Home Uncategorized ತೆಗೆದುಕೊಂಡು ತಪ್ಪು ನಿರ್ಧಾರದಿಂದ ಶ್ರೀಲೀಲಾಗೆ ಹಿನ್ನಡೆ; ಮಹೇಶ್ ಬಾಬು ಸಿನಿಮಾ ಒಪ್ಪಿಕೊಂಡಿದ್ದೇ ತಪ್ಪಾಯ್ತಾ?

ತೆಗೆದುಕೊಂಡು ತಪ್ಪು ನಿರ್ಧಾರದಿಂದ ಶ್ರೀಲೀಲಾಗೆ ಹಿನ್ನಡೆ; ಮಹೇಶ್ ಬಾಬು ಸಿನಿಮಾ ಒಪ್ಪಿಕೊಂಡಿದ್ದೇ ತಪ್ಪಾಯ್ತಾ?

27
0

ನಟಿ ಶ್ರೀಲೀಲಾ (Sreeleela) ಅವರು ಕನ್ನಡದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಇದರ ಜತೆಗೆ ಅವರು ಟಾಲಿವುಡ್​ನಲ್ಲೂ (Tollywood) ಬೇಡಿಕೆ ಸೃಷ್ಟಿ ಮಾಡಿಕೊಂಡಿದ್ದಾರೆ. ಅನೇಕ ಸ್ಟಾರ್ ಹೀರೋಯಿನ್​ಗಳಿಗೆ ಸರಿಸಾಟಿಯಾಗಿ ಈ ನಟಿ ಬೆಳೆದು ನಿಲ್ಲಲಿದ್ದಾರೆ ಅನ್ನೋದು ಅನೇಕರ ಊಹೆ. ಸದ್ಯ ಶ್ರೀಲೀಲಾ ಒಂದು ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ಅವರ ವೃತ್ತಿ ಜೀವನಕ್ಕೆ ಹಿನ್ನಡೆ ಆಗುವ ಸೂಚನೆ ಸಿಕ್ಕಿದೆ.

ಮಹೇಶ್ ಬಾಬು ನಟನೆಯ 28ನೇ ಚಿತ್ರಕ್ಕೆ ತ್ರಿವಿಕ್ರಂ ಶ್ರೀನಿವಾಸ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ. ಮಹೇಶ್ ಬಾಬು ಪಾಲಕರನ್ನು ಕಳೆದುಕೊಂಡಿದ್ದು, ಪೂಜಾ ಹೆಗ್ಡೆ ಕಾಲಿಗೆ ಪೆಟ್ಟಾಗಿದ್ದರಿಂದ ಈ ಸಿನಿಮಾದ ಕೆಲಸಗಳು ವಿಳಂಬ ಆದವು. ಶೀಘ್ರದಲ್ಲೇ ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದೆ. ಈ ಚಿತ್ರಕ್ಕೆ ಎರಡನೇ ನಾಯಕಿಯ ಆಯ್ಕೆಯಲ್ಲಿ ಚಿತ್ರತಂಡ ತೊಡಗಿತ್ತು. ಈಗ ಮಹೇಶ್ ಬಾಬು ಚಿತ್ರಕ್ಕೆ ಎರಡನೇ ನಾಯಕಿಯಾಗಿ ಶ್ರೀಲೀಲಾ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

ಟಾಲಿವುಡ್​ನ ಅವರ ಮೊದಲ ಸಿನಿಮಾ ‘ಪೆಳ್ಳಿಸಂದಡಿ’ ಸಿನಿಮಾ ಫ್ಲಾಪ್ ಆಯಿತು. ಆದರೆ, ಶ್ರೀಲೀಲಾ ಅವರು ತಮ್ಮ ಗ್ಲಾಮರ್​ನಿಂದ ಎಲ್ಲರ ಗಮನ ಸೆಳೆದರು. ಈ ಕಾರಣಕ್ಕೆ ಅವರಿಗೆ ಅನೇಕ ಆಫರ್​ಗಳು ಹರಿದು ಬಂದವು. ಹಲವು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ರವಿತೇಜ ನಟನೆಯ ‘ಧಮಾಕಾ’ ಮೊದಲಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಈಗ ಅವರು ಏಕಾಏಕಿ ಎರಡನೇ ನಾಯಕಿ ಆಗಿದ್ದಾರೆ.

ಬೇಡಿಕೆಯಲ್ಲಿರುವಾಗ ಸಾಮಾನ್ಯವಾಗಿ ಯಾರೂ ಎರಡನೇ ಹೀರೋಯಿನ್​ ಆಗೋಕೆ ಇಷ್ಟಪಡುವುದಿಲ್ಲ. ಆದರೆ, ಶ್ರೀಲೀಲಾ ಹೀಗೊಂದು ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ಅವರ ವೃತ್ತಿ ಜೀವನಕ್ಕೆ ಹಿನ್ನಡೆ ಆಗಬಹುದು ಎನ್ನಲಾಗುತ್ತಿದೆ. ತ್ರಿವಿಕ್ರಂ ಶ್ರೀನಿವಾಸ್ ಚಿತ್ರಗಳನ್ನು ಗಮನಿಸಿದರೆ ಎರಡನೇ ಹೀರೋಯಿನ್​ಗಳಿಗೆ ಅಲ್ಲಿ ಅಷ್ಟು ಪ್ರಾಮುಖ್ಯತೆ ಇರುವುದಿಲ್ಲ. ಮಹೇಶ್ ಬಾಬು-ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾದಲ್ಲೂ ಅದೇ ರೀತಿ ಆಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Sreeleela: ಅಲ್ಲು ಅರ್ಜುನ್​ ಜತೆ ತೆರೆ ಹಂಚಿಕೊಂಡ ಶ್ರೀಲೀಲಾ; ಇಲ್ಲಿದೆ ಇಂಟರೆಸ್ಟಿಂಗ್​ ಅಪ್​ಡೇಟ್​

ತ್ರಿವಿಕ್ರಂ ಶ್ರೀನಿವಾಸ್ ಸಿನಿಮಾದಲ್ಲಿ ಎರಡನೇ ಹೀರೋಯಿನ್​ಗೂ ಒಂದು ಸಾಂಗ್ ಹಾಗೂ ಒಂದಷ್ಟು ದೃಶ್ಯಗಳಲ್ಲಿ ಕಾಣಿಸಿಕೊಳ್ಳಲು ಅವಕಾಶ ಸಿಗುತ್ತದೆ. ಇದರಲ್ಲಿ ಶ್ರೀಲೀಲಾ ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here