Home Uncategorized ತೆರಿಗೆ ಸಂಗ್ರಹ ಹೆಚ್ಚಿಸಲು ಆಸ್ತಿಗಳ ಮರು ಸಮೀಕ್ಷೆ: ನಾಗರಿಕರ ಅನುಕೂಲಕ್ಕಾಗಿ 'ನನ್ನ ಸ್ವತ್ತು' ಕಾರ್ಯಕ್ರಮ; ಡಿ.ಕೆ...

ತೆರಿಗೆ ಸಂಗ್ರಹ ಹೆಚ್ಚಿಸಲು ಆಸ್ತಿಗಳ ಮರು ಸಮೀಕ್ಷೆ: ನಾಗರಿಕರ ಅನುಕೂಲಕ್ಕಾಗಿ 'ನನ್ನ ಸ್ವತ್ತು' ಕಾರ್ಯಕ್ರಮ; ಡಿ.ಕೆ ಶಿವಕುಮಾರ್

0
0

ರಾಜ್ಯ ಸರಕಾರಕ್ಕೆ ಆಸ್ತಿ ತೆರಿಗೆ ದರ ಏರಿಸುವ ಉದ್ದೇಶವಿಲ್ಲ. ಆದರೆ, ನಗರದ ಶೇ. 50 ಜನ ಮಾತ್ರ ತೆರಿಗೆ ಪಾವತಿಸುತ್ತಿದ್ದು, ಉಳಿದವರು ಕಟ್ಟುತ್ತಿಲ್ಲ. ಕೆಲವೆಡೆ ಆಸ್ತಿ ಮಾಲೀಕರು ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಮರು ಸಮೀಕ್ಷೆ ಅನಿವಾರ್ಯವಾಗಿದೆ. ಬೆಂಗಳೂರು: ನಗರದಲ್ಲಿ ಆಸ್ತಿ ತೆರಿಗೆ ಹೆಚ್ಚಿಸುವ ಯಾವುದೇ ಯೋಜನೆ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಹೇಳಿದ್ದಾರೆ. ಆದರೆ ಆದಾಯವನ್ನು ಮೂರು ಪಟ್ಟು ಹೆಚ್ಚಿಸಲು ಸಹಾಯ ಮಾಡಲು ತೆರಿಗೆ ಸಂಗ್ರಹವನ್ನು ಸರಳೀಕರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸೋಮವಾರ ನಡೆದ ‘ಬ್ರ್ಯಾಂಡ್‌ ಬೆಂಗಳೂರು’ ಸಮ್ಮೇಳನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಸಂಪನ್ಮೂಲ ಸಂಗ್ರಹ ಹೆಚ್ಚಿಸುವ ಸಲುವಾಗಿ ನಗರದಲ್ಲಿನ ಆಸ್ತಿಗಳ ಮರು ಸಮೀಕ್ಷೆ ನಡೆಸಿ, ಡಿಜಿಟಲೀಕರಣಗೊಳಿಸಲಾಗುವುದು ಎಂದರು.

ರಾಜ್ಯ ಸರಕಾರಕ್ಕೆ ಆಸ್ತಿ ತೆರಿಗೆ ದರ ಏರಿಸುವ ಉದ್ದೇಶವಿಲ್ಲ. ಆದರೆ, ನಗರದ ಶೇ. 50 ಜನ ಮಾತ್ರ ತೆರಿಗೆ ಪಾವತಿಸುತ್ತಿದ್ದು, ಉಳಿದವರು ಕಟ್ಟುತ್ತಿಲ್ಲ. ಕೆಲವೆಡೆ ಆಸ್ತಿ ಮಾಲೀಕರು ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಮರು ಸಮೀಕ್ಷೆ ಅನಿವಾರ್ಯವಾಗಿದೆ. ಸಮೀಕ್ಷೆ ಬಳಿಕ ಸಮರ್ಪಕ ತೆರಿಗೆ ವಸೂಲಾತಿ ಆದಲ್ಲಿ ಪ್ರಸ್ತುತದ ತೆರಿಗೆ ಪ್ರಮಾಣದಲ್ಲಿ ಎರಡು-ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು  ಶಿವಕುಮಾರ್‌ ತಿಳಿಸಿದರು.

ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭ: ಡಿಕೆ.ಶಿವಕುಮಾರ್

ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ನಾಗರಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ‘ನನ್ನ ಸ್ವತ್ತು’ ಎಂಬ ಕಾರ್ಯಕ್ರಮ ಅನುಷ್ಠಾನಗೊಳಿಸುವ ಜತೆಗೆ ಸ್ವಯಂಚಾಲಿತ ನಕ್ಷೆ ಅನುಮೋದನೆಗೆ ಚಾಲನೆ ನೀಡಲು ಚಿಂತನೆ ನಡೆದಿದೆ. ಇದರಿಂದ ನಾಗರಿಕರು ಸರಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಲಿದೆ,ಎಂದು ತಿಳಿಸಿದರು.

ಸ್ವಯಂಚಾಲಿತ ನಕ್ಷೆ ಮಂಜೂರು ‘ನಾಗರಿಕರು ಮನೆ ನಿರ್ಮಾಣಕ್ಕೆ ಕಟ್ಟಡ ನಕ್ಷೆ ಪಡೆಯಲು ಬಿಬಿಎಂಪಿ ಕಚೇರಿಗೆ ಅಲೆಯಬೇಕಾಗಿಲ್ಲ. ಇದಕ್ಕಾಗಿ ಸ್ವಯಂಚಾಲಿತ ನಕ್ಷೆ ಮಂಜೂರು ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಲ್ಲಿ ಪಾಲಿಕೆಯಿಂದ ಪರವಾನಗಿ ಪಡೆದ ಆರ್ಕಿಟೆಕ್ಟ್‌ನಿಂದ ನಕ್ಷೆ ಅಪ್‌ಲೋಡ್‌ ಮಾಡಿಸಿದರೆ ಎಲ್ಲವೂ ಆನ್‌ಲೈನ್‌ನಲ್ಲೇ ಪರಿಶೀಲನೆಗೊಂಡು ಅನುಮೋದನೆಯಾಗುತ್ತದೆ’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು. ನಗರದಲ್ಲಿ 50×80 ಅಡಿಗಳವರೆಗಿನ ನಿವೇಶನಗಳಿಗೆ ಈ ಯೋಜನೆಯಲ್ಲಿ ಅನುಮೋದನೆ ನೀಡಲಾಗುತ್ತದೆ ಎಂದರು. ಉದ್ಯಾನ ಆಟದ ಮೈದಾನಗಳ ನಿರ್ವಹಣೆಗೆ ಸ್ಥಳೀಯ ನಾಗರಿಕರ ‘ರಾಜಕೀಯೇತರ ಸಾರ್ವಜನಿಕ ಸಮಿತಿ’ ರಚಿಸಲಾಗುತ್ತದೆ. ಒಬ್ಬ ನೋಡಲ್‌ ಅಧಿಕಾರಿಯನ್ನು ನೇಮಿಸಿ ಸಿಎಸ್‌ಆರ್‌ ನಿಧಿಯಿಂದ ಅಭಿವೃದ್ಧಿ ಕೆಲಸಗಳನ್ನೂ ಈ ಸಮಿತಿ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು: 8 ವಿಷಯಗಳ ಕುರಿತು ಸಿದ್ದಪಡಿಸಿರುವ ವರದಿಯನ್ನು ಕೂಡಲೇ ಸಲ್ಲಿಸಿ; ಅಧಿಕಾರಿಗಳಿಗೆ ಬಿಬಿಎಂಪಿ ಸೂಚನೆ

ತೆರಿಗೆ ಸಂಗ್ರಹವನ್ನು ಹೆಚ್ಚಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. “ತೆರಿಗೆ ಸಂಗ್ರಹ ಮತ್ತು ಟ್ರಾಫಿಕ್ ಮತ್ತು ಕಸ ನಿರ್ವಹಣೆಯನ್ನು ಸುಧಾರಿಸುವುದು ನನ್ನ ಆದ್ಯತೆಯಾಗಿದೆ” ಎಂದು ಅವರು ಹೇಳಿದರು.

ಜನರ ಸಮಸ್ಯೆಗಳನ್ನು ಪರಿಹರಿಸಲು ‘ಸಹಾಯಹಸ್ತ’ ಎಂಬ ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅವರ ಸಮಸ್ಯೆಗಳಿಗೆ ವೆಬ್‌ಸೈಟ್ ಮೂಲಕ ನೇರವಾಗಿ ಪರಿಹಾರ ನೀಡಲಿದ್ದಾರೆ. ಬ್ರಾಂಡ್ ಬೆಂಗಳೂರು ಪರಿಕಲ್ಪನೆಯಡಿ ರಚಿಸಲಾದ ಎಂಟು ಸಮಿತಿಗಳು – ಸಾರಿಗೆ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಛ ಬೆಂಗಳೂರು, ಜನಸ್ನೇಹಿ ಬೆಂಗಳೂರು, ಆರೋಗ್ಯಕರ ಬೆಂಗಳೂರು, ಟೆಕ್ ಬೆಂಗಳೂರು, ವಾಟರ್ ಸೇಫ್ ಬೆಂಗಳೂರು ಮತ್ತು ಶೈಕ್ಷಣಿಕ ಬೆಂಗಳೂರು – ತಮ್ಮ ಸಂಶೋಧನೆಗಳನ್ನು ಉಪಮುಖ್ಯಮಂತ್ರಿಗಳಿಗೆ ಸಲ್ಲಿಸಿವೆ. ಶೀಘ್ರವೇ ಸಮಗ್ರ ವರದಿ ಸಲ್ಲಿಸಲಾಗುವುದು. ಬ್ರಾಂಡ್ ಬೆಂಗಳೂರು ಮತ್ತು ಬೆಟರ್ ಬೆಂಗಳೂರಿಗೆ ನೀಲನಕ್ಷೆಯನ್ನು ಸಹ ಸಿದ್ಧಪಡಿಸಲಾಗುವುದು ಎಂದರು.

LEAVE A REPLY

Please enter your comment!
Please enter your name here