Home Uncategorized ಮನಸ್ಸಿಗೆ ಬೇಜಾರಾಯ್ತು ಎಂದು ಮನೆಕಳ್ಳತನ ಮಾಡುತ್ತಿದ್ದವನು ಈಗ ಪೊಲೀಸರ ಅತಿಥಿ

ಮನಸ್ಸಿಗೆ ಬೇಜಾರಾಯ್ತು ಎಂದು ಮನೆಕಳ್ಳತನ ಮಾಡುತ್ತಿದ್ದವನು ಈಗ ಪೊಲೀಸರ ಅತಿಥಿ

9
0

ಬೆಂಗಳೂರು: ಕುಖ್ಯಾತ ಮನೆಕಳ್ಳ ಮಂಜುನಾಥ್ ಅಲಿಯಾಸ್ ಮೂರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ನೋಡುಗರ ದೃಷ್ಟಿಯಲ್ಲಿ ಮುಸುಕಿನ ಜೋಳ ವ್ಯಾಪಾರ ಮಾಡುತ್ತಿದ್ದ ಕಳ್ಳ ಮಂಜುನಾಥ್​ ಬೇಜಾರ್ ಆದಾಗ ಮನೆ ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡಬೇಕು ಎಂದು ಮನಸ್ಸು ಮಾಡಿದರೆ ಐದಾರು ಕಿಲೋ ಮೀಟರ್ ವಾಕಿಂಗ್ ಮಾಡುವ ವೇಳೆಯಲ್ಲಿ ಮನೆಗಳನ್ನು ಹುಡುಕಿ ಕಳ್ಳತನಕ್ಕೆ ಸ್ಕೆಚ್ ಹಾಕಿ ಮನೆಗೆ ಸೈಲೆಂಟಾಗಿ ಎಂಟ್ರಿ ಕೊಡುತ್ತಿದ್ದ. ಬಳಿಕ ಕದ್ದ ಮಾಲ್​ನೊಂದಿಗೆ ಯಾರಿಗೂ ಅನುಮಾನ ಬರದಂತೆ ಹೊರ ಹೋಗುತ್ತಿದ್ದ. ನಡೆದು ಹೋಗ್ತಿದ್ದವನ ಬಂಧನಕ್ಕಾಗಿ 50 ಕ್ಕೂ ಹೆಚ್ಚು ಸಿಸಿಟಿವಿಯನ್ನು ಪೊಲೀಸರು ಜಾಲಾಡಿದ್ದಾರೆ. ಮುಖದ ಮೇಲಿನ ಮಾರ್ಕ್​ನ ಆಧಾರದ ಮೇಲೆ ಮಾಗಡಿ ರಸ್ತೆಯಲ್ಲಿ ಆರೋಪಿಯನ್ನು ಬಂಧಸಿದ್ದಾರೆ.

ಸುಮಾರು 20 ಮನೆಕಳ್ಳತನ ಮಾಡಿದ್ದ ಆರೋಪಿ ಮಂಜುನಾಥ್ ಅಲಿಯಾಸ್ ಮೂರ್ತಿ ಮಾಗಡಿ ರೋಡ್​ನಲ್ಲಿ ಮನೆಯೊಂದಕ್ಕೆ ಕನ್ನ ಹಾಕಿದ್ದ, ಕೈಗೆ ಸಿಕ್ಕಿದ ಡಂಬಲ್ಸ್ ಇಂದ ಮನೆಯ ಬೀಗ ಒಡೆದಿದ್ದ ಮೂರ್ತಿ, ಡಂಬಲ್ಸ್ ಮೇಲೆ ಫಿಂಗರ್ ಪ್ರಿಂಟ್ ಉಳಿದು ಬಿಡುತ್ತದೆ, ಎಂದು ಡಂಬಲ್ಸ್​ನ್ನು ಹೆಗಲ ಮೇಲೆ ಹಾಕಿಕೊಂಡು ತಂದಿದ್ದ ಕಳ್ಳ. ಶ್ರೀರಾಮಪುರದಲ್ಲಿ ಅನುಮಾನ ಬರದಂತೆ ತಿರುಗಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಪೊಲೀಸರು ಆತನಿಂದ 6.50 ಲಕ್ಷ ರೂ. ಮೌಲ್ಯದ 131 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ತುಮಕೂರು ಅನೈತಿಕ ಸಂಬಂಧಕ್ಕೆ ಪತ್ನಿಯಿಂದಲೇ ಪತಿಗೆ ಸುಫಾರಿ ನೀಡಿ

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಪತ್ನಿ ವೆಂಕಟಲಕ್ಷ್ಮಮ್ಮ ಅನೈತಿಕ ಸಂಬಂಧಕ್ಕಾಗಿ ಹಾಗೂ ಪತಿಯಿಂದ ಟಾರ್ಚರ್ ಹಿನ್ನಲೆ ಪ್ರೀಯಕರನಿಗೆ ಸುಫಾರಿ ಕೊಟ್ಟು ಪತಿ ಸುರೇಶ್​ನನ್ನು ಕೊಲೆ ಮಾಡಿದ್ದ ವೆಂಕಟಲಕ್ಷ್ಮಮ್ಮ ಹಾಗೂ ಆರೋಪಿ ಲೋಕೇಶ್ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಇನ್ನೂ ಕೆಲ ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ಮಾಡಲಾಗುತ್ತಿದೆ.

ಇನ್ನು ಪತಿಯನ್ನು ಕೊಲೆ‌ ಮಾಡಿ ಜಮೀನುವೊಂದರಲ್ಲಿ ಹೂತಿಟ್ಟಿದ್ದು, ಕೊರಟಗೆರೆ ತಹಶಿಲ್ದಾರ್​ ಹಾಗೂ ಮಧುಗಿರಿ ಎಸಿ ರಿಷಿ ನೇತೃತ್ವದಲ್ಲಿ ಇಂದು(ಡಿ.2) ಹೂತಿಟ್ಟಿರುವ ಮೃತದೇಹ‌ ಹೊರತೆಗೆಸಿ ಶವಪರೀಕ್ಷೆ ನಡೆಸಲಿರುವ ಪೊಲೀಸರು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ವೃದ್ಧ ದಂಪತಿಯ ಬರ್ಬರ ಕೊಲೆ

ಚಿತ್ರದುರ್ಗ: ಹೊಸದುರ್ಗದ ವಿನಾಯಕ‌ ಬಡಾವಣೆಯ ಮನೆಯಲ್ಲಿ ವಾಸವಿದ್ದ ವೃದ್ಧ ದಂಪತಿಗಳಾದ ಪತಿ ಪ್ರಭಾಕರ ಶೆಟ್ರು(75), ಪತ್ನಿ ವಿಜಯಲಕ್ಷ್ಮೀ(65) ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಕತ್ತು ಕೊಯ್ದು ಕೊಲೆ ಮಾಡಿ ಪರಾರಿ ಆಗಿದ್ದಾರೆ. ವೃದ್ಧ ದಂಪತಿಯ ಕೊಲೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ, ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹಾಲು, ತುಪ್ಪದ ಬೆಲೆ ಏರಿಕೆ ನಂತರ ತತ್ತರಿಸಿದ ಬೆಂಗಳೂರು ಹೊಟೆಲ್, ಬೇಕರಿ ಉದ್ಯಮ

ಮಹಾಲಕ್ಷ್ಮಿ ಲೇಔಟ್​ನಲ್ಲಿ ಬಾಲಕರಿಬ್ಬರಿಗೆ ವಿದ್ಯುತ್ ತಂತಿ ತಗುಲಿ ಅಸ್ವಸ್ಥರಾಗಿದ್ದಾರೆ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್​ನಲ್ಲಿ ಬಾಲಕರಿಬ್ಬರಿಗೆ ವಿದ್ಯುತ್ ತಂತಿ ತಗುಲಿ ಬಾಲಕ ಸುಪ್ರೀತ್​ಗೆ 80% ರಷ್ಟು ಸುಟ್ಟಗಾಯಗಳಾಗಿದ್ದು, ಮತ್ತೊರ್ವ ಬಾಲಕ ಚಂದ್ರುಗೆ 65% ರಿಂದ 70% ಸುಟ್ಟ ಗಾಯಗಳಿಂದ ಬಳಲುತ್ತಿದ್ದಾನೆ.
ಬಾಲಕರಿಬ್ಬರೂ ಮಾತನಾಡುತ್ತಿದ್ದು ಮುಖ, ತಲೆಯನ್ನು ಹೊರತುಪಡಿಸಿ ದೇಹದ ಎಲ್ಲಾ ಭಾಗ ಸುಟ್ಟು ಹೋಗಿದೆ
ಅದರೆ ಮಕ್ಕಳಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬಾಲಕರಿಬ್ಬರಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿ‌ಯ ಬಂಧನ

ರಾಮನಗರ: ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಕನಕಪುರ ತಾಲೂಕಿನ ಗಟ್ಟಿಗುಂದ ಗ್ರಾಮದ ನಿವಾಸಿ ಗೋಪಾಲ ನಾಯ್ಕ್(28) ಎಂಬಾತನನ್ನು ಬಂಧಿಸಿದ ರಾಮನಗರ ಗ್ರಾಮಾಂತರ ಪೊಲೀಸರು, ಬಂಧಿತನಿಂದ 5 ದ್ವಿಚಕ್ರ ವಾಹನಗಳು ಜಪ್ತಿ ಮಾಡಲಾಗಿದ್ದು ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

LEAVE A REPLY

Please enter your comment!
Please enter your name here