಸಗಳಿಗೆ ಸರಕಾರದ ಬೆಂಬಲವೂ ಇರಲಿದೆ” ಎಂದರು.

ನಮ್ಮ ಮಠಮಾನ್ಯಗಳು ಮಾಡುತ್ತಿರುವ ಕೆಲಸಗಳು ಉಳಿದ ಧರ್ಮಗಳ ಸಂಸ್ಥೆಗಳಿಗೆ ಮಾದರಿಯಾಗಿವೆ. ಈ ಮೂಲಕ ಸುಸಂಸ್ಕೃತ ಮತ್ತು ಮೌಲ್ಯಾಧಾರಿತ ಸಮಾಜವನ್ನು ಕಟ್ಟುವ ಕೆಲಸ ನಡೆಯುತ್ತಿದೆ. ಶ್ರೀಗಳು ತೋರುತ್ತಿರುವ ಹಾದಿಯಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಯಾವುದೇ ಸಂದರ್ಭದಲ್ಲೂ ಗುರುಗಳ ಆಶೀರ್ವಾದ ಎಲ್ಲರಿಗೂ ಸಿಗುತ್ತಿರಬೇಕು. ಇದರಿಂದ ಬದುಕಿನಲ್ಲಿ ಮಹತ್ತ್ವವಾದುದನ್ನು ಸಾಧಿಸುವ ಶಕ್ತಿ ಬರಲಿದೆ. ಇದರ ಜತೆಗೆ ಅವರ ಕೃಪೆಯಿಂದ ವಿನೀತ ಪ್ರಜ್ಞೆ ಬಂದು, ಧನ್ಯತೆಯ ಭಾವನೆ ಲಭ್ಯವಾಗಲಿದೆ ಎಂದು ಸಚಿವರು ಬಣ್ಣಿಸಿದರು.


bengaluru

LEAVE A REPLY

Please enter your comment!
Please enter your name here